VIDEO: ನಿಕ್ ಗೆ KISS ನೀಡಿದ ಪ್ರಿಯಾಂಕಾ ಮುಂದೆ ಮಾಡಿದ್ದೇನು?

Golden Globes Award ಕಾರ್ಯಕ್ರಮದ ವಿಡಿಯೋವೊಂದು ಸದ್ಯ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಪ್ರಿಯಾಂಕಾ ಮತ್ತು ನಿಕ್ ಪರಸ್ಪರ ಮುತ್ತಿಕ್ಕಿದ್ದಾರೆ. ಆ ಬಳಿಕ ಪ್ರಿಯಾಂಕಾ ನಿಕ್ ಅವರ ತುಟಿಗಳ ಮೇಲಿನ ಲಿಪ್ಸ್ಟಿಕ್ ಕಲೆಯನ್ನು ತೆಗೆದುಹಾಕುತ್ತಿರುವುದು ಕಂಡುಬಂದಿದೆ. ಈ ಇಬ್ಬರು ಪರಸ್ಪರರ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತಾರೆ ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.

Last Updated : Jan 7, 2020, 01:00 PM IST
VIDEO: ನಿಕ್ ಗೆ KISS ನೀಡಿದ ಪ್ರಿಯಾಂಕಾ ಮುಂದೆ ಮಾಡಿದ್ದೇನು? title=

ನವದೆಹಲಿ:ಖ್ಯಾತ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ನಟ, ಗಾಯಕ ನಿಕ್ ಜೋನಾಸ್ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದರ ಅದರ ಚರ್ಚೆಯಾಗುವುದು ಸಹಜ. ಯಾವುದೇ ಕಾರ್ಯಕ್ರಮವಿರಲಿ ಅಥವಾ ಸಾಮಾಜಿಕ ಮಾಧ್ಯಮವಿರಲಿ ಈ ಇಬ್ಬರ ನಡುವಿನ ಪ್ರೀತಿ ಅವರು ಹಂಚಿಕೊಳ್ಳುವ ಫೋಟೋಗಳಲ್ಲಿ ನಿಶ್ಚಿತ ಕಂಡುಬರುತ್ತದೆ. ಮದುವೆಯಾಗಿ ಒಂದು ವರ್ಷ ಕಳೆದರೂ ಕೂಡ ಇಂದಿಗೂ ಕೂಡ ಈ ಉಭಯರ ದೃಷ್ಟಿ ಪರಸ್ಪರರ ಮೇಲಿರುತ್ತದೆ. ಅವರ ಮಧ್ಯೆ ಇರುವ ಈ ಪ್ರೀತಿಯೇ ಈ ಇಬ್ಬರ ಅಭಿಮಾನಿಗಳನ್ನು ಇವರತ್ತ ಸೆಳೆಯುತ್ತದೆ. ಇದೇ ಕಾರಣದಿಂದ ಈ ಇಬ್ಬರೂ ಕೂಡ ತಮ್ಮ ಛಾಯಾಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇತ್ತೀಚೆಗೆ ಅಮೆರಿಕಾದ ಲಾಸ್ ಏಂಜಲಿಸ್ನಲ್ಲಿ ನಡೆದ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ 2020 ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಹಾಗೂ ನಿಕ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಿಯಾಂಕಾ ಪಿಕ್ ಬಣ್ಣದ ಉಡುಗೆ ಹಾಗೂ ಡೈಮಂಡ್ ನೆಕ್ಲೆಸ್ ಧರಿಸಿದ್ದರು. ಇನ್ನೊಂದೆಡೆ ನಿಕ್ ಜೋನಾಸ್ ಕೂಡ ಕಪ್ಪು ಬಣ್ಣದ ಸೂಟ್ ನಲ್ಲಿ ತುಂಬಾ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ವಿಡಿಯೋವೊಂದು ಸದ್ಯ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಪ್ರಿಯಾಂಕಾ ಮತ್ತು ನಿಕ್ ಪರಸ್ಪರ ಮುತ್ತಿಕ್ಕಿದ್ದಾರೆ. ಆ ಬಳಿಕ ಪ್ರಿಯಾಂಕಾ ನಿಕ್ ಅವರ ತುಟಿಗಳ ಮೇಲಿನ ಲಿಪ್ಸ್ಟಿಕ್ ಕಲೆಯನ್ನು ತೆಗೆದುಹಾಕುತ್ತಿರುವುದು ಕಂಡುಬಂದಿದೆ. ಈ ಇಬ್ಬರು ಪರಸ್ಪರರ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತಾರೆ ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಪ್ರಿಯಾಂಕಾ ಹಾಗೂ ನಿಕ್ ಅವರ ನಡುವಿನ ಪ್ರೀತಿಯ ಸಾಕ್ಷಿಯಾಗಿರುವ ಈ ವಿಡಿಯೋ ನೋಡಿರುವ ಅವರ ಅಭಿಮಾನಿಗಳು ಜಬರ್ದಸ್ತ್ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

 
 
 
 

 
 
 
 
 
 
 
 
 

AWWWW 😭😍💋#goldenglobes ☆ ☆ ☆ ☆ #Niyanka#niyankaforever#priyankachopra #priyankachoprajonas #nickjonas #priyankaandnick #selfies #magazine #photoshoot #kevinjonas #joejonas #sophieturner #daniellejonas #family #jonasbrothers #nickyanka #prick #hollywood #bollywood #india #actor #actress #singer #tsip #theskyispink #TSIP #missworld #missworld2000

A post shared by Priyanka Chopra Malaysia FC (@priyankachopra.malaysia) on

ಇದಕ್ಕೂ ಮೊದಲು ಹೊಸ ವರ್ಷದ ಆರಂಭದಲ್ಲಿ ಪ್ರಿಯಾಂಕಾ ಹಾಗೂ ನಿಕ್ ತುಂಬಾ ರೋಮ್ಯಾಂಟಿಕ್ ಅವತಾರದಲ್ಲಿ ಕಂಡುಬಂದಿದ್ದರು. ಹೊಸ ವರ್ಷಾಚರಣೆಗಾಗಿ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದ ಈ ಉಭಯರು ಪರಸ್ಪರ ಮುತ್ತು ನೀಡಿ ಶುಭಾಷಯಗಳನ್ನು ಹಂಚಿಕೊಂಡಿದ್ದರು. ಡಿಸೆಂಬರ್ 1, 1918ರಂದು ಈ ಇಬ್ಬರು ಹಸೆಮಣೆ ಏರಿದ್ದರು. ಮದುವೆಯಾಗಿ ಒಂದು ವರ್ಷ ಪೂರೈಸಿದ ಈ ಜೋಡಿಗೆ ಅಭಿಮಾನಿಗಳು ಹಾಗೂ ಇತರೆ ಸೆಲಿಬ್ರಿಟಿಗಳು ಶುಭಾಷಯಗಳನ್ನು ಸಹ ಕೋರಿದ್ದರು.

 
 
 
 

 
 
 
 
 
 
 
 
 

My focus only my NP babies 😍😍 #PriyankaChopra #NickJonas

A post shared by NP LEGACY (@nplegacy1) on

ಈ ಉಭಯತ್ರಯರ ವರ್ಕ್ ಫ್ರಂಟ್ ಕುರಿತು ಮಾತನಾಡುವುದಾದರೆ, ಇತ್ತೀಚೆಗಷ್ಟೇ ಬಿಡುಗಡೆಗೊಂಡ ' ದಿ ಸ್ಕೈ ಇಸ್ ಪಿಂಕ್' ಚಿತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಫರ್ಹಾನ್ ಅಖ್ತರ್ ಹಾಗೂ ಜಾಯರಾ ವಸೀಮ್ ಅವರೂ ಕೂಡ ಮುಖ್ಯ ಭೂಮಿಕೆಯಲ್ಲಿ ಕಂಡುಬಂದಿದ್ದರು. ಆದರೆ, ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ನೆಲಕಚ್ಚಿತ್ತು. ಶೀಘ್ರದಲ್ಲಿಯೇ ಪ್ರಿಯಾಂಕಾ ಅವರು ರಾಜ್ ಕುಮಾರ್ ರಾವ್ ಅಭಿನಯದ 'ದ ವೈಟ್ ಟೈಗರ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಅತ್ತ ನಿಕ್ ಜೊನಾಸ್ ಕೂಡ ಇತ್ತೀಚೆಗಷ್ಟೇ ಬಿಡುಗಡೆಗೊಂಡ 'ಜುಮಾಂಜಿ:ದ ಎಂಡ್ ಗೇಮ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಹೊರತುಪಡಿಸಿದರೆ ನಿಕ್ ಹಲವಾರು ಸ್ಟೇಜ್ ಪರ್ಫಾಮೆನ್ಸ್ ನೀಡುವುದರಲ್ಲಿ ಬಿಜಿ ಆಗಿರುತ್ತಾರೆ.

Trending News