Sudeep's Threat Letter : ಸುದೀಪ್ ಗೆ ಬೆದರಿಕೆ ಪತ್ರ ಪ್ರಕರಣ: ಕೊನೆಗೂ ಪೋಲಿಸರ ಬಲೆಗೆ ಬಿದ್ದ ಖ್ಯಾತ ಡೈರೆಕ್ಟರ್!

Kichcha Sudeep: ಕೆಲವು ದಿನಗಳ ಹಿಂದೆ ಅಷ್ಟೇ ನಟ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರವೊಂದು ಬಂದಿತ್ತು. ಬೆದರಿಕೆ ಪತ್ರ ಹಿನ್ನಲೆ ಎಲ್ಲೆಡೆ ಸಂಚಲನ ಮೂಡಿಸಿತ್ತು. ಈ ಪ್ರಕರಣ ಸಂಬಂಧ ಇದೀಗ ಸಿಸಿಬಿ ಪೊಲೀಸರು ಆರೋಪಿ ಡೈರೆಕ್ಟರ್ ರನ್ನು ಬಂಧಿಸಿದ್ದಾರೆ.    

Written by - Zee Kannada News Desk | Last Updated : May 6, 2023, 11:04 AM IST
  • ಬೆದರಿಕೆ ಪತ್ರ ಹಿನ್ನಲೆ ಆರೋಪಿ ಡೈರೆಕ್ಟರ್ ಬಂಧನ
  • ಈ ಪ್ರಕರಣ ಸಂಬಂಧ ಇದೀಗ ಸಿಸಿಬಿ ಪೊಲೀಸರ ಬಲೆಗೆ ಡೈರೆಕ್ಟರ್
  • ಬೆದರಿಕೆ ಪತ್ರ ಹಾಕಿರುವುದು ನಟ ಸುದೀಪ್‌ ಆಪ್ತ ಎಂದು ತಿಳಿದು ಬಂದಿದೆ
Sudeep's Threat Letter : ಸುದೀಪ್ ಗೆ ಬೆದರಿಕೆ ಪತ್ರ ಪ್ರಕರಣ: ಕೊನೆಗೂ ಪೋಲಿಸರ ಬಲೆಗೆ ಬಿದ್ದ ಖ್ಯಾತ ಡೈರೆಕ್ಟರ್! title=

ಬೆಂಗಳೂರು: ಕೆಲವು ದಿನಗಳ ಹಿಂದೆ ಅಷ್ಟೇ ನಟ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರವೊಂದು ಬಂದಿತ್ತು. ಬೆದರಿಕೆ ಪತ್ರ ಹಿನ್ನಲೆ ಎಲ್ಲೆಡೆ ಸಂಚಲನ ಮೂಡಿಸಿತ್ತು.
ಪ್ರಕರಣ ಸಂಬಂಧ  ಬಗ್ಗೆ ಸುದೀಪ್​ರ ಆಪ್ತ, ನಿರ್ಮಾಪಕ ಜಾಕ್ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಳಿಕ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗಿತ್ತು. ಇತ್ತೀಚೆಗೆ ಪೋಸ್ಟ್​ ಹಾಕಲು ಬಳಸಿದ್ದ ಕಾರು, ಪೋಸ್ಟ್​ ​ಬಾಕ್ಸ್ ಎಲ್ಲದರ ಸುಳಿವು ಸಿಕ್ಕಿತ್ತು.  ಇದೀಗ  ಆರೋಪಿ ಪೋಲಿಸ್‌ ಬಲಗೆ ಬಿದ್ದಿದ್ದಾರೆ. 

ಸುದೀಪ್‌ ಅವರಿಗೆ ಅನಾಮಧೇಯ ಬೆದರಿಕೆ ಪತ್ರ ಬರೆದಿರುವುದು, ಡೈರೆಕ್ಟರ್ ರಮೇಶ್ ಕಿಟ್ಟಿ ಎಂಬುವುದು ಬೆಳಕಿಗೆ ಬಂದಿದೆ. ಸಿಸಿಬಿ ಪೊಲೀಸರು ಪ್ರಕರಣ ಸಂಬಂಧ ಆರೋಪಿ ಡೈರೆಕ್ಟರ್ ರನ್ನು ಬಂಧಿಸಲಾಗಿದೆ. ರಮೇಶ್ ಕಿಟ್ಟಿ,ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರು. ಸಿನಿಮಾ ನಿರ್ದೇಶನ ಮಾಡಿ ಬಳಿಕ ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್​ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದನು. 

ಇದನ್ನೂ ಓದಿ: Mayamriga Serial: ಮಾಯಾಮೃಗ ಧಾರವಾಹಿ ನೆನಪಿದಿಯೇ...ಸಚ್ಚಿ ಪಾತ್ರಧಾರಿ ಕಾರ್ತಿಕ್‌ ವೈಭವ್‌ ಯಾರು ಗೊತ್ತಾ?

ರಮೇಶ್ ಕಿಟ್ಟಿ ಹಾಗೂ ಕಿಚ್ಚ ಸುದೀಪ್‌ ಇಬ್ಬರು ಆತ್ಮೀಯರಾಗಿದ್ದರು. ಕಿಚ್ಚ ಸುದೀಪ್ ಚಾರಿಟೇಬಲ್​ ಟ್ರಸ್ಟ್​ನ ಅಧ್ಯಕ್ಷನಾಗಿದ್ದ, ರಮೇಶ್ ಕಿಚ್ಚನೊಂದಿಗೆ ಹಣಕಾಸು ವಿಷಯಕ್ಕೆ ಕಿರಿಕ್‌ ಆಗಿ ಅನಾಮಧೇಯ  ಬೆದರಿಕೆ ಪತ್ರ ಬರೆದಿರುವುದಾಗಿ ಒಪ್ಪಿಕೊಂಡಿದ್ದಾರೆ...

ಕೆಲವು ದಿನಗಳ ಚಾರಿಟೇಬಲ್ ಟ್ರಸ್ಟ್​ಗೆ ಕಿಚ್ಚನನ್ನು ನಂಬಿ ರಮೇಶ್ ಎರಡು ಕೋಟಿ ಹಣ ಹೂಡಿಕೆ ಮಾಡಿದ್ದರಂತೆ. ಆ ಹಣವನ್ನು ವಾಪಸ್ ಕೇಳಿದಾಗ ಸುದೀಪ್ ಹಣ ಕೊಡಲು ಹಿಂಜರಿದ ಕಾರಣ ಬೆದರಿಕೆ ಪತ್ರ ಬರೆದಿರುವುದು ಒಪ್ಪೊಕೊಂಡಿದ್ದಾರೆ. ಅಷ್ಟ ಅಲ್ಲದೇ ಈ ಪ್ರಕರಣದಲ್ಲಿ ಇನ್ನು ಹಲವಾರು  ಜನರ ಕೈವಾಡ ಇರುವ ಶಂಕೆ ಘಟನೆ ಹಿನ್ನಲೆ ತನಿಖೆ ಮುಂದುವರಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಆದಿತ್ಯ ಬರ್ತ್ ಡೇ ಗೆ ಬಿಡುಗಡೆಯಾಯಿತು ‘ಟೆರರ್’ ಚಿತ್ರದ ಟೀಸರ್

ಬೆದರಿಕೆ ಪತ್ರದ ಹಿನ್ನಲೆ

ನಟ ಕಿಚ್ಚ ಸುದೀಪ್ ಅವರಿಗೆ ಎರಡು ಬೆದರಿಕೆ ಪತ್ರಗಳು  ಬಂದಿದ್ದವು.  ಮಾರ್ಚ್ ತಿಂಗಳಿನಲ್ಲಿ ಬಂದ ಬೆದರಿಕೆ ಪತ್ರದಲ್ಲಿ ನಿಮ್ಮ ಖಾಸಗಿ ವಿಡಿಯೋಗಳನ್ನ ಲೀಕ್ ಮಾಡುತ್ತೇವೆ’’ ಎಂದು ಬರೆಯಲಾಗಿತ್ತು. ಅದರೊಟ್ಟಿಗೆ ಕಿಚ್ಚನಿಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಲಾಗಿತ್ತು. ಪತ್ರ ಕುರಿತು ಅಭಿನಯ ಚಕ್ರವರ್ತಿ‘’ನಮ್ಮ ಚಿತ್ರರಂಗದಲ್ಲಿ ಇರೋರೇ ಈ ಕೆಲಸ ಮಾಡಿದ್ದಾರೆ. ಅದು ಯಾರು ಅಂತಲೂ ನನಗೆ ಗೊತ್ತಿದೆ. ನಾನು ಯಾವುದಕ್ಕೂ ಹೆದರೋನು ಅಲ್ಲ’’ ಎಂದು ಕಿಚ್ಚ ಸುದೀಪ್ ಮಾಧ್ಯಮಗಳ ಮುಂದೆ ಹೇಳಿದ್ದರು.
ಸದ್ಯ ವಿಚಾರವಾಗಿ ಸಿಸಿಬಿ ಪೋಲಿಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ. 

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News