Valatty : ಚಾರ್ಲಿ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಶ್ವಾನದ ಅಮೋಘ ಚಿತ್ರ

Valatty Film Trailer : ಸ್ವಾನ ಪ್ರಿಯರಿಗಂತಲೇ ತೆರೆಗೆ ಬಂದ ಸಿನಿಮಾಗಳು ಸೋಲೋದು ವಿರಳ. ಚಾರ್ಲಿ ನಂತರ ಇದೀಗ ಕನ್ನಡದಲ್ಲಿ ಮತ್ತೊಂದು ಸಿನಿಮಾ ಅಬ್ಬರಿಸಲು ಸಜ್ಜಾಗಿದೆ. ಅದೇ ʼವಾಲಟ್ಟಿʼ. 

Written by - Savita M B | Last Updated : Jul 13, 2023, 05:04 PM IST
  • ಸಾಮಾನ್ಯವಾಗಿ ಎಲ್ಲರೂ ಪ್ರಾಣಿಗಳನ್ನು ಇಷ್ಟಪಡುತ್ತಾರೆ
  • ವಿಶ್ವದ ಯಾವುದೇ ಮೂಲೆಗೆ ಹೋದರೂ ಶ್ವಾನಗಳ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿರೋದೆ ಹೆಚ್ಚು
  • ಇದೀಗ ಮಲಯಾಳಂನಲ್ಲಿ ಶ್ವಾನಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ
Valatty : ಚಾರ್ಲಿ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಶ್ವಾನದ ಅಮೋಘ ಚಿತ್ರ  title=

Valatty Film : ಸಾಮಾನ್ಯವಾಗಿ ಎಲ್ಲರೂ ಪ್ರಾಣಿಗಳನ್ನು ಇಷ್ಟಪಡುತ್ತಾರೆ. ಆದರೆ ಕೆಲವರು ಮಾತ್ರ ಅವುಗಳ ಭಾವನೆಯನ್ನು ಅರ್ಥ ಮಾಡಿಕೊಂಡಿರುತ್ತಾರೆ. ಪ್ರಾಣಿಗಳಲ್ಲಿ ಎಲ್ಲರು ಹೆಚ್ಚಾಗಿ ಶ್ವಾನಗಳನ್ನು ಪ್ರೀತಿಸುತ್ತಾರೆ. ನಿಯತ್ತಿನ ಇನ್ನೊಂದು ರೂಪವಾಗಿರುವ ಆ ಮುಗ್ಧ ಮನಸ್ಸಿಗೆ ಸೋಲದವರೇ ಇಲ್ಲ. 

ವಿಶ್ವದ ಯಾವುದೇ ಮೂಲೆಗೆ ಹೋದರೂ ಶ್ವಾನಗಳ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿರೋದೆ ಹೆಚ್ಚು. ಕನ್ನಡ ಸಿನಿರಂಗದಲ್ಲಿ ಪ್ಯಾನ್‌ ಇಂಡಿಯಾ ಪ್ರೇಕ್ಷರಿಗಾಗಿಯೇ ರಕ್ಷಿತ್‌ ಶೆಟ್ಟಿ ಚಾರ್ಲಿ 777 ಸಿನಿಮಾ ನಿರ್ಮಾಣ ಮಾಡಿದ್ದರು. ಇದೀಗ ಮಲಯಾಳಂನಲ್ಲಿ ಶ್ವಾನಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಅದುವೇ ವಾಲಟ್ಟಿ. ಈ ಸಿನಿಮಾ ಶ್ವಾನಗಳ ಭಾವನಾತ್ಮಕ ಸಿನಿಮಾ ಆಗಿದ್ದು, ಮೊದಲ ಪೋಸ್ಟರ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿದೆ.

ಇದನ್ನೂ ಓದಿ-ಗಾಳಿಪಟ ಚಿತ್ರದ ಚೆಲುವೆಯರಿವರು..ಇದರಲ್ಲಿ ನಿಮ್ಮ ನಿದ್ದೆಗೆಡಿಸಿದ ಕ್ಯಾರೆಕ್ಟರ್‌ ಯಾವುದು..?

ಇನ್ನು ಇದೇ ಖುಷಿಯಲ್ಲಿ ವಾಲಟ್ಟಿ ಸಿನಿಮಾ ಚಿತ್ರತಂಡ ಸಿನಿಮಾದ ಟ್ರೈಲರ್‌ನ್ನು ಬಿಡುಗಡೆಮಾಡಿದ್ದು, ಇದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ಸಿನಿಮಾ ಮೇಕಿಂಗ್‌ಗೂ ಬಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾದಲ್ಲಿನ ಡೈಲಾಗ್ಸ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. 

ವಾಲಟ್ಟಿ ಕನ್ನಡ ಡೈಲಾಗ್‌ ಡಬ್ಬಿಂಗ್‌ನ್ನು ರತ್ನನ್‌ ಪ್ರಪಂಚ ಸಿನಿಮಾದ ನಿರ್ದೇಶಕ ವಹಿಸಿಕೊಂಡಿದ್ದು, ಅಚ್ಚುಕಟ್ಟಾಗಿ ನಿರ್ವಹಿದ್ದಾರೆ ಎನ್ನಲಾಗುತ್ತಿದೆ. ಮಲಯಾಳಂನಲ್ಲಿ ಈ ಸಿನಿಮಾವನ್ನು ಹೊಸ ರೀತಿಯ ಸಿನಿಮಾಗಳಿಗೆ ಜೀವ ತುಂಬಿದ್ದ ವಿಜಯ್‌ ಬಾಬು ಅವರು ಪ್ರಸ್ತುತಪಡಿಸುತ್ತಿದ್ದಾರೆ. ಕನ್ನಡದ ಕೆಆರ್‌ಜಿ ಸ್ಟುಡಿಯೋಸ್‌ ಈ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆಮಾಡಲು ಸಜ್ಜಾಗಿದೆ. 

ಇದನ್ನೂ ಓದಿ-ಎರಡನೇ ಪತ್ನಿ ಜೊತೆ ಹನಿಮೂನ್‌ಗೆ ಬಾಲಿಗೆ ತೆರಳಿದ ನಟ ಆಶಿಷ್ ವಿದ್ಯಾರ್ಥಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News