ಡ್ರಗ್ಸ್‌ ಮಾರಾಟದ ವೇಳೆ ʼಕಬಾಲಿʼ ಚಿತ್ರದ ನಿರ್ಮಾಪಕನ ಬಂಧನ

Krishna Choudhary : ಮಾದಕ ವಸ್ತು ಮಾರಾಟದ ಆರೋಪದ ಮೇಲೆ ತೆಲುಗು ನಿರ್ಮಾಪಕ ಕೃಷ್ಣ ಚೌಧರಿ ಎಂಬಾತನನ್ನು ಸೈಬರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಒಟ್ಟು 78 ಲಕ್ಷ ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ. 

Written by - Savita M B | Last Updated : Jun 16, 2023, 09:18 AM IST
  • ತೆಲುಗಿನ ಕಬಾಲಿ ಚಿತ್ರದ ನಿರ್ಮಾಪಕ ಕೃಷ್ಣ ಪ್ರಸಾದ್‌ ಚೌಧರಿ
  • ಎರಡು ತೆಲುಗು ಮತ್ತು ಒಂದು ತಮಿಳು ಚಿತ್ರಕ್ಕೆ ವಿತರಕರಾಗಿದ್ದರು
  • ಗೇಬ್ರಿಯಲ್‌ ಎಂಬಾತನಿಂದ ಕೃಷ್ಣ ಪ್ರಸಾದ್‌ ಚೌಧರಿ ಗೋವಾದಲ್ಲಿ ಡ್ರಗ್ಸ್‌ ಖರೀದಿಸುತ್ತಿದ್ದ
ಡ್ರಗ್ಸ್‌ ಮಾರಾಟದ ವೇಳೆ ʼಕಬಾಲಿʼ ಚಿತ್ರದ ನಿರ್ಮಾಪಕನ ಬಂಧನ  title=

Hyderabad : ತಮಿಳಿನ ಕಬಾಲಿ ಚಿತ್ರದ ನಿರ್ಮಾಪಕ ಕೃಷ್ಣ ಪ್ರಸಾದ್‌ ಚೌಧರಿ, ಎರಡು ತೆಲುಗು ಮತ್ತು ಒಂದು ತಮಿಳು ಚಿತ್ರಕ್ಕೆ ವಿತರಕರಾಗಿದ್ದರು. ಆದರೆ ನಿರೀಕ್ಷಿತ ಲಾಭ ಸಿಗಲಿಲ್ಲ. ತದನಂತರ ಗೋವಾಕ್ಕೆ ಹೋಗಿ ಅಲ್ಲಿ ಕ್ಲಬ್‌ ಆರಂಭಿಸಿ, ಅಲ್ಲಿ ಬರುವ ಸ್ನೇಹಿತರು ಹಾಗೂ ಸೆಲೆಬ್ರಿಟಿಗಳಿಗೆ ಮಾದಕ ದ್ರವ್ಯವನ್ನು ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಈ ವ್ಯಾಪಾರದಲ್ಲೂ ನಷ್ಟವನ್ನು ಅನುಭವಿಸಿ ಚೌಧರಿ ಹೈದರಾಬಾದ್‌ಗೆ ಮರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. 

ನೈಜೀರಿಯಾ ಮೂಲದ ಗೇಬ್ರಿಯಲ್‌ ಎಂಬಾತನಿಂದ ಕೃಷ್ಣ ಪ್ರಸಾದ್‌ ಚೌಧರಿ ಗೋವಾದಲ್ಲಿ ಡ್ರಗ್ಸ್‌ ಖರೀದಿಸುತ್ತಿದ್ದ. ನಂತರ ಹೈದರಾಬಾದ್‌ನಲ್ಲಿ ಟಾಲಿವುಡ್‌ನ ಸೆಲೆಬ್ರಿಟಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಕುರಿತು ಮಾಹಿತಿ ಪಡೆದುಕೊಂಡಿದ್ದ ಪೊಲೀಸರು ಆತನನ್ನು ಹಿಂಬಾಲಿಸಿ ಸಿನಿಮಾ ಶೈಲಿಯಲ್ಲಿಯೇ ದಾಳಿ ಮಾಡಿದ್ದಾರೆ. 

ಇದನ್ನೂ ಓದಿ-ನವೀನ್ ಶಂಕರ್ ಅಭಿನಯದ "ಕ್ಷೇತ್ರಪತಿ" ಚಿತ್ರದ ಟೀಸರ್ ಗೆ ಅಭಿಮಾನಿಗಳು ಫಿದಾ

ಇದೇ ವೇಳೆ ನಿರ್ಮಾಪಕನಿಂದ 82.75 ಗ್ರಾಂ ಕೊಕೇನ್‌, ಒಂದು ಕಾರು, 2.05 ಲಕ್ಷ ನಗದು, 4 ಮೊಬೈಲ್‌ ವಶಪಡಿಸಿಕೊಳ್ಳಲಾಗಿದ್ದು, ಗೇಬ್ರಿಯಲ್‌ ತಲೆಮರೆಸಿಕೊಂಡು ಹೋಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಕೃಷ್ಣ ಚೌಧರಿ ಅವರು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಕಬಾಲಿ ಸಿನಿಮಾದ ತೆಲಗು ಅವತರಣಿಕೆಗೆ ಬಂಡವಾಳ ಹೂಡಿದ್ದರು. ಹಲವು ತೆಲಗು ಮತ್ತು ತಮಿಳು ಸಿನಿಮಾಗಳಿಗೆ ವಿತರಕರಾಗಿಯೂ ಕಾಣಿಸಿಕೊಂಡಿದ್ದಾರೆ. ಸರ್ದಾರ್‌ ಗಬ್ಬರ್‌ ಸಿಂಗ್‌, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಮುಂತಾದ ಚಿತ್ರಗಳಿಗೆ ಇವರು ವಿತರಕರಾಗಿದ್ದರು. 

ಇದನ್ನೂ ಓದಿ-ಧೋನಿ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ರೆಡಿ...ಕರ್ನಾಟಕದಲ್ಲಿಯೂ ರಿಲೀಸ್ ಆಗಲಿದೆ LGM-ಲೆಟ್ಸ್ ಗೆಟ್ ಮ್ಯಾರೀಡ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News