ಸ್ಯಾಂಡಲ್ ವುಡ್'ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ತಮ್ಮ 43ನೇ ಹುಟ್ಟುಹಬ್ಬದ ಸಂತಸದಲ್ಲಿದ್ದಾರೆ. ಚಂದನವನ ಇವರನ್ನು ಅಪ್ಪು ಎಂದೇ ಕರೆಯುತ್ತದೆ. ಅಪ್ಪು ಚಿತ್ರ ನಟ ಮಾತ್ರವಲ್ಲ. ಅದ್ಭುತ ಗಾಯಕ, ನಿರೂಪಕ ಕೂಡ ಹೌದು. ಇವರು 1975ರ ಮಾರ್ಚ್ 17ರಂದು ತಮಿಳುನಾಡಿನಲ್ಲಿ ಜನಿಸಿದರು. ನಟನಾಗಿ ಇದುವರೆಗೂ 26 ಚಿತ್ರಗಳಲ್ಲಿ ಅಭಿನಯಿಸಿರುವ ಪುನೀತ್ ಬಾಲ್ಯದಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1985ರಲ್ಲಿ ಬಿಡುಗಡೆಗೊಂಡ ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಸಹ ಅಪ್ಪು ಪಾತ್ರರಾದರು.
ಅವರ ಜನ್ಮ ದಿನದ ಈ ಸಂತಸದಲ್ಲಿ ಬಾಲಕನಾಗಿ ಅಪ್ಪು ಹಾಡಿದ ಕೆಲವು ಗೀತೆಗಳನ್ನು ಕೇಳಿ...
* 1981ರಲ್ಲಿ ಬಿಡುಗಡೆಗೊಂಡ 'ಭಾಗ್ಯವಂತ' ಚಿತ್ರದ "ಬಾಣ ದಾರಿಯಲ್ಲಿ ಸೂರ್ಯ"
* 1982ರಲ್ಲಿ ಬಿಡುಗಡೆಗೊಂಡ 'ಚಲಿಸುವ ಮೋಡಗಳು' ಚಿತ್ರದ "ಕಾಣದಂತೆ ಮಾಯವಾದನು"
* 1983ರಲ್ಲಿ ಬಿಡುಗಡೆಗೊಂಡ 'ಭಕ್ತ ಪ್ರಹಲ್ಲಾದ' ಚಿತ್ರದ "ಗೋವಿಂದ ಗೋವಿಂದ"
* 1983ರಲ್ಲಿ ಬಿಡುಗಡೆಗೊಂಡ 'ಎರಡು ನಕ್ಷತ್ರಗಳು' ಚಿತ್ರದ "ನನ್ನ ಉಡುಪು ನಿನ್ನದು"
* 1984ರಲ್ಲಿ ಬಿಡುಗಡೆಗೊಂಡ 'ಯಾರಿವನು' ಚಿತ್ರದ "ಕಣ್ಣಿಗೆ ಕಾಣುವ ದೇವರು ಎಂದರೆ"
* 1985ರಲ್ಲಿ ಬಿಡುಗಡೆಗೊಂಡ 'ಬೆಟ್ಟದ ಹೂವು' ಚಿತ್ರದ "ಬಿಸಿಲೇ ಇರಲಿ ಮಳೆಯೇ ಬರಲಿ"
* 1985ರಲ್ಲಿ ಬಿಡುಗಡೆಗೊಂಡ ಬಿಡುಗಡೆಗೊಂಡ 'ಪರಶುರಾಮ' ಚಿತ್ರದ "ಕದ್ರೆ ತಪ್ಪು, ಕೊಂದ್ರೆ ತಪ್ಪು"