Viral Video: ಬೆಡ್ ರೂಮ್ ಸೀಕ್ರೆಟ್ಸ್ ಕುರಿತು ಕೇಳಿದ ಪ್ರಶ್ನೆಗೆ ಉರ್ಫಿಯ ಶಾಕಿಂಗ್ ಉತ್ತರ

Urfi Javed ಹಂಚಿಕೊಳ್ಳುವ ಕೆಲ ಫೋಟೋಗಳು ಹಾಗೂ ವಿಡಿಯೋಗಳಿಗೆ ಒಂದೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾದರೆ, ಉರ್ಫಿ ಅವುಗಳ ಕಾರಣ ವ್ಯಾಪಕ ಟ್ರೊಲ್ಗೂ ಕೂಡ ಒಳಗಾಗುತ್ತಾಳೆ. ಏತನ್ಮಧ್ಯೆ ಉರ್ಫಿ ಬೆಡ್ರೂಮ್ ಸೀಕ್ರೆಟ್ಸ್ ಹಿನ್ನೆಲೆ ಭಾರಿ ಚರ್ಚೆಗೆ ಗ್ರಾಸವಾಗಿದ್ದಾಳೆ.  

Written by - Nitin Tabib | Last Updated : Dec 7, 2022, 04:58 PM IST
  • ಕೆಲವೊಮ್ಮೆ ತನ್ನ ಫ್ಯಾಶನ್ ಸೆನ್ಸ್ ಕಾರಣ ಹಾಗೂ ಮತ್ತೆ
  • ಕೆಲವೊಮ್ಮೆ ತನ್ನ ಬಹಿರಂಗ ಹೇಳಿಕೆಗಾಗಿ ಉರ್ಫಿ ಹೆಡ್ಲೈನ್ ಗಿಟ್ಟಿಸುತ್ತಲೇ ಇರುತ್ತಾಳೆ.
  • ಉರ್ಫಿ ಹಂಚಿಕೊಳ್ಳುವ ಬಹುತೇಕ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ
Viral Video: ಬೆಡ್ ರೂಮ್ ಸೀಕ್ರೆಟ್ಸ್ ಕುರಿತು ಕೇಳಿದ ಪ್ರಶ್ನೆಗೆ ಉರ್ಫಿಯ ಶಾಕಿಂಗ್ ಉತ್ತರ  title=
Urfi Javed Bold Statement

Trending Video: ಇಂಟರ್ನೆಟ್ ಜಗತ್ತಿನಲ್ಲಿ ಹಾಗೂ ಸಾಮಾಜಿಕ ಮಾಧ್ಯಮ ವಿಶ್ವದಲ್ಲಿ ನೀವು ಉರ್ಫಿ ಜಾವೇದ್ ಕುರಿತು ಚರ್ಚೆಯಾಗದೆ ಇರುವ ದಿನ ಸಿಗುವುದು ತೀರಾ ವಿರಳ. ಕೆಲವೊಮ್ಮೆ ತನ್ನ ಫ್ಯಾಶನ್ ಸೆನ್ಸ್ ಕಾರಣ ಹಾಗೂ ಮತ್ತೆ  ಕೆಲವೊಮ್ಮೆ ತನ್ನ ಬಹಿರಂಗ ಹೇಳಿಕೆಗಾಗಿ ಉರ್ಫಿ ಹೆಡ್ಲೈನ್ ಗಿಟ್ಟಿಸುತ್ತಲೇ ಇರುತ್ತಾಳೆ.  ಉರ್ಫಿ ಹಂಚಿಕೊಳ್ಳುವ ಬಹುತೇಕ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ ಮತ್ತು ಅಭಿಮಾನಿಗಳು ಕೂಡ ಅವುಗಳನ್ನು ಇಷ್ಟಪಡುತ್ತಾರೆ. ಒಂದೆಡೆ ಉರ್ಫಿ ಹಂಚಿಕೊಳ್ಳುವ ವಿಡಿಯೋ-ಫೋಟೋಗಳಿಗೆ ಮೆಚ್ಚುಗೆಗೆ ಪಾತ್ರವಾದರೆ, ಕೆಲವೊಮ್ಮೆ ಇದೇ ಫೋಟೋ-ವಿಡಿಯೋಗಳ ಕಾರಣ ಉರ್ಫಿ ಭಾರಿ ಟ್ರೋಲ್ ಗೂ ಒಳಗಾಗುತ್ತಾಳೆ. ಏತನ್ಮಧ್ಯೆ ಉರ್ಫಿ ಪ್ರಸ್ತುತ ತನ್ನ ಬೆಡ್ ರೂಮ್ ಸೀಕ್ರೆಟ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಭಾರಿ ಚರ್ಚೆಯಲ್ಲಿದ್ದಾಳೆ.

ಇದನ್ನೂ ಓದಿ-Rashmika Mandanna : ಐಟಂ ಸಾಂಗ್‌ಗೆ ರಶ್ಮಿಕಾ ಸಂಭಾವನೆ ಎಷ್ಟು ಗೊತ್ತಾ?

ಬೋಲ್ಡ್ ಉತ್ತರಗಳಿಂದ ಬಾಯ್ಮುಚ್ಚಿಸಿದ ಉರ್ಫಿ
ಉರ್ಫಿ ಜಾವೇದ್ ಗೆ ಎಲ್ಲಕ್ಕಿಂತ ಮೊದಲು 'ಆರ್ ಯು ಲೌಡ್ ಆರ್ ಕ್ವಾಯಿಟ್ ಅಟ್ ಬೆಡ್?' ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ಉರ್ಫಿ 'ಬೆಡ್ ವಿಷಯ ನಾವು ಬೆಡ್ ಗೆ ಸೀಮಿತವಾಗಿಟ್ಟರೆ ಉತ್ತಮ, ಇನ್ನುಳಿದಂತೆ ನಿಮಗೆ ತಿಳಿದುಕೊಳ್ಳಲೇಬೇಕು ಎಂದಾದರೆ, ನೀವು ನನ್ನ ಬೆಡ್ ಮೇಲೆ ಬರಬಹುದು' ಎಂದಿದ್ದಾಳೆ. ಇದಾದ ಬಳಿಕ ಉರ್ಫಿಗೆ ಎರಡನೇ ಪ್ರಶ್ನೆಯ ರೂಪದಲ್ಲಿ ' ನಿಮ್ಮನ್ನು ವಂಚಿಸುತ್ತಿರುವ ವ್ಯಕ್ತಿಯ ಜೊತೆಗೆ ನೀವು ವಾಸಿಸುತ್ತಿರುವಿರಿ ಎಂಬುದು ನಿಮ್ಮ ಗಮನಕ್ಕೆ ಬಂದರೆ?' ಎಂದು ಕೇಳಲಾಗಿದೆ. ಅದಕ್ಕೆ ಉತ್ತರಿಸಿರುವ ಉರ್ಫಿ 'ನಾನು ಅವನ ಖಾಸಗಿ ಅಂಗವನ್ನೇ ಕತ್ತರಿಸುವೆ' ಎಂದಿದ್ದಾಳೆ.

ಇದನ್ನೂ ಓದಿ-BBK9 : ದೊಡ್ಮನೆಯಲ್ಲಿ ಬಿಗ್‌ ಫೈಟ್‌! ಕೈ - ಕೈ ಮಿಲಾಯಿಸಿದ ಸ್ಪರ್ಧಿಗಳು!?

ಸ್ಪಿಲ್ಟಿಸ್ ವಿಲ್ಲಾನಲ್ಲಿ ಕಾಣಿಸಿಕೊಂಡ ಉರ್ಫಿ
ಪ್ರಸ್ತುತ ಉರ್ಫಿ ಜಾವೇದ್ ಎಂಟಿವಿಯಲ್ಲಿ ಮೂಡಿಬರುತ್ತಿರುವ ಸ್ಪಿಲ್ಟಿಸ್ ವಿಲ್ಲಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಈ ಕಾರ್ಯಕ್ರಮದಲ್ಲಿನ ಉರ್ಫಿಗೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗಿವೆ. ಇದರಲ್ಲಿ ಒಮ್ಮೆ ಉರ್ಫಿ ರೊಮ್ಯಾಂಟಿಕ್ ಅವತಾರದಲ್ಲಿ ಕಾಣಿಸಿಕೊಂಡರೆ, ನಂತರ ಯಾರಿಗೂ ಪಾಠ ಕಲಿಸುವುದನ್ನು ನೀವು ಗಮನಿಸಬಹುದು. ಇನ್ನೊಂದೆಡೆ ಸನ್ನಿ ಲಿಯೋನ್ ಕೂಡ ಉರ್ಫಿ ಕುರಿತು ತನ್ನ ಪ್ರಶಂಸೆಯನ್ನು ವ್ಯಕ್ತಪಡಿಸಿತ್ತು, ನಟಿಯ ಅಭಿಮಾನಿಗಳಿಗೆ ಅದು ತುಂಬಾ ಇಷ್ಟವಾಗುತ್ತದೆ. ಹಲವು ಬಾರಿ ಉರ್ಫಿ ತನ್ನ ಫ್ಯಾಶನ್ ಸೆನ್ಸ್ ಗೆ ಸಂಬಂಧಿಸಿದಂತೆಯೂ ಕೂಡ ವ್ಯಾಪಕ ಚರ್ಚೆಯಲ್ಲಿರುತ್ತಾಳೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News