Urfi Javed : ʼನಮ್ಮ ಮಹಿಳೆಯರು ಸೋಮಾರಿ’ ಹೇಳಿಕೆಗೆ ತಿರುಗೇಟು ನೀಡಿದ ಉರ್ಫಿ! 

Urfi Javed On Sonali Kulkarni : ಉರ್ಫಿ ಜಾವೇದ್ ಈ ಹೆಸರು ಕೇಳಿದ್ರೆ ಅರೆಕ್ಷಣ ತಲೆಯಲ್ಲಿ ಬರೋದು ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳು.  ಆದರೆ ಇದೀಗ  ಸೋನಾಲಿ ಕುಲಕರ್ಣಿ ರವರ 'ಭಾರತೀಯ ಮಹಿಳೆಯರು ಸೋಮಾರಿಗಳು' ಎಂಬ ಹೇಳಿಕೆಗೆ   ತಿರುಗೇಟು ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. 

Written by - Zee Kannada News Desk | Last Updated : Mar 19, 2023, 01:29 PM IST
  • ಭಾರತೀಯ ಮಹಿಳೆಯರು ಸೋಮಾರಿಗಳು ಎಂಬ ಹೇಳಿಕೆ ತಿರುಗೇಟು ಕೊಟ್ಟ ಉರ್ಫಿ
  • ಮಾಧ್ಯಮ ಸಂದರ್ಶನವೊಂದರಲ್ಲಿ ಸೋನಾಲಿ ಕುಲಕರ್ಣಿ ಹೇಳಿದ ಹೇಳಿಕೆ
  • ವಿಚಿತ್ರ ಉಡುಪು ಹೊರತಾಗಿ ಮಹಿಳೆಯರ ಬಗ್ಗೆ ಧ್ವನಿ ಎತ್ತುವ ಉರ್ಫಿ
Urfi Javed : ʼನಮ್ಮ ಮಹಿಳೆಯರು ಸೋಮಾರಿ’  ಹೇಳಿಕೆಗೆ ತಿರುಗೇಟು ನೀಡಿದ ಉರ್ಫಿ!  title=

Urfi Javed On Sonali Kulkarni : ಉರ್ಫಿ ಎಂದರೆ ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ಆಕೆಯ ಹೆಸರು ಕೇಳದವರೇ ಇಲ್ಲ ಕಾರಣ ಆಕೆಯ ವಿಚಿತ್ರ ಉಡುಗೆ ತೊಡುಗೆ, ವಿಚಿತ್ರ ಬಟ್ಟೆ ಧರಿಸಿ ಛಾಯಾಗ್ರಾಹಕರಿಗೆ ಫೋಸ್‌ ನೀಡುವುದು ಟ್ರೋಲ್‌ ಗೆ ಒಳಗಾಗುವುದು ಇದೆಲ್ಲಾ ಇತ್ತೀಚೇಗೆ ಸಾಮಾನ್ಯವಾಗಿದೆ. ಆದರೆ ಅದರ ಹೊರತು ಪಡಿಸಿ ನೋಡುವುದಾರೆ ಸಾಮಾಜಿಕ ಮಾಧ್ಯಮದಲ್ಲಿ ಸಮಾಜ ಮತ್ತು ಮಹಿಳೆಯರ ಸಮಸ್ಯೆಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಉರ್ಫಿ ಎಂದಿಗೂ ಹಿಂದೆ ಸರಿಯಲಿಲ್ಲ ಎಂಬುವುದು ಸಾಬೀತಾಗಿದೆ. 

ನಟಿ, ಮಾಡೆಲ್ ಉರ್ಫಿ ಜಾವೇದ್ ಈ ಹೆಸರು ಕೇಳಿದ್ರೆ ಅರೆಕ್ಷಣ ತಲೆಯಲ್ಲಿ ಬರೋದು ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳು. ಈ ರೀತಿ ವಿಚಿತ್ರವಾದ ಉಡುಪಗಳನ್ನು ಧರಿಸಿಯೇ ಉರ್ಫಿ ಎಲ್ಲರ  ಹೆಚ್ಚಾಗಿ ಆಕೆಯನ್ನು ಕಂಡಿರುತ್ತೇವೆ. ಆದರೆ ಇದೀಗ  ಸೋನಾಲಿ ಕುಲಕರ್ಣಿ ರವರ 'ಭಾರತೀಯ ಮಹಿಳೆಯರು ಸೋಮಾರಿಗಳು' ಎಂಬ ಹೇಳಿಕೆ  ತಿರುಗೇಟು ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. 

ಇದನ್ನೂ ಓದಿ: Ashwini Puneeth: ಪವರ್ ರನ್ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಇತ್ತೀಚೀನ ಮಾಧ್ಯಮ ಸಂದರ್ಶನವೊಂದರಲ್ಲಿ  ಸೋನಾಲಿ ಕುಲಕರ್ಣಿಯವರು ಭಾರತೀಯ ಮಹಿಳೆಯರು ಸೋಮಾರಿಗಳು ಇದ್ದಾರೆ. ಹಾಗೂ ನಮ್ಮ ಮಹಿಳೆಯರು ಬಾಯ್‌ಫ್ರೆಂಡ್ ಅಥವಾ ಗಂಡ ಶ್ರೀಮಂತರಾಗಿರಬೇಕೆಂದು ಎಂದು ಭಯಸುತ್ತಾರೆ. ಮಹಿಳೆಯರು ತಮ್ಮ ನಿಲುವನ್ನು ತಾವೇ ಮರೆತುಬಿಟ್ಟಿದ್ದಾರೆ. ಮಹಿಳೆಯರನ್ನು ಪ್ರೋತ್ಸಾಹಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆಂದು ನಾನು ಪ್ರತಿಯೊಬ್ಬರನ್ನು ಕೋರುತ್ತೇನೆ ಎಂದರು. 

ಇದನ್ನೂ ಓದಿ: Nia Sharma : ಬಿಕಿನಿ ತೊಟ್ಟು, ಕೈಯಲ್ಲಿ ಎಣ್ಣೆ ಬಾಟಲ್‌ ಹಿಡಿದು ವೈರಲ್‌ ಆದ ಬಾಲಿವುಡ್‌ ಹಾಟ್‌ ನಟಿ

ಇವರ ಹೇಳಿಕೆಗೆ ಟಾಂಗ್‌ ಕೊಟ್ಟ್‌ ಉರ್ಫಿ ,ಆಧುನಿಕ ಮಹಿಳೆಯರು ತಮ್ಮ ಕೆಲಸ ಮತ್ತು ಮನೆಕೆಲಸಗಳನ್ನು ಒಟ್ಟಿಗೆ ನಿಭಾಯಿಸುತ್ತಿರುವಾಗ ನೀವು ಸೋಮಾರಿಗಳು ಎಂದು ಹೇಗೆ ಕರೆಯುತ್ತಿರಾ, ಅಷ್ಟೇ ಅಲ್ಲದೇ ಶತಮಾನಗಳಿಂದ ಪುರುಷರು ಮಹಿಳೆಯರನ್ನು  ಮಕ್ಕಳ ಮಾರಾಟ ಯಂತ್ರವಾಗಿ ಮಾತ್ರ ನೋಡುತ್ತಿದ್ದರು. ಮದುವೆಗೆ ಮುಖ್ಯ ಕಾರಣ - ವರದಕ್ಷಿಣೆ ಯಾಗಿತ್ತು. ಹೌದು ನೀವು ಹೇಳುವುದು ಸರಿ ಇದೆ ಆದರೆ ಮಹಿಳೆಯರು ಕೆಲಸ ಮಾಡಬೇಕೆಂಬುದು ಆದರೆ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸಿಗದ ಸವಲತ್ತಾಗಿದೆ. ಎಂದು  ಭಾರತೀಯ ಮಹಿಳೆಯರ ಕುರಿತಂತೆ  ಸೋನಾಲಿ ತಿಳಿ ಹೇಳಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News