ಬಾಲಿವುಡ್ ನಟ ಶಶಿಕಪೂರ್ ರವರು ಕಪೂರ್ ಕುಟುಂಬದಲ್ಲಿಯೇ ಭಿನ್ನವಾದ ವ್ಯಕ್ತಿತ್ವ. ಒಂದು ಕಡೆ ಮಸಾಲಾ ಚಲನಚಿತ್ರಗಳಾದ ದೀವಾರ್ ಮತ್ತು ಸುಹಾಗ್, ಇನ್ನೊಂದೆಡೆಗೆ ಕಲಿಯುಗ್, ಶೇಕ್ಸಪೀಯರ್ ವಾಲಾದಂತಹ ಕಲಾತ್ಮಕ ಚಿತ್ರಗಳಲ್ಲಿ ತಮ್ಮ ಪ್ರಯೋಗಶೀಲತೆಯನ್ನು ಕಂಡುಕೊಂಡರು.
ಶಶಿ ಪೃಥ್ವಿ ಥೇಟರ್ ನ ಸಂಸ್ಥಾಪಕರಲ್ಲೋಬ್ಬರಾಗಿದ್ದರು ಸಹಾ, ಅದು ಅವರ ಬಾಳ ಸಂಗಾತಿ ಇಂಗ್ಲೀಷ ಚಿತ್ರನಟಿ ಜೆನ್ನಿಫರ್ ರವರ ಸಹಾಯವಿಲ್ಲದೆ ಅದು ಕೈಗೂಡುತ್ತಿರಲಿಲ್ಲ ಎಂದು ಹೇಳಬಹುದು.ಜೆನ್ನಿಫರ್ 'ಬಾಂಬೆ ಟಾಕಿ' 'ಜುನೂನ್' ನಂತಹ ಕೆಲವು ಭಾರತೀಯ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಈ ಜೋಡಿಯು 50ರ ದಶಕದಲ್ಲಿ ಅತ್ಯಂತ ಜನಪ್ರಿಯವಾಗಿತ್ತು.ಆ ಸಂದರ್ಭದಲ್ಲಿ ಹುಟ್ಟಿಕೊಂಡ ಇವರಿಬ್ಬರ ಪ್ರೇಮಕಥೆ ಮುಂದೆ ಅದು ರಂಗಭೂಮಿ ಮತ್ತು ಸಿನಿಮಾದ ಪಯಣಗಳ ಜೊತೆಗೆ ಜೀವನ ಪಯಣವನ್ನು ಸಹ ಕಂಡು ಕೊಂಡಿತ್ತು. ಆಗ ಜೆನ್ನಿಫರ್ ತಮ್ಮ ತಂದೆಯವರ ಜೊತೆಗೆ ಇಂಗ್ಲೀಷ ನಾಟಕವಾದ ಶೇಕ್ಸಪೆರೆನಾ ಡ್ರಾಮಾ ತಂಡದ ಜೊತೆಗೆ ಭಾರತಕ್ಕೆ ನಾಟಕವನ್ನು ಪ್ರದರ್ಶಿಸಲು ಪ್ರವಾಸವನ್ನು ಕೈಗೊಂಡಿದರು.ಈ ಸಂದರ್ಭದಲ್ಲಿ ಶಶಿಕಪೂರ್ ಕೂಡ ತಮಗಿರುವ ನಾಟಕದ ಮೇಲಿನ ಪ್ರೀತಿಯಿಂದಾಗಿ ಅವರು ಆ ತಂಡದ ಜೊತೆ ಕೂಡಿಕೊಂಡರು.ಈ ಸಂದರ್ಭದಲ್ಲಿ ಶಶಿಕಪೂರರವರು ಜೆನ್ನಿಫರ್ ಜೊತೆ ಹಲವು ನಾಟಕ ಪ್ರದರ್ಶನಗಳನ್ನು ಕೈಗೊಂಡರು.ಈ ಸಂಧರ್ಭದಲ್ಲಿ ಇರ್ವ ನಟರಿಬ್ಬರೂ ಪ್ರೇಮ ಪಾಶಕ್ಕೆ ಬಿದ್ದರು.ಆದರಲ್ಲೂ ಜೆನ್ನಿಫರ್ ಶೆಕ್ಸಪಿಯರ್ನ ನಾಟಕವಾದ 'ದಿ ಟೆಂಪೆಸ್ಟ್' ನಲ್ಲಿ ಮಿರಾಂಡಾ ಎನ್ನುವ ಪಾತ್ರ ಈ ಜೋಡಿಗಳ ಪ್ರೇಮಕತೆಗೆ ನಾಂದಿ ಹಾಡಿತು. ನಂತರ 1957 ರಲ್ಲಿ ಸಿಂಗಾಪೂರ್ ಗೆ ನಾಟಕ ಪ್ರದರ್ಶನಕ್ಕೆ ಎಂದು ಹೋದಾಗ ಅವರಿಬ್ಬರೂ ಪರಸ್ಪರ ತಮ್ಮ ಪ್ರೀತಿಯನ್ನು ಹಂಚಿಕೊಂಡರು.
ಊಟಿಯಲ್ಲಿ ನಾಟಕ ಸಂದರ್ಭದ ವೇಳೆ ಗೀತಾ ಬಾಲಿ, ಕಪೂರ್ ಕುಟುಂಬದಲ್ಲಿ ಜೆನ್ನಿಫರ್ ರನ್ನು ಭೇಟಿಯಾಗಿ ಅವಳಿಗೆ 'ದುಪ್ಪಟ್ಟ'ವನ್ನು ಕಾಣಿಕೆಯಾಗಿ ನೀಡಿದ್ದರು. 1958 ರಲ್ಲಿ ಈ ಜೋಡಿಗಳು ಮದುವೆಯಾದಾಗ ಶಶಿಕಪೂರಗೆ 20 ಜೆನ್ನಿಫರ್ಗೆ 25 ವರ್ಷ ತುಂಬಿತ್ತು.ಮುಂದೆ ಈ ಜೋಡಿಗಳು ಮುಂಬೈನ ಪೃಥ್ವಿ ಥೇಟರ್ ಮೂಲಕ ರಂಗಭೂಮಿ ಸೇವೆಯನ್ನು ಸಹ ಮಾಡಿದರು.
ಈ ದಂಪತಿಗಳಿಗೆ ಕುನಾಲ್ ಕಪೂರ್, ಕರಣ್ ಕಪೂರ್, ಸಂಜನಾ ಕಪೂರ್ ಎನ್ನುವ ಮೂವರು ಮಕ್ಕಳಿದ್ದಾರೆ.
ಜೆನ್ನಿಫರ್ 1982 ರಲ್ಲಿ ಕಾನ್ಸೆರ್ ರೋಗಕ್ಕೆ ತುತ್ತಾಗಿ 1984 ರಲ್ಲಿ ಕೊನೆಯುಸಿರೆಳೆದಿದ್ದರು.