ತ.ನಾಡು: ಜಯಲಲಿತಾ ಆಸ್ಪತ್ರೆ ವಿಡಿಯೋ ಬಿಡುಗಡೆಗೆ ದಿನಕರನ್ ಬಣಕ್ಕೆ ನೋಟಿಸ್ ಜಾರಿ ಮಾಡಿದ ಚುನಾವಣಾ ಆಯೋಗ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕಾರಣ ದಿನಕರನ್ ಬಣಕ್ಕೆ ಚುನಾವಣಾ ಆಯೋಗದ ನೋಟಿಸ್.

Last Updated : Dec 21, 2017, 12:51 PM IST
  • ನಾಳೆ ಆರ್.ಕೆ. ನಗರ ಕ್ಷೇತ್ರದ ಚುನಾವಣೆ.
  • ಈ ಹಿಂದೆ ಜಯಲಲಿತಾ ಆರ್.ಕೆ. ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ತ.ನಾಡು: ಜಯಲಲಿತಾ ಆಸ್ಪತ್ರೆ ವಿಡಿಯೋ ಬಿಡುಗಡೆಗೆ ದಿನಕರನ್ ಬಣಕ್ಕೆ ನೋಟಿಸ್ ಜಾರಿ ಮಾಡಿದ ಚುನಾವಣಾ ಆಯೋಗ title=

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇಹಲೋಕ ತ್ಯಜಿಸಿ ಒಂದು ವರ್ಷದ ಬಳಿಕ, ಜಯಾ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಹೇಗಿದ್ದರು ಎಂಬ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಹಿಂದೆ ಜಯಲಲಿತಾ ಪ್ರತಿನಿಧಿಸುತ್ತಿದ್ದ ಆರ್.ಕೆ. ನಗರ ಕ್ಷೇತ್ರದ ಚುನಾವಣೆ ನಾಳೆ ಇರುವ ಹಿನ್ನೆಲೆಯಲ್ಲಿ ಟಿಟಿವಿ ದಿನಕರನ್ ಬಣ ಈ ವಿಡಿಯೋ ಬಿಡುಗಡೆ ಮಾಡಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆದ ಕಾರಣ ದಿನಕರನ್ ಬಣಕ್ಕೆ ಚುನಾವಣಾ ಆಯೋಗದ ನೋಟಿಸ್ ಜಾರಿ ಮಾಡಿದೆ.

ಅಷ್ಟೇ ಅಲ್ಲದೆ ದಿನಕರನ್ ಬಣದ ಈ ನೀತಿಯನ್ನು ತಮಿಳುನಾಡಿನ ಅನೇಕ ರಾಜಕೀಯ ನಾಯಕರೂ ಸಹ ಖಂಡಿಸಿದ್ದಾರೆ.

Trending News