Tiger 3: OTT ಅಂಗಳಕ್ಕೆ ಸಲ್ಲು ಬಾಯ್‌ ನ್ಯೂ ಸಿನಿಮಾ..! ಎಲ್ಲಿ? ಯಾವಾಗ?

Tiger 3 OTT Release Date: ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ ಅಭಿಮನಯದ ಟೈಗರ್‌ 3 ಸಿನಿಮಾ ಬಿಡುಗಡೆಯಾಗಿ ಮಿಕ್ಸೆಡ್‌ ಟಾಕ್‌ ಪಡೆಯುತ್ತಿದೆ.. ಇದೇ ವೇಳೆ ಚಿತ್ರ OTT ಅಂಗಳಕ್ಕೂ ಬರಲು ಸಜ್ಜಾಗಿದೆ.. ಎಲ್ಲಿ? ಯಾವಾಗ ಸ್ಟ್ರೀಮಿಂಗ್‌ ಅಂತೀರಾ.. ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.‌

Written by - Savita M B | Last Updated : Nov 16, 2023, 01:28 PM IST
  • ಸಲ್ಮಾನ್ ಖಾನ್ ನ್ಯೂ ಸಿನಿಮಾ 'ಟೈಗರ್-3' ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ
  • ಸದ್ಯ ಸಲ್ಲು ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ
  • ಇದೀಗ ಈ ಚಿತ್ರದ OTT ಬಿಡುಗಡೆ ದಿನಾಂಕ ಫಿಕ್ಸ್‌ ಆಗಿದೆ
Tiger 3: OTT ಅಂಗಳಕ್ಕೆ ಸಲ್ಲು ಬಾಯ್‌ ನ್ಯೂ ಸಿನಿಮಾ..! ಎಲ್ಲಿ? ಯಾವಾಗ?  title=

Tiger 3: ಸಲ್ಮಾನ್ ಖಾನ್ ನ್ಯೂ ಸಿನಿಮಾ 'ಟೈಗರ್-3' ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ಹಿಂದೆ ಬಂದ ಏಕ್ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಚಿತ್ರಗಳು ಬ್ಲಾಕ್‌ಬಸ್ಟರ್ ಸಕ್ಸಸ್ ಆಗಿದ್ದರಿಂದ ಈ ಚಿತ್ರದ ಬಗ್ಗೆ ಉತ್ತಮ ನಿರೀಕ್ಷೆಗಳಿದ್ದವು. 

ಇದೀಗ ಈ ಮೂರನೇ ಭಾಗವನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ ಮತ್ತು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ್ದಾರೆ. ಮೊದಲೆರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಕತ್ರಿನಾ ಕೈಫ್ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಬಿಡುಗಡೆಯಾಗಿ ಮಿಕ್ಸೆಡ್ ಟಾಕ್ ಪಡೆಯುತ್ತಿರುವ ಈ ಸಿನಿಮಾದ ಕೆಲ ಅಭಿಮಾನಿಗಳು ಚಿತ್ರದ OTT ರಿಲೀಸ್ ಗಾಗಿ ಕಾಯಲಾರಂಭಿಸಿದ್ದಾರೆ.

ಇದನ್ನೂ ಓದಿ-ರಾಮ್ ಚರಣ್ ಹೀರೋ ಆಗುವ ಮುನ್ನ ಬಾಲನಟನಾಗಿ ನಟಿಸಿದ ಸಿನಿಮಾ ಯಾವುದು ಗೊತ್ತಾ?

ಚಿತ್ರವು ತನ್ನ OTT ಹಕ್ಕುಗಳನ್ನು ಅಮೆಜಾನ್ ಪ್ರೈಮ್‌ಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದು, ಈ ಸಿನಿಮಾವನ್ನು ಒಟಿಟಿಯಲ್ಲಿ 45 ದಿನ ಅಂದರೆ ತಿಂಗಳ ಹದಿನೈದು ದಿನ ಸ್ಟ್ರೀಮ್ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅಂದರೆ ಡಿಸೆಂಬರ್ ಅಂತ್ಯದಲ್ಲಿ ಕ್ರಿಸ್ ಮಸ್ ಉಡುಗೊರೆಯಾಗಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೊಸ ವರ್ಷದ ಉಡುಗೊರೆಯಾಗಿ ಬರುವ ಸಾಧ್ಯತೆ ಇದೆ. 

ಟೈಗರ್ 3 ಚಿತ್ರ ಹಿಂದಿ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಭಾರೀ ನಿರೀಕ್ಷೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದ ಟೈಗರ್-3 ಚಿತ್ರ ಬೆಳಗಿನ ಪ್ರದರ್ಶನದಿಂದಲೇ ಮಿಶ್ರ ಟಾಕ್‌ನೊಂದಿಗೆ ಓಡುತ್ತಿದೆ. ಆದರೆ ಇತ್ತೀಚೆಗಷ್ಟೇ ತೆರೆಕಂಡ ಶಾರುಖ್ ಪಠಾಣ್ ಹಾಗೂ ಜವಾನ್ ಸಿನಿಮಾಗಳೊಂದಿಗೆ ಟೈಗರ್ 3 ಸಿನಿಮಾವನ್ನು ಹೋಲಿಕೆ ಮಾಡಿ ಆ ರೇಂಜ್ ನಲ್ಲಿಲ್ಲ ಎಂದು ಅಭಿಮಾನಿಗಳು ನಿರಾಸೆ ಹೊರಹಾಕಿದ್ದಾರೆ. ಆದರೆ, ಆ್ಯಕ್ಷನ್ ಎಪಿಸೋಡ್‌ಗಳ ವಿಚಾರದಲ್ಲಿ ಯಾವುದೇ ಕಡಿತ ಆಗಿಲ್ಲವಂತೆ... ಹೀಗಾಗಿ ಸಲ್ಮಾನ್ ಅಭಿಮಾನಿಗಳು ಫುಲ್ ಜೋಶ್‌ನಲ್ಲಿದ್ದಾರೆ.

ಇದನ್ನೂ ಓದಿ-ಸಿಂಪಲ್‌ ಸ್ಟಾರ್‌ಗೆ ಕಾಂತಾರದಲ್ಲಿ ಒಂದು ರೋಲ್‌ ಮಾಡಲು ಆಸೆ: ರಕ್ಷಿತ್‌ ಶೆಟ್ಟಿಯ ಮನದಾಳದ ಮಾತು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News