Tipu Sultan Movie: ಟಿಪ್ಪು ಸುಲ್ತಾನ್​ ಸಿನಿಮಾ ನಿರ್ಮಾಣಕ್ಕೆ ಬ್ರೇಕ್;‌ ಬೆದರಿಕೆಗೆ ಹೆದರಿ ಚಿತ್ರ ನಿಲ್ಲಿಸಿದ ನಿರ್ದೇಶಕ!

Bollywood News: ಇತ್ತೀಚಿನ ದಿನಗಳ ಸಿನಿಮಾ ನಿರ್ಮಾಣ ದಲ್ಲಿ ಬದಲಾವಣೆ ಆಗುತ್ತಿದೆ. ಮೊದಲೆಲ್ಲಾ ಹೆಚ್ಚಾಗಿ ಪ್ರೀತಿ ಪ್ರೇಮ, ಜೀವನ ಆಧಾರಿತ ಸಿನಿಮಾಗಳು ಬರುತ್ತಿದ್ದರೇ ಕೆಲವು ವರ್ಷಗಳಿಂದ ಧರ್ಮ, ಹೋರಾಟಗಾರನ ಜೀವನ ಚರಿತ್ರೆ , ರಾಜಕೀಯ ನಾಯಕನ ಕಥೆಗಳು ಸಿನಿಮಾ ಆಗಿ ಬರುತ್ತಿವೆ. ಆದರೆ ಇದೀಗ ಈ ಸಿನಿಮಾ ಮಾಡಿದರೇ ನಿರ್ದೇಶಕನ ಕುಟುಂಬಕ್ಕೆ ಬೆದರಿಕೆ ಕರೆ ಬಂದ ಹಿನ್ನಲೆ ಈ ಚಿತ್ರವನ್ನು ಅರ್ಧಕ್ಕೆ ಕೈ ಬಿಟ್ಟಿದ್ದಾರೆ. 

Written by - Zee Kannada News Desk | Last Updated : Jul 25, 2023, 11:21 AM IST
  • ಟಿಪ್ಪು ಸುಲ್ತಾನ್​ ಸಿನಿಮಾ ನಿರ್ಮಾಣಕ್ಕೆ ಬ್ರೇಕ್
  • ಬೆದರಿಕೆಗೆ ಹೆದರಿ ಚಿತ್ರ ನಿಲ್ಲಿಸಿದ ನಿರ್ದೇಶಕ
  • ಸಿನಿಮಾ ನಿರ್ಮಾಣ ಮಾಡದಂತೆ ನಿರ್ದೇಶಕನಿಗೆ ಬೆದರಿಕೆ
Tipu Sultan Movie: ಟಿಪ್ಪು ಸುಲ್ತಾನ್​ ಸಿನಿಮಾ ನಿರ್ಮಾಣಕ್ಕೆ ಬ್ರೇಕ್;‌ ಬೆದರಿಕೆಗೆ ಹೆದರಿ ಚಿತ್ರ ನಿಲ್ಲಿಸಿದ ನಿರ್ದೇಶಕ! title=

Tipu Sultan Movie: ಇತ್ತೀಚಿನ ದಿನಗಳ ಸಿನಿಮಾ ನಿರ್ಮಾಣ ದಲ್ಲಿ ಬದಲಾವಣೆ ಆಗುತ್ತಿದೆ. ಮೊದಲೆಲ್ಲಾ ಹೆಚ್ಚಾಗಿ ಪ್ರೀತಿ ಪ್ರೇಮ, ಜೀವನ ಆಧಾರಿತ ಸಿನಿಮಾಗಳು ಬರುತ್ತಿದ್ದರೇ ಕೆಲವು ವರ್ಷಗಳಿಂದ ಧರ್ಮ, ಹೋರಾಟಗಾರನ ಜೀವನ ಚರಿತ್ರೆ , ರಾಜಕೀಯ ನಾಯಕನ ಕಥೆಗಳು ಸಿನಿಮಾ ಆಗಿ ಬರುತ್ತಿವೆ. ಅದರಲ್ಲೂ ಎಲ್ಲಡೆ ರಾಜಕೀಯ ಸುದ್ದಿಯಲ್ಲಿರುವುದರಿಂದ ಬಲಪಂಥಿಯ , ಎಡಪಂಥಿಯ ಸಿದ್ದಾಂತಗಳು ಸಿನಿಮಾ ಆಗಿ ಬರುತ್ತಿವೆ.

ಅದಕ್ಕೆ ಉದಾಹರಣೆ ಆಗಿ ಸಾಕಷ್ಟು ಸಿನಿಮಾಗಳು ಕಣ್ಣಾ ಮುಂದಿವೆ. ಅದೇ ರೀತಿಯಾಗಿ ಟಿಪ್ಪು ಸುಲ್ತಾನ್​ ಕುರಿತಂತೆ ಸಿನಿಮಾ ಮಾಡುವುದಾಗಿ ನಿರ್ದೇಶಕ ಸಂದೀಪ್​ ಸಿಂಗ್ ಮುಂದಾಗಿದ್ದರು. ಆದರೆ ಇದೀಗ ಈ ಸಿನಿಮಾ ಮಾಡಿದರೇ ನಿರ್ದೇಶಕನ ಕುಟುಂಬಕ್ಕೆ ಬೆದರಿಕೆ ಕರೆ ಬಂದ ಹಿನ್ನಲೆ ಈ ಚಿತ್ರವನ್ನು ಅರ್ಧಕ್ಕೆ ಕೈ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: Kundapura Festival: ಬೆಂಗಳೂರಿನಲ್ಲಿ ನಡೆದ ವಿಶ್ವ ಕುಂದಾಪುರ ಕನ್ನಡ ಹಬ್ಬ ಸಂಭ್ರಮಿಸಿದ ರಾಜ್​ ಬಿ ಶೆಟ್ಟಿ & ರಿಶಬ್‌

ಯಾವುದೇ ಧರ್ಮದವರ ಭಾವನೆಗೆ ನೋವು ಉಂಟುಮಾಡುವ ಉದ್ದೇಶ ನಮ್ಮದಲ್ಲ. ಎಲ್ಲಾ ಧರ್ಮವನ್ನು ಗೌರವಿಸುವುದರ ಜೊತೆಗೆ ನಂಬಿಕೆ ಅಗ್ರಸ್ಥಾನ ನೀಡುತ್ತೆನೆ ಎಂದಿದ್ದಾರೆ. ಇವರ ನಿರ್ಧಾರಕ್ಕೆ ನೆಟ್ಟಿಗರು ನಾನಾ ರೀತಿ ಅಭಿಪ್ರಾಯ ಪಟ್ಟಿದ್ದಾರೆ. ಕೆಲವರು , ‘72 ಹೂರೇ’ ಮತ್ತು ‘ಅಜ್ಮೇರ್​ 92’ ಸಿನಿಮಾ ಸೋತಿರುವುದರಿಂದ ಈ ಚಿತ್ರದ ಮೇಲೂ ಭಯ ಎನಿಸುತ್ತದೆ ಎಂದಿದ್ದಾರೆ. ಅದೇನೆ ಇರಲಿ ಒಂದು ಸಿನಿಮಾ ಎಂದರೆ ಸಾಮಾಜದಲ್ಲಿನ ತೊಡಕುಗಳನ್ನು ದೂರಗೊಳಿಸಬೇಕೆ ವಿನಃ ಸಮಾಜದಲ್ಲಿ ಶಾಂತಿಯನ್ನು ಕದಲುವಂತಿರಬಾರದು.

ಜಾತಿ, ಧರ್ಮ ಆಧಾರಿತ ಸಿನಿಮಾದಿಂದ ಸೌಹರ್ದತೆ ಹೆಚ್ಚುತ್ತದೆ ಎನ್ನುವುದಾದರೇ ಅಂಥಹ  ಸಿನಿಮಾ ಬಂದರೂ ತಪ್ಪೆನಿಲ್ಲ. ಶೋಷನಿಯ ವರ್ಗದ ಜನರ ನೋವು , ಹೋರಾಟ ಅಂತಹ ಸಿನಿಮಾದಿಂದ ಜನರ ಮನಸ್ಥಿತಿ ಉತ್ತಮವಾಗುತ್ತದೆ ಎಂದರೆ ಅಂಥಹ ಕಥೆಗಳನ್ನು ಗೌರವಿಸುವುದು ಪ್ರೇಕ್ಷಕರ ಕರ್ತವ್ಯವೂ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News