Varalaxmi sarathkumar: 18 ವರ್ಷಗಳ ಹಿಂದೆ ಮದುವೆ... ಮ್ಯಾರೇಜ್‌ ಬಗ್ಗೆ ಮಾಣಿಕ್ಯ ನಟಿ ಹೇಳಿದ್ದೇನು ಗೊತ್ತಾ?

Varalaxmi sarathkumar Marriage News: ವರಲಕ್ಷ್ಮಿ ಇತ್ತೀಚೆಗಷ್ಟೇ ಗೆಲುವಿನ ಸರಮಾಲೆಯಲ್ಲಿದ್ದಾರೆ. ಇದರ ಮಧ್ಯವೇ ನಟಿ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.    

Written by - Savita M B | Last Updated : Jan 15, 2024, 09:56 AM IST
  • ವರಲಕ್ಷ್ಮಿ ಶರತ್ ಕುಮಾರ್ ಈಗ ತೆಲುಗು ಹುಡುಗಿ.
  • ಸತತ ತೆಲುಗು ಚಿತ್ರಗಳೊಂದಿಗೆ ಯಶಸ್ಸು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ನಲ್ಲಿ ಸ್ಟಾರ್ ಇಮೇಜ್ ಪಡೆದಿದ್ದಾರೆ
  • ನಟಿಯ ಮದುವೆ ವಿಚಾರದ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..
Varalaxmi sarathkumar: 18 ವರ್ಷಗಳ ಹಿಂದೆ ಮದುವೆ... ಮ್ಯಾರೇಜ್‌ ಬಗ್ಗೆ ಮಾಣಿಕ್ಯ ನಟಿ ಹೇಳಿದ್ದೇನು ಗೊತ್ತಾ?  title=

Varalaxmi sarathkumar: ವರಲಕ್ಷ್ಮಿ ಶರತ್ ಕುಮಾರ್ ಈಗ ತೆಲುಗು ಹುಡುಗಿ. ಸತತ ತೆಲುಗು ಚಿತ್ರಗಳೊಂದಿಗೆ ಯಶಸ್ಸು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ನಲ್ಲಿ ಸ್ಟಾರ್ ಇಮೇಜ್ ಪಡೆದಿದ್ದಾರೆ. ತಮಗೆ ಮ್ಯಾಚ್‌ ಆಗುವಂತೆ ಕಂಟೆಂಟ್‌ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ನಟಿ ನಟಿಸಿದ ಬಹುತೇಕ ಚಿತ್ರಗಳು ಯಶಸ್ವಿಯಾಗುತ್ತಿದ್ದಂತೆ ಪ್ರೇಕ್ಷಕರೂ ಆಕೆಯನ್ನು ನಂಬಿದ್ದಾರೆ.. 

ನಟಿ ವರಲಕ್ಷ್ಮಿ ಶರತ್ ಕುಮಾರ್ ಕನ್ನಡದಲ್ಲಿ ಕಿಚ್ಚ ಸುದೀಪ್‌ ಜೊತೆಗೆ ಮಾಣಿಕ್ಯ ಚಿತ್ರದಲ್ಲಿ ನಟಿಸಿ ಸ್ಯಾಂಡಲ್‌ವುಡ್‌ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು.. ತಮ್ಮ ಅದ್ಭುತ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟಿ ವೀರಸಿಂಹ ರೆಡ್ಡಿ ಚಿತ್ರದಿಂದ ತೆಲುಗು ಪ್ರೇಕ್ಷರ ಮನೆ ಮಾತಾದರು.. ಅಲ್ಲದೇ ಈ ಸಿನಿಮಾ ಆಕೆಯ ವೃತ್ತಿ ಬದುಕಿನಲ್ಲಿ ದೊಡ್ಡ ತಿರುವು ನೀಡಿತು.. 

ಇದನ್ನೂ ಓದಿ-‘ಉಪಾಧ್ಯಕ್ಷ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಶಿವಣ್ಣ: ಪ್ರಪ್ರಥಮ ಬಾರಿ ನಾಯಕನಾಗಿ ಚಿಕ್ಕಣ್ಣ ಮೋಡಿ

ಇನ್ನು ಇತ್ತೀಚೆಗೆ ನಟಿ ಹನುಮಾನ್‌ ಚಿತ್ರದಲ್ಲಿ ನಟಿಸಿದ್ದಾರೆ... ಚಿತ್ರ ಭಾಕ್ಸಾಫಿಸ್‌ನಲ್ಲಿ ಒಳ್ಳೆಯ ಟಾಕ್‌ ಪಡೆದುಕೊಂಡು ಉತ್ತಮ ಕಲೆಕ್ಷನ್‌ ಮಾಡುತ್ತಿದೆ... ಇದೆಲ್ಲದರ ಮಧ್ಯ ನಟಿಯ ವೈಯಕ್ತಿಕ ಎಂದರೇ ಮದುವೆ ವಿಚಾರದ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.. 

ಇದನ್ನೂ ಓದಿ-ಅಂದು ಐಟಂ ಸಾಂಗ್‌ಗೆ ಜೋಡಿ, ಇಂದು ತಾಯಿ-ಮಗ: 'ಗುಂಟೂರು ಖಾರಂ' ಟ್ರೋಲ್!

ನಟಿ ವರಲಕ್ಷ್ಮಿ ಮತ್ತು ವಿಶಾಲ್ ಪ್ರೀತಿಸುತ್ತಿದ್ದಾರೆ ಎಂದು ಬಹಳ ದಿನಗಳಿಂದ ವರದಿಗಳಿವೆ. ಈ ಇಬ್ಬರು ಸೆಲೆಬ್ರಟಿಗಳು ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಈ ವದಂತಿಗಳು ಹರಡಿದ್ದವು.. ಇದಲ್ಲದೇ ಇಬ್ಬರೂ ಮದುವೆಗೂ ರೆಡಿಯಾಗಿದ್ದಾರೆ ಎನ್ನಲಾಗಿತ್ತು.. ಆದರೆ ಇವೆಲ್ಲವೂ ವದಂತಿಗಳಾಗಿಯೇ ಉಳಿದಿವೆ.. 

ಸದ್ಯ ಮತ್ತೇ ವರಲಕ್ಷ್ಮಿ ಮದುವೆ ಸುದ್ದಿ ಜೋರಾಗಿದೆ. ಇತ್ತೀಚೆಗಷ್ಟೇ ಈ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ.. ಈ ಕುರಿತು ಮಾತನಾಡಿದ ಅವರು "ಸಮಯ ಬಂದಾಗ ಮದುವೆ ಆಗುತ್ತೆ.. ಮದುವೆಯು ಜೀವನದ ಒಂದು ಭಾಗ ಮಾತ್ರ, ಜೀವನವಲ್ಲ ಮತ್ತು ಗುರಿಯಲ್ಲ.. ನನಗೆ 18 ವರ್ಷವಾದ ನಂತರ ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡತೊಡಗಿದ್ದರು ಆದರೆ ನಾನು ಅದಕ್ಕೆ ಬ್ರೇಕ್‌ ಹಾಕಿದೆ.. ನನ್ನ  ದೃಷ್ಟಿಯಲ್ಲಿ ಮದುವೆ ಮುಖ್ಯವಲ್ಲ, ಮದುವೆ ಆಗದಿದ್ದರೂ ಪರವಾಗಿಲ್ಲ.. ಒಟ್ಟಿನಲ್ಲಿ ನಾನು ಮದುವೆಗೆ ವಿರೋಧ ಮಾಡುವುದಿಲ್ಲ.. ಮದುವೆಯಾದರೆ ಜೀವನ ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ" ಎಂದಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News