/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Vedha Success Celebration : ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್  ಅಭಿನಯದ 125 ನೇ ಚಿತ್ರ ವೇದ ಅಬ್ಬರ ಮೂರನೇ ವಾರಕ್ಕೂ ಮುಂದುವರೆದಿದೆ. ವೇದ ವಿಜಯದ ಬೆನ್ನಲ್ಲೆ ವೇದ ವಿಜಯೋತ್ಸವ ಮಾಡಲು ಚಿತ್ರತಂಡ ಮುಂದಾಗಿದೆ. ಮೈಸೂರು, ಚಾಮರಾಜನಗರ ಸುತ್ತಿ ಬಂದಿರುವ ಶಿವಣ್ಣ, ಇಂದು ತಮ್ಮ ಶ್ರೀಮುತ್ತು  ನಿವಾಸದಲ್ಲಿ ವೇದ ಬಳಗದೊಂದಿಗೆ ವೇದ ಸಕ್ಸಸ್ ಸಂತಸವನ್ನು ಹಂಚಿಕೊಂಡಿದ್ದಾರೆ.

ವೇದ ದೊಡ್ಮನೆ ಅಭಿಮಾನಿಗಳ ನಿರೀಕ್ಷಿಯನ್ನು ಮೀರಿ ಗೆದ್ದು ಬೀಗಿದೆ. ಗೀತಾ ಪಿಕ್ಚರ್ಸ್ ನ ಮೊದಲ ಕಾಣಿಕೆ ಒಂದೊಳ್ಳೆ ಸಂದೇಶದ ಜೊತೆ ಶಿವಸೈನ್ಯವನ್ನು ರಂಜಿಸಿ ವರ್ಷದ ಕೊನೆಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸ್ತಿದೆ‌‌. ವೇದ ಮಹಿಳಾ ಶಕ್ತಿಯ ಜೊತೆ ಶಿವಣ್ಣ ಖದರ್ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರ ನೋಡಿದ ಪ್ರತಿಯೊಬ್ಬರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಜೊತೆಗೆ ಶಿವಣ್ಣ 125 ನೇ ಚಿತ್ರವನ್ನು ಗೆಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಣ್ಣ ದಂಪತಿಗಳು ವೇದ ಬಳಗದ ಜೊತೆ ಮೈಸೂರು, ಚಾಮರಾಜನಗರದ ಸುತ್ತಮುತ್ತ ವೇದ ವಿಜಯದ ತೇರನ್ನು ಎಳೆದು. ಈಗ ಆ ತೇರನ್ನು ಬೆಂಗಳೂರಿನ ಶ್ರೀಮುತ್ತು ನಿವಾಸಕ್ಕೆ ತಂದು ನಿಲ್ಲಿಸಿ ವೇದ ಗೆಲುವಿನ ಸಂತಸವನ್ನು ಹಂಚಿಕೊಂಡಿದ್ದಾರೆ‌.

ಇದನ್ನೂ ಓದಿ : Ghost Movie: ಶಿವಣ್ಣ ಅಭಿನಯದ ‘ಘೋಸ್ಟ್​’ ಮೋಷನ್​ ಪೋಸ್ಟರ್​ ರಿಲೀಸ್

ವೇದ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ರೆಸ್ಪಾನ್ಸ್‌ ಹಿನ್ನೆಲೆ  ಶಿವಣ್ಣ ಮತ್ತು ವೇದ ಬಳಗ ವೇದ ವಿಜಯಯಾತ್ರೆ ಮಾಡಿದ್ರು. ಈಗ ಆ ಯಾತ್ರೆ ಬೆಂಗಳೂರಿಗೆ ಶಿಫ್ಟ್ ಆಗಿದ್ದು, ಚಿತ್ರದ ಗೆಲುವಿನ ಬಗ್ಗೆ ಶಿವಣ್ಣ ಮುಕ್ತವಾಗಿ ಮಾತಾನಾಡಿದ್ದಾರೆ. ವೇದ ಗೆಲುವಿನ ಬೆನ್ನಲ್ಲೆ "ವೇದ  2" ಬಗ್ಗೆ  ಚರ್ಚೆ ಆಗ್ತಿದ್ದು, ವೇದ 2  ಆಗಮನದ ಬಗ್ಗೆ ಶಿವಣ್ಣ ಸಣ್ಣ ಕ್ಲೂ ಕೊಟ್ಟಿದ್ದಾರೆ. ಅಲ್ಲದೆ ಒಂದು ವೇಳೆ ವೇದ 2 ಬಂದ್ರೆ ಚಿತ್ರದಲ್ಲಿ ಶಿವಣ್ಣ ಯಾವ ಪಾತ್ರದಲ್ಲಿ ಕಾಣಿಸಬಹುದು ಅನ್ನೋ ಸಣ್ಣ ಕ್ಲೂ ಅನ್ನು ಶಿವಣ್ಣ ಬಿಚ್ಚಿಟ್ಟಿದ್ದಾರೆ‌.

ಇದೇ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್ ವೇದ ಚಿತ್ರವನ್ನ ಶಿವಣ್ಣನಿಗಾಗಿ ಮಾಡಿಲ್ಲ ಅಂತ ಹಾಸ್ಯ ಚಟಾಕಿ ಹಾರಿಸಿದ್ರು. ಅಲ್ಲದೆ ಮೈಸೂರು, ಚಾಮರಾಜನಗರ ಜನರ ಪ್ರೀತಿಗೆ ಮನಸೋತ ಗೀತಕ್ಕ. ಗೀತಾ ಪಿಕ್ಚರ್ಸ್ ನಲ್ಲಿ ಒಳ್ಳೆಯ ಸಿನಿಮಾಗಳ ಜೊತೆ ಮಹಿಳಾ ಪ್ರಧಾನ ಚಿತ್ರಗಳ ನಿರ್ಮಾಣ ಮಾಡುವುದಾಗಿ ಹೇಳಿದ್ರು. ಒಟ್ಟಿನಲ್ಲಿ ವರ್ಷದ ಕೊನೆಯಲ್ಲಿ ಹ್ಯಾಟ್ರಿಕ್ ಹೀರೋ ವೇದ ಮೂಲಕ ಸೆಂಚುರಿ ಬಾರಿಸೋ ಸೂಚನೆ ಕೊಟ್ಟಿದ್ರೆ. ವೇದ ಗೆಲುವಿನ ಮೂಲಕ ಡಿಸೆಂಬರ್ ಸ್ಯಾಂಡಲ್‌ವುಡ್ ಗೆ ಲಕ್ಕಿ ಅನ್ನೊದು ಮತ್ತೊಮ್ಮೆ ಸಾಬೀತಾಗಿದೆ.

ಇದನ್ನೂ ಓದಿ : ಶಿವರಾಜ್ ಸಕ್ರೆ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಸಾಥ್: ಷಡಕ್ಷರಿ ಸನ್ ಆಫ್ ಪಂಚಾಕ್ಷರಿ ಟೈಟಲ್ ಲಾಂಚ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Vedha Success Celebration the 125th film of Century Star ShivrajKumar
News Source: 
Home Title: 

Vedha : ಶಿವಣ್ಣನ 'ವೇದ' ಸಕ್ಸಸ್ ಖುಷಿಯಲ್ಲಿ ಚಿತ್ರತಂಡ! ವೇದ ಪಾರ್ಟ್ 2 ಬರೋದು ಪಕ್ಕಾನಾ?

Vedha : ಶಿವಣ್ಣನ 'ವೇದ' ಸಕ್ಸಸ್ ಖುಷಿಯಲ್ಲಿ ಚಿತ್ರತಂಡ! ವೇದ ಪಾರ್ಟ್ 2 ಬರೋದು ಪಕ್ಕಾನಾ?
Caption: 
ವೇದ
Yes
Is Blog?: 
No
Tags: 
Facebook Instant Article: 
Yes
Highlights: 

ಶಿವರಾಜ್ ಕುಮಾರ್ ಅಭಿನಯದ 125 ನೇ ಚಿತ್ರ

ಶಿವಣ್ಣನ 'ವೇದ' ಸಕ್ಸಸ್ ಖುಷಿಯಲ್ಲಿ ಚಿತ್ರತಂಡ

ವೇದ ಪಾರ್ಟ್ 2 ಬರೋದು ಪಕ್ಕಾನಾ?

Mobile Title: 
Vedha : ಶಿವಣ್ಣನ 'ವೇದ' ಸಕ್ಸಸ್ ಖುಷಿಯಲ್ಲಿ ಚಿತ್ರತಂಡ! ವೇದ ಪಾರ್ಟ್ 2 ಬರೋದು ಪಕ್ಕಾನಾ?
Chetana Devarmani
YASHODHA POOJARI
Publish Later: 
No
Publish At: 
Monday, January 2, 2023 - 11:34
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
2
Is Breaking News: 
No