ಚಿತ್ರಮಂದಿರದಲ್ಲಿ ಸಿಕ್ಕ 'ತೋತಾಪುರಿ' ತಿಂದು ಫ್ಯಾನ್ಸ್ ಫುಲ್ ಖುಷ್..!

ತೋತಾಪುರಿ ಸಿನಿಮಾ ನಿಜಕ್ಕೂ ಒಂದೊಳ್ಳೆ ಸಂದೇಶ ಸಾರೋ ಸಿನಿಮಾವಾಗಿದೆ. ಕಚಗುಳಿ ಇಡುವ ಸಂಭಾಷಣೆಯ ಜೊತೆಗೆ ಒಂದಷ್ಟು ಗಂಭೀರವಾದ ಹಾಗೂ ಇವತ್ತಿನ ಸನ್ನಿವೇಶಕ್ಕೆ ಹೇಳಿಮಾಡಿಸಿದಂತಹ ಚಿತ್ರಣವಿದೆ.

Written by - YASHODHA POOJARI | Edited by - Yashaswini V | Last Updated : Sep 30, 2022, 01:01 PM IST
  • ತೋತಾಪುರಿ ಒಂದು ಗಲಭೆ ಇಲ್ಲದ ಪುಟ್ಟ ಪ್ರೇಮಕಥೆ.
  • ಜೊತೆಗೆ ಇದು ಭಾವೈಕ್ಯತೆ ಸಾರುವ ಸಿನಿಮಾ.
  • ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಮೂರು ಧರ್ಮಗಳಿಗೆ ಸಂಬಂಧಪಟ್ಟ ವಿಚಾರಗಳು ಇಲ್ಲಿವೆ.
ಚಿತ್ರಮಂದಿರದಲ್ಲಿ ಸಿಕ್ಕ 'ತೋತಾಪುರಿ' ತಿಂದು ಫ್ಯಾನ್ಸ್ ಫುಲ್ ಖುಷ್..! title=
Totapuri film review

ನಾನು ದತ್ತು ತಗೊಂಡಿರೋದು ಜಾತಿ-ಧರ್ಮವನ್ನಲ್ಲ, ಈ ಕಂದಮ್ಮನಾ, “ಜಾತಿ ಕಾಲಂನಲ್ಲಿ ಭಾರತದವನು ಎಂದು ಬರೀರಿ…’ ಅಬ್ಬಾ ಈ ಡೈಲಾಗ್ ಯಾಕೋ ತುಂಬಾ ಅಂದ್ರೆ ತುಂಬಾ ಕಾಡುತ್ತೆ. ಇದು ತೋತಾಪುರಿ ಸಿನಿಮಾದಲ್ಲಿರೋ ಅದ್ಭುತ ಡೈಲಾಗ್. ತೋತಾಪುರಿ ಸಿನಿಮಾ ನಿಜಕ್ಕೂ ಒಂದೊಳ್ಳೆ ಸಂದೇಶ ಸಾರೋ ಸಿನಿಮಾವಾಗಿದೆ. ಕಚಗುಳಿ ಇಡುವ ಸಂಭಾಷಣೆಯ ಜೊತೆಗೆ ಒಂದಷ್ಟು ಗಂಭೀರವಾದ ಹಾಗೂ ಇವತ್ತಿನ ಸನ್ನಿವೇಶಕ್ಕೆ ಹೇಳಿಮಾಡಿಸಿದಂತಹ ಚಿತ್ರಣವಿದೆ.

ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಮೂರು ಧರ್ಮಗಳಿಗೆ ಸಂಬಂಧಪಟ್ಟ ವಿಚಾರಗಳು ಇಲ್ಲಿವೆ. ತೋತಾಪುರಿ ಒಂದು ಗಲಭೆ ಇಲ್ಲದ ಪುಟ್ಟ ಪ್ರೇಮಕಥೆ. ಜೊತೆಗೆ ಇದು ಭಾವೈಕ್ಯತೆ ಸಾರುವ ಸಿನಿಮಾ. ಈ ಚಿತ್ರ ಫ‌ಲವತ್ತಾದ ಫ‌ಸಲು ಕೊಡುವ ನಿರೀಕ್ಷೆ ಸಿನಿಮಾ ನೋಡಿದ ಮೇಲೆ ದುಪ್ಪಟ್ಟಾಗಿದೆ.

 

ಇದನ್ನೂ ಓದಿ- ತೋತಾಪುರಿಗಾಗಿ 27 ವರ್ಷಗಳ ನಂತರ ರೈಲು ಹತ್ತಿದ ನವರಸನಾಯಕ ಜಗ್ಗೇಶ್

'ತೋತಾಪುರಿ' ಹೊಸ ಬ್ಯಾನರ್‌ನ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಚಿತ್ರವನ್ನು ಕಟ್ಟಿಕೊಟ್ಟ ಪರಿಸರ ಕೂಡಾ ಭಿನ್ನವಾಗಿದೆ. ಬಿಗ್ ಸ್ಕ್ರೀನ್ ಮೇಲೆ ಈಗಾಗಲೇ ಸೂಪರ್ ಡೂಪರ್ ಹಿಟ್ ಆದ 'ಬಾಗ್ಲು ತೆಗಿ ಮೇರಿ ಜಾನ್' ಹಾಡು ಸಿಕ್ಕಾಪಟ್ಟೆ ಹವಾ ಸೃಷ್ಟಿಸಿ ಈಗ ಟ್ರೆಂಡಿಂಗ್ನಲ್ಲಿದೆ. ಈ ಹಾಡನ್ನ ತೆರೆಯ ಮೇಲೆ ನೋಡೋದೇ ಒಂಥರಾ ಥ್ರಿಲ್ ಆಗುತ್ತೆ. ಡಬಲ್ ಮೀನಿಂಗ್ ಡೈಲಾಗ್ಗಳ ಮೂಲಕ ಪ್ರಸ್ತುತ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನೋದನ್ನ ನಿರ್ದೇಶಕರು ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಇದನ್ನೂ ಓದಿ- ಡಿ ಬಾಸ್ 'ಕ್ರಾಂತಿ' ಸಿನಿಮಾ ರಿಲೀಸ್ ಆದ ದಿನ ಕರುನಾಡಿನಲ್ಲಿ 'ಮಹಾಕ್ರಾಂತಿ' ಫಿಕ್ಸ್..!

ನವರಸ ನಾಯಕ ಜಗ್ಗೇಶ್ ಕೂಡ ಎಲ್ಲರ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ನಟಿಸಿ ಸೈ ಜೊತೆಗೆ ಜೈ ಅನಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ್ ಕೂಡ ವಾರ್ರೆ ವ್ಹಾ ಅನ್ನೋ ಲೆವೆಲ್ಲಿಗೆ ಆಕ್ಟ್ ಮಾಡಿ ಜನಮನಸೂರೆಗೊಂಡಿದ್ದಾರೆ. ಕೆಲವು ಪಂಚಿಂಗ್ ಡೈಲಾಗ್ ಕೇಳಲು ಮುಜುಗರ ಅನಿಸಿದ್ರೂ ಕೆಲವು ಸೀರಿಯಸ್ ವಿಚಾರ ನಿಮಗೆ ಬೇರೆಯದ್ದೇ ಲೋಕವನ್ನೇ ತೋರಿಸುತ್ತೆ. 

ಚಿತ್ರದಲ್ಲಿ ಜಗ್ಗೇಶ್‌, ಅದಿತಿ, ಧನಂಜಯ್‌, ವೀಣಾ ಸುಂದರ್‌, ದತ್ತಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ಕೆ.ಎ.ಸುರೇಶ್‌ ತಮ್ಮ "ಮೋನಿಫಿಕ್ಸ್‌ ಸ್ಟುಡಿಯೋಸ್‌" ಮೂಲಕ ನಿರ್ಮಿಸಿದ್ದಾರೆ.

ಸೋ ಇನ್ಯಾಕೆ ತಡ ಮಿಸ್ ಮಾಡ್ದೆ ಚಿತ್ರಮಂದಿರಗಳಿಗೆ ಬಂದು ತೋತಾಪುರಿ ತಿನ್ನಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News