ಹೋಳಿ ಹಬ್ಬದಂದು ಭಾರಿ ಹಲ್-ಚಲ್ ಸೃಷ್ಟಿಸಿದ Jacqueline Fernandez ಹಾಡು

ಬಿಡುಗಡೆಯ ಮೊದಲನೇ ದಿನವೇ ಈ ಹಾಡಿಗೆ 6,972,558 ವ್ಯೂಸ್ ದೊರೆತಿದ್ದರೆ, ಇದುವರೆಗೆ ಇದು 24,740,037 ಬಾರಿ ವೀಕ್ಷಣೆಗೆ ಒಳಗಾಗಿದೆ.

Last Updated : Mar 11, 2020, 11:45 AM IST
ಹೋಳಿ ಹಬ್ಬದಂದು ಭಾರಿ ಹಲ್-ಚಲ್ ಸೃಷ್ಟಿಸಿದ Jacqueline Fernandez ಹಾಡು title=

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಬಹು ನೀರಿಕ್ಷಿತ ಆಕ್ಷನ್ ಚಿತ್ರ 'ಅಟ್ಯಾಕ್'ನ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. ಈ ಮಧ್ಯೆ ಅವರ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹಲ್-ಚಲ್ ಸೃಷ್ಟಿಸಿದೆ. ಅಮಿತಾಭ್ ಬಚ್ಚನ್ ಅವರ ಖ್ಯಾತ 'ಮೇರೆ ಅಂಗನೆ ಮೇ' ಹಾಡಿನ ರಿಕ್ರಿಯೆಟ್ ವರ್ಜನ್ ನಲ್ಲಿ ಜಾಕ್ವೆಲಿನ್, ಬಿಗ್ ಬಾಸ್ 13 ಖ್ಯಾತಿಯ ಫೇಮಸ್ ಮಾಡೆಲ್ ಅಸೀಮ್ ರಿಯಾಜ್ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ಮೊದಲನೆಯ ದಿನವೇ ಈ ಹಾಡಿವೆ 6,972,558 ವ್ಯೂಸ್ ದೊರೆತಿದ್ದರೆ, ಇದುವರೆಗೆ ಇದು 24,740,037 ಬಾರಿ ವೀಕ್ಷಣೆಗೆ ಒಳಗಾಗಿದೆ.

ತನಿಶ್ಕ್ ಬಾಗ್ಚಿ ಈ ಹಾಡನ್ನು ರಿಕ್ರಿಯೇಟ್ ಮಾಡಿದ್ದಾರೆ
ಮಾರ್ಚ್ 8ರಂದು ಹೋಳಿ ಹಬ್ಬದ ಪ್ರಯುಕ್ತ ಟಿ-ಸೀರಿಸ್ ಈ ಹಾಡನ್ನು ಬಿಡುಗಡೆ ಮಾಡಿತ್ತು. ಜಾಕ್ವೆಲಿನ್ ಹಾಗೂ ಅಸೀಮ್ ಅವರ ಈ ಮ್ಯೂಸಿಕ್ ವಿಡಿಯೋ ಅನ್ನು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಟಿ-ಸೀರಿಸ್ ನ ಅಧಿಕೃತ ಯೂಟ್ಯೂಬ್ ಪುಟದಲ್ಲಿ ಈ ಹಾಡನ್ನು ಅಪ್ಲೋಡ್ ಮಾಡಲಾಗಿದೆ. 'ಮೇರೆ ಅಂಗನೆ ಮೇ..' ಪದಗಳು ಇರುವ ಈ ಹಾಡಿನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಅಸೀಮ್ ಹೋಳಿ ಹಬ್ಬದ ರಂಗಿನಲ್ಲಿ ಮುಳುಗಿಹೋಗಿದ್ದಾರೆ. ರಾಜಾ ಹಸನ್ ಹಾಗೂ ನೇಹಾ ಕಕ್ಕಡ್ ಧ್ವನಿ ನೀಡಿರುವ ಈ ಹಾಡನ್ನು ತನಿಶ್ಕ್ ಬಾಗ್ಚಿ ರಿಕ್ರಿಯೇಟ್ ಮಾಡಿದ್ದಾರೆ. ವಾಯು ಈ ಹಾಡಿನ ಗೀತ ರಚನೆಕಾರರಾಗಿದ್ದಾರೆ. ಈ ಹಾಡಿನಲ್ಲಿ ಜಾಕ್ವೆಲಿನ್ ಹಾಗೂ ನಸೀಮ್ ಜೋಡಿಗೆ ಪ್ರೇಕ್ಷಕರ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಮ್ಯೂಸಿಕ್ ನಲ್ಲಿ ಜಾಕ್ವೆಲಿನ್ ಮಾಡಿರುವ ನೃತ್ಯವನ್ನು ನೋಡಿ ನೀವು ಈ ವಿಡಿಯೋವನ್ನು ಪದೆ ಪದೆ ವೀಕ್ಷಿಸುವಿರಿ. ವಿಡಿಯೋ ಬಿಡುಗಡೆಗೂ ಮುನ್ನವೇ ಜಾಕ್ವೆಲಿನ್ ಈ ಹಾಡಿಗೆ ಸಂಬಂಧಿಸಿ ಹಲವು ಭಾವಚಿತ್ರಗಳು ಹಾಗೂ ಟೀಸರ್ ಅನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಾಕ್ವೆಲಿನ್ ಹಂಚಿಕೊಂಡ ಟೀಸರ್ ಬಳಿಕ ಅವಳ ಅಭಿಮಾನಿಗಳು ಈ ಹಾಡಿನ ಬಿಡುಗಡೆಗೆ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಜಾನ್ ಅಬ್ರಹಾಂ ಅಭಿನಯದ 'ಅಟ್ಯಾಕ್' ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ಇನ್ನೋರ್ವ ಬಾಲಿವುಡ್ ಬೆಡಗಿ ರಾಕುಲ್ ಪ್ರೀತ್ ಸಿಂಗ್ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. 'ಅಟ್ಯಾಕ್' ಚಿತ್ರದ ಮೂಲಕ ಲಕ್ಷರಾಜ್ ಆನಂದ್ ಮೊದಲ ಬಾರಿಗೆ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ. ಜಾನ್ ಅಬ್ರಾಹಾಂ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

Trending News