ತನುಶ್ರೀ-ಪಟೇಕರ್ ಪ್ರಕರಣ: ಘಟನೆ ನಡೆದಾಗ ನಾನಿನ್ನು ಚಿಕ್ಕ ಹುಡುಗ -ಶಕ್ತಿ ಕಪೂರ್ ವ್ಯಂಗ್ಯ

ನಾನಾ ಪಾಟೇಕರ್ ಅವರ ವಿರುದ್ಧದ ಆರೋಪಗಳ ವಿಚಾರವಾಗಿ ಹಲವಾರು ಬಾಲಿವುಡ್ ನಟ ನಟಿಯರು ತನುಶ್ರೀ ದತ್ತಾರವರ ಬೆಂಬಲಕ್ಕೆ ನಿಂತಿದ್ದಾರೆ. ಈ ವಿಚಾರವಾಗಿ ಹಿರಿಯ ನಟ ಶಕ್ತಿ ಕಪೂರ್ ಕೇಳಿದಾಗ ಈ ಘಟನೆಯು 10 ವರ್ಷಗಳ ಹಿಂದೆ ನಡೆದದ್ದು ಆಗ ತಾವಿನ್ನು ಚಿಕ್ಕ ಹುಡುಗ ಎಂದು ವ್ಯಂಗ್ಯವಾಡಿದ್ದಾರೆ.

Last Updated : Oct 3, 2018, 02:50 PM IST
ತನುಶ್ರೀ-ಪಟೇಕರ್ ಪ್ರಕರಣ: ಘಟನೆ ನಡೆದಾಗ ನಾನಿನ್ನು ಚಿಕ್ಕ ಹುಡುಗ -ಶಕ್ತಿ ಕಪೂರ್ ವ್ಯಂಗ್ಯ title=
Photo:ANI

ಮುಂಬೈ: ನಾನಾ ಪಾಟೇಕರ್ ಅವರ ವಿರುದ್ಧದ ಆರೋಪಗಳ ವಿಚಾರವಾಗಿ ಹಲವಾರು ಬಾಲಿವುಡ್ ನಟ ನಟಿಯರು ತನುಶ್ರೀ ದತ್ತಾರವರ ಬೆಂಬಲಕ್ಕೆ ನಿಂತಿದ್ದಾರೆ. ಈ ವಿಚಾರವಾಗಿ ಹಿರಿಯ ನಟ ಶಕ್ತಿ ಕಪೂರ್ ಕೇಳಿದಾಗ ಈ ಘಟನೆಯು 10 ವರ್ಷಗಳ ಹಿಂದೆ ನಡೆದದ್ದು ಆಗ ತಾವಿನ್ನು ಚಿಕ್ಕ ಹುಡುಗ ಎಂದು ವ್ಯಂಗ್ಯವಾಡಿದ್ದಾರೆ.

ಮಾಧ್ಯಮದೊಂದಿಗಿನ  ಇತ್ತೀಚಿನ ಸಂವಾದದಲ್ಲಿ  ಶಕ್ತಿ ಕಪೂರ್ ಮಾತನಾಡುತ್ತಾ  "ಈ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಇದು 10 ವರ್ಷಗಳ ಹಿಂದೆ ನಡೆದದ್ದು ಆಗ ನಾನು  ಮಗುವಾಗಿದ್ದೆ"ಎಂದು ದತ್ತಾರ ಲೈಂಗಿಕ ಕಿರುಕುಳದ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

ಹಾರ್ನ್ ಓಕೆ ಪ್ಲೀಸ್' ಚಿತ್ರದ ಸೆಟ್ನಲ್ಲಿ ಪಟೇಕರ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತನುಶ್ರೀ ದತ್ತಾ ಆರೋಪಿಸಿದ್ದರು. ಚಲನಚಿತ್ರದಲ್ಲಿನ ಹಾಡಿಗಾಗಿ ಡ್ಯಾನ್ಸ್ ನ  ಚಿತ್ರೀಕರಣದ ಸಂದರ್ಭದಲ್ಲಿ  ಪಟೇಕರ್ ಅವರು ತಮಗೆ  ಕಿರುಕುಳ ನೀಡಿದ್ದರು ಎಂದು  ಕೊರಿಯೋಗ್ರಾಪರ್ ಗಣೇಶ್ ಆಚಾರ್ಯ ಮೇಲೆಯೂ ಸಹ ನಟಿ ದೂರಿದ್ದರು.

ಪ್ರಿಯಾಂಕಾ ಚೋಪ್ರಾ, ಪರಿಿನೀತಿ ಚೋಪ್ರಾ, ಫರ್ಹಾನ್ ಅಖ್ತರ್, ಸ್ವರಾ ಭಾಸ್ಕರ್, ಶಿಲ್ಪಾ ಶೆಟ್ಟಿ, ಕಲ್ಕಿ ಕೋಚ್ಲಿನ್ ಮತ್ತು ಸೋನಮ್ ಕಪೂರ್ ಅಹುಜಾ ಸೇರಿದಂತೆ ಹಲವು ಬಾಲಿವುಡ್ ನಟಿಯರು ತನುಶ್ರೀ ಅವರಿಗೆ ಬೆಂಬಲ ನೀಡಿದ್ದರು .ಆದರೆ ಇದರ ಮಧ್ಯ ಪಟೇಕರ್ ಅವರ ವಕೀಲರು  ಲಿಖಿತ ಕ್ಷಮೆಕೋರಿ ದತ್ತಾಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಆದರೆ  ತನುಶ್ರೀ ತಮಗೆ ಇದುವರೆಗೂ ಯಾವುದೇ ರೀತಿಯ  ನೋಟಿಸ್ ಬಂದಿಲ್ಲ ಎಂದು ತಿಳಿಸಿದ್ದರು.

Trending News