ʼದಿ ಕೇರಳ ಸ್ಟೋರಿʼ ನಟಿ ಆದಾ ಶರ್ಮಾಗೆ ಆನ್‌ಲೈನ್‌ ಬೆದರಿಕೆ; ವೈಯಕ್ತಿಕ ಮಾಹಿತಿ ಲೀಕ್‌

The Kerala Story : ವಿವಾದಾತ್ಮಕ ಸಿನಿಮಾ ʼದಿ ಕೇರಳ ಸ್ಟೋರಿʼ ಸಾಕಷ್ಟು ಅಡೆತಡೆಗಳನ್ನು ಮೀರಿ ಬಿಡುಗಡೆಯಾಗಿ ಇಂದು ದೇಶದಾದ್ಯಂತ ಉತ್ತಮ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ. ಹಲವೆಡೆ ಈ ಸಿನಿಮಾ ಪ್ರದರ್ಶನವನ್ನು ನಿಷೇಧಿಸಲಾಯಿತು, ಇನ್ನು ಹಲವೆಡೆ ಈ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ಸಿನಿಮಾ ಬಾಕ್ಸಾಫೀಸ್‌ನಲ್ಲಿಯೂ ಸಖತ್‌ ಸೌಂಡ್‌ ಮಾಡುತ್ತಿದೆ.  

Written by - Zee Kannada News Desk | Last Updated : May 25, 2023, 10:46 AM IST
  • ನಟಿ ಆದಾ ಶರ್ಮಾಗೆ ಆನ್‌ಲೈನ್‌ನಲ್ಲಿ ಬೆದರಿಕೆಗಳು ಬರುತ್ತಿವೆ.
  • ಆನ್‌ ಲೈನ್‌ ಹ್ಯಾಕರ್‌ ಒಬ್ಬ ನಟಿಯ ವೈಯಕ್ತಿಕ ಮಾಹಿತಿಯನ್ನು ಲೀಕ್‌ ಮಾಡಿದ್ದಾನೆ.
  • ಆದರೆ ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ.
ʼದಿ ಕೇರಳ ಸ್ಟೋರಿʼ ನಟಿ ಆದಾ ಶರ್ಮಾಗೆ ಆನ್‌ಲೈನ್‌ ಬೆದರಿಕೆ; ವೈಯಕ್ತಿಕ ಮಾಹಿತಿ ಲೀಕ್‌ title=

Adah Sharma : ʼದಿ ಕೇರಳ ಸ್ಟೋರಿʼ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ಈ ಸಿನಿಮಾದ ನಟಿ ಆದಾ ಶರ್ಮಾಗೆ ಆನ್‌ಲೈನ್‌ನಲ್ಲಿ ಬೆದರಿಕೆಗಳು ಬಂದಿದ್ದು, ಆನ್‌ ಲೈನ್‌ ಹ್ಯಾಕರ್‌ ಒಬ್ಬ ನಟಿಯ ವೈಯಕ್ತಿಕ ಮಾಹಿತಿಯನ್ನು ಲೀಕ್‌ ಮಾಡಿದ್ದಾನೆ. ಈ ಸಿನಿಮಾ ಬಿಡುಗಡೆಗೆ ಮುಂಚೆಯೇ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. 

ಈ ಚಿತ್ರದ ಬಿಡುಗಡೆಯ ನಂತರ ನಟಿಗೆ ಒಂದಲ್ಲಾ ಒಂದು ರೀತಿಯ ಬೆದರಿಕೆಯನ್ನು ಹಾಕಲಾಗುತ್ತಿದೆ. ಕೇರಳದಲ್ಲಿ ಕಾಣೆಯಾದ 32 ಸಾವಿರ ಮಹಿಳೆಯರ ಕಥೆ ʼದಿ ಕೇರಳ ಸ್ಟೋರಿʼ ಎಂದು ಚಿತ್ರತಂಡ ಹೇಳಿದಾಗಿನಿಂದಲೂ ಈ ಚಿತ್ರಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾದವು.

ಇದನ್ನೂ ಓದಿ-ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಶಾರುಖ್‌ ಖಾನ್‌;ಹೃದಯವಂತ ಎಂದ ಫ್ಯಾನ್ಸ್‌

ನಟಿ ಅದಾ ಶರ್ಮಾಗೆ ಇನ್‌ಸ್ಟಾಗ್ರಾಂನಲ್ಲಿ ʼಜುಮುಂಡ ಬೋಲ್ಟೆʼ (jhamunda_bolte) ಎಂಬ ಖಾತೆಯ ಬಳಕೆದಾರ ನಟಿಯ ಮೊಬೈಲ್‌ ನಂಬರ್‌ನ್ನು ಲೀಕ್‌ ಮಾಡಿದ್ದಾನೆ. ಇಷ್ಟೇ ಅಲ್ಲದೇ ನಟಿಯ ಹೊಸ ಪೋನ್‌ ನಂಬರ್‌ನ್ನು ಲೀಕ್‌ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಇನ್‌ಸ್ಟಾಗ್ರಾಂನಲ್ಲಿ ಬೆದರಿಕೆ ಬಂದ ಖಾತೆಯನ್ನು ತೆಗೆದು ಹಾಕಲಾಗಿದೆ. ಅದಾ ಶರ್ಮಾ ಅಭಿಮಾನಿಗಳು ಮುಂಬೈನ ಸೈಬರ್‌ ಸೆಲ್‌ಗೆ ದೂರು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ. 

 
 
 
 

 
 
 
 
 
 
 
 
 
 
 

A post shared by Adah Sharma (@adah_ki_adah)

ಇನ್ನೂ ʼದಿ ಕೇರಳ ಸ್ಟೋರಿʼ ನಟಿ ತಮ್ಮ ಸಿನಿಮಾಗೆ ಬೆಂಬಲ ನೀಡಿದವರಿಗೆಲ್ಲ ಧನ್ಯವಾದಗಳನ್ನು ಹೇಳಿದ್ದಾರೆ. "ಅನೀರಿಕ್ಷಿತವೇ ಜೀವನದ ಬೆಸ್ಟ್‌ ಪಾರ್ಟ್‌. ಏಕೆಂದರೆ ಅಲ್ಲಿ ಯಾವ ನಿರೀಕ್ಷೆಗಳು ಇರುವುದಿಲ್ಲ. ಪ್ರೇಕ್ಷಕರಿಗೆ ಧನ್ಯವಾದಗಳು" ಎಂದು ಹೇಳಿ ಪೋಸ್ಟ್‌ ಶೇರ್‌ ಮಾಡಿದ್ದರು. ನನ್ನ ಮೇಲೆ ನಂಬಿಕೆಯಿಟ್ಟು ಶಾಲಿನಿ ಉನ್ನಿಕೃಷ್ಣನ್‌ ಎಂಬ ಪಾತ್ರವನ್ನು ನನಗೆ ಕೊಟ್ಟ ʼದಿ ಕೇರಳ ಸ್ಟೋರಿʼ ನಿರ್ಮಾಪಕ ವಿಪುಲ್‌ ಸರ್‌ ತುಂಬಾ ರಿಸ್ಕ್‌ ತೆಗೆದುಕೊಂಡು ಈ ಸಿನಿಮಾ ಮಾಡಿದ್ದಾರೆ. ಎಂದಿದ್ದರು. 

ಇದನ್ನೂ ಓದಿ-ಈ ಸಮಸ್ಯೆಯೇ ಸಲ್ಮಾನ್ ಖಾನ್ ಇನ್ನೂ ಮದುವೆಯಾಗದಿರಲು ಕಾರಣವಂತೆ! ತಂದೆ ಸಲೀಂ ಬಿಚ್ಚಿಟ್ಟ ಸತ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News