ಸಿನಿಮಾ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ʼದಿ ಕೇರಳ ಸ್ಟೋರಿʼ ಚಿತ್ರತಂಡ

The Kerala Story : ವಿವಾದಾತ್ಮಕ ಚಿತ್ರ ದಿ ಕೇರಳ ಸ್ಟೋರಿ ಚಿತ್ರದ ಪ್ರದರ್ಶನವನ್ನು ಪಶ್ಚಿಮ ಬಂಗಾಳ ಸರ್ಕಾರ ನಿಷೇದಿಸಿದೆ. ಅಲ್ಲದೇ ಚಿತ್ರದ ಪ್ರದರ್ಶನಗಳನ್ನು ಸ್ವಯಂ ಪ್ರೇರಿತರಾಗಿ ರದ್ದುಗೊಳಿಸಿರುವ ತಮಿಳುನಾಡು ಮಲ್ಟಿಪ್ಲೆಕ್ಸ್‌ ಮಾಲೀಕರ ಸಂಘವನ್ನು ಪ್ರಶ್ನಿಸಿ ಚಿತ್ರತಂಡ ಸುಪ್ರೀಂ ಕೋರ್ಟ್‌ನ ಮೊರೆಹೋಗಿದೆ.   

Written by - Zee Kannada News Desk | Last Updated : May 12, 2023, 09:14 AM IST
  • ʼದಿ ಕೇರಳ ಸ್ಠೋರಿʼ ಸಿನಿಮಾವನ್ನು ಪ್ರದರ್ಶಿಸದಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು.
  • ಪಶ್ಚಿಮ ಬಂಗಾಳ ಸರ್ಕಾರ ನೀಡಿರುವ ನಿರ್ಭಂದವನ್ನು ತೆರವುಗೊಳಿಸಬೇಕು ಎಂದು ನಿರ್ಮಾಪಕರು ಸುಪ್ರೀಂ ಕೋರ್ಟ್‌ ಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
  • ಜೊತೆಗೆ ತಮಿಳುನಾಡಿನಲ್ಲಿ ಅನಧಕೃತವಾಗಿ ಚತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿದ್ದಾರೆ.
ಸಿನಿಮಾ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ʼದಿ ಕೇರಳ ಸ್ಟೋರಿʼ ಚಿತ್ರತಂಡ  title=

West Bengal Government : ʼದಿ ಕೇರಳ ಸ್ಠೋರಿʼ ಸಿನಿಮಾವನ್ನು ಪ್ರದರ್ಶಿಸದಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಪಶ್ಚಿಮ ಬಂಗಾಳ ಸರ್ಕಾರ ನೀಡಿರುವ ನಿರ್ಭಂದವನ್ನು ತೆರವುಗೊಳಿಸಬೇಕು ಎಂದು ನಿರ್ಮಾಪಕರು ಸುಪ್ರೀಂ ಕೋರ್ಟ್‌ ಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಜೊತೆಗೆ ತಮಿಳುನಾಡಿನಲ್ಲಿ ಅನಧಕೃತವಾಗಿ ಚತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮನವಿ ಮಾಡಿಕೊಂಡವರ ಪರ ವಾದ ನಡೆಸಿರುವ ವಕೀಲ ಹರೀಶ್‌ ಸಾಳ್ವೆ ʼಚಿತ್ರದ ನಿರ್ಮಾಪಕರು ದಿನೇ ದಿನೇ ಹಣ ಕಳೆದುಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ರಾಜ್ಯ ಚಿತ್ರ ನಿಷೇಧಕ್ಕೆ ಮುಂದಾಗಿದೆ. ಎಂದು ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರ ಏಕಸದಸ್ಯ ಮಾಹಿತಿ ನೀಡಿದ್ದಾರೆ. ಈ ವಿಚಾರಕ್ಕೆ ಅನುಮತಿ ನೀಡಿರುವ ಮುಖ್ಯ ನ್ಯಾಯ ಮೂರ್ತಿಗಳು, ಪಶ್ಚಿಮ ಬಂಗಾಳಕ್ಕೆ ನೋಟಿಸ್‌ ನೀಡುವಂತೆ ತಿಳಿಸಿದ್ದಾರೆ. 

ಇದನ್ನೂ ಓದಿ-ತಮ್ಮನ್ನು ʼದನದ ವರ್ಗದ ವ್ಯಕ್ತಿʼ ಅಂತ ನಿಂದಿಸಿದ ಶ್ರೀಮಂತರಿಗೆ ʼಸುಧಾ ಅಮ್ಮ ಕೊಟ್ಟ ಉತ್ತರʼ ಅದ್ಭುತ..!

ಈ ಚಿತ್ರಕ್ಕೆ ಪ್ರದರ್ಶನ ನಿಷೇಧವನ್ನು ಹೇರಿದಾಗ ಸಲ್ಲಿಸಿದ ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು. ಕೇರಳದ 32000 ಯುವತಿಯರನ್ನು ಬಲವಂತವಾಗಿ ಮತಾಂತರಿಸಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಲಾಗುತ್ತಿತ್ತು ಎಂಬುದು ಸಿನಿಮಾದ ಕಥೆ. ಈ ಚಿತ್ರವನ್ನು ಪಶ್ಚಿಮ ಬಂಗಾಳ ಸರ್ಕಾರ ಮೇ8ರಂದು ನಿಷೇಧಿಸಿತ್ತು. 

ತಮ್ಮ ರಾಜ್ಯದಲ್ಲಿ ಕೋಮು ದ್ವೇಷ ಹರಡುತ್ತಿರುವ ಚಿತ್ರವನ್ನು ನಿಷೇಧಿಸಿ, ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ಈ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು. ʼದಿ ಕೇರಳ ಸ್ಟೋರಿʼ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಇದೇ ವಿಚಾರಕ್ಕೆ ತಮಿಳುನಾಡಿನ  ಮಲ್ಟಿಪ್ಲೆಕ್ಸ್‌ ಮಾಲೀಕರ ಸಂಘ ಕೂಡ ಈ ಸಿನಿಮಾವನ್ನು ರದ್ದುಗೊಳಿಸಿತ್ತು. 

ಇದನ್ನೂ ಓದಿ-Rakul Preet Singh : ಕಪ್ಪು ವರ್ಣದ ಬಟ್ಟೆಯಲ್ಲಿ ನಾಭಿ ದರ್ಶನ ಮಾಡಿಸಿದ ರಾಕುಲ್‌..! ಫೋಟೋಸ್‌ ನೋಡಿ

ಇನ್ನು ʼದಿ ಕೇರಳ ಸ್ಟೋರಿʼ ಚಿತ್ರವನ್ನು ನಿಷೇಧಿಸಿದ ಪಶ್ಚಿಮ ಬಂಗಾಳ ಸರ್ಕಾರವನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಖಂಡಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಕೂಡ ಮಾಡಿದ್ದಾರೆ. "ನೀವು ಸಿನಿಮಾವನ್ನು ಒಪ್ಪುತ್ತಿರೋ ಇಲ್ಲವೋ, ಆ ಸಿನಿಮಾ ಷಡ್ಯಂತ್ರದ ಭಾಗವಾಗಿರಲಿ ಅಥವಾ ಷಡ್ಯಂತ್ರಕ್ಕೆ ತಿರುಗೇಟು ನೀಡುವ ಕಥಾಹಂದರವನ್ನೇ ಹೊಂದಿರಲಿ, ಅಕ್ರಮಣಕಾರಿ ಪರಿಭಾಷೆಯನ್ನೇ ಹೊಂದಿರಲಿ. ಆದರೆ ಚಿತ್ರವನ್ನು ನಿಷೇಧಿಸುವುದು ಸರಿಯಲ್ಲ" ಎಂದು ಬರೆದುಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News