Teaser : ತಾಪ್ಸಿ ಪನ್ನು ನಟನೆಯ 'ಫಿರ್ ಆಯಿ ಹಸಿನ್ ದಿಲ್ರುಬಾ' : ಟೀಸರ್ ಬಿಡುಗಡೆ

'Phir Ai Hasin Dilruba' : ತಾಪ್ಸಿ ಪನ್ನು ನಟನೆಯ ಹಸಿನ್ ದಿಲ್ರುಬಾ ಚಿತ್ರದ ಮುಂದುವರಿದ ಭಾಗವಾಗಿ  'ಫಿರ್ ಆಯಿ ಹಸಿನ್ ದಿಲ್ರುಬಾ' ಚಿತ್ರದ ಟೀಸರ್ ಇಂದು (ಫೆ.29) ಬಿಡುಗಡೆಯಾಗಿದೆ. 

Written by - Zee Kannada News Desk | Last Updated : Feb 29, 2024, 06:00 PM IST
  • ತಾಪ್ಸಿ ಪನ್ನು ನಟನೆಯ ಹಸಿನ್ ದಿಲ್ರುಬಾ ಚಿತ್ರದ ಮುಂದುವರಿದ ಭಾಗವಾಗಿ 'ಫಿರ್ ಆಯಿ ಹಸಿನ್ ದಿಲ್ರುಬಾ' ಚಿತ್ರದ ಟೀಸರ್ ಇಂದು (ಫೆ.29) ಬಿಡುಗಡೆಯಾಗಿದೆ.
  • ವಿನಿಲ್ ಮ್ಯಾಥ್ಯೂ ನಿರ್ದೇಶನದ ಹಸಿನ್ ದಿಲ್ರುಬಾ ಸಿನಿಮಾ ತಾಪ್ಸಿ ಪನ್ನು , ವಿಕ್ರಾಂತ್ ಮಾಸ್ಸೆ ಮತ್ತು ಹರ್ಷವರ್ಧನ್ ರಾಣೆ ನಟಿನೆಯಲ್ಲಿ ತೆರೆ ಕಂಡಿತ್ತು.
  • ಇದೀಗ 'ಫಿರ್ ಆಯಿ ಹಸಿನ್ ದಿಲ್ರುಬಾ' ಸಿನಿಮಾ 'ಅ ಎಲ್ಲೋ ಕಲರ್' ಪ್ರೊಡಕ್ಷನ್ ಅಡಿಯಲ್ಲಿ ಜಯಪ್ರದ್ ದೇಸಾಯಿ ಅವರ ನಿರ್ದೇಶನದಲ್ಲಿ ತೆರೆ ಕಾಣಲಿದೆ
Teaser : ತಾಪ್ಸಿ ಪನ್ನು ನಟನೆಯ 'ಫಿರ್ ಆಯಿ ಹಸಿನ್ ದಿಲ್ರುಬಾ' : ಟೀಸರ್ ಬಿಡುಗಡೆ title=

'Phir Ai Hasin Dilruba': Teaser Released :  2021 ರಲ್ಲಿ ತೆರೆ ಕಂಡ ಹಿಂದಿ ಭಾಷೆಯ ರೋಮ್ಯಾಂಟಿಕ್ ಥ್ರಿಲ್ಲರ್ 'ಹಸಿನ್ ದಿಲ್ರುಬಾ' ಸಿನಿಮಾದ ಮುಂದುವರಿದ ಭಾಗವಾಗಿ  'ಫಿರ್ ಆಯಿ ಹಸಿನ್ ದಿಲ್ರುಬಾ' ತೆರೆಗೆ ಬರಲಿದೆ. ಸದ್ಯಕ್ಕೆ ನೆಟ್ ಪ್ಲಿಕ್ಸ್ ಸಿನಿಮಾದ ಟೀಸರ್ ಅನ್ನು ಇಂದು (ಫೆ.29)ರಿಲೀಸ್ ಮಾಡಿದೆ 

ವಿನಿಲ್ ಮ್ಯಾಥ್ಯೂ ನಿರ್ದೇಶನದ ಹಸಿನ್ ದಿಲ್ರುಬಾ ಸಿನಿಮಾ ತಾಪ್ಸಿ ಪನ್ನು , ವಿಕ್ರಾಂತ್ ಮಾಸ್ಸೆ ಮತ್ತು ಹರ್ಷವರ್ಧನ್ ರಾಣೆ ನಟಿನೆಯಲ್ಲಿ ತೆರೆ ಕಂಡಿತ್ತು. 2 ಜುಲೈ 2021 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನ ಕಂಡ ಸಿನಿಮಾ ಆ ವರ್ಷದ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿತು, 22 ದೇಶಗಳಲ್ಲಿ ಅಗ್ರ 10 ಅನ್ನು ತಲುಪಿತ್ತು.

ಇದನ್ನು ಓದಿ : Infosys : ಮಾರ್ಚ್ 9 ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ವಾಕ್-ಇನ್ ಇಂಟರ್‌ವ್ಯೂವ್

ಇದೀಗ  'ಫಿರ್ ಆಯಿ ಹಸಿನ್ ದಿಲ್ರುಬಾ' ಸಿನಿಮಾ 'ಅ ಎಲ್ಲೋ ಕಲರ್' ಪ್ರೊಡಕ್ಷನ್ ಅಡಿಯಲ್ಲಿ ಜಯಪ್ರದ್ ದೇಸಾಯಿ ಅವರ ನಿರ್ದೇಶನದಲ್ಲಿ ತೆರೆ ಕಾಣಲಿದೆ. ಹಸಿನ್ ದಿಲ್ರುಬಾ ಸಿನಿಮಾದಲ್ಲಿರುವ ಪಾತ್ರಗಳೇ ಮತ್ತೆ ಕಾಣಿಸಿಕೊಂಡಿದ್ದು, ಕೆಲವು ಪಾತ್ರಗಳಲ್ಲಿ ಬದಲಾವಣೆಯಾಗಿವೆ. 
ರಾಣಿ ಪಾತ್ರದಲ್ಲಿ ತಾಪ್ಸಿ ಪನ್ನು 
ರಿಶು ಪಾತ್ರದಲ್ಲಿ ವಿಕ್ರಾಂತ್ ಮಾಸ್ಸೆ
ಅಭಿಮನ್ಯು ಪಾತ್ರದಲ್ಲಿ ಸನ್ನಿ ಕೌಶಲ್ 
ಮ್ರಿತ್ಯುಂಜಯ ಪಾತ್ರದಲ್ಲಿ ಜಿಮ್ಮಿ ಶೇರ್ಗಿಲ್ ಪ್ರಮುಖವಾಗಿ ಬಿಡುಗಡೆಯಾದ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Netflix India (@netflix_in)

ಇದನ್ನು ಓದಿ : Vijayapura: ಚಾಲಕನಿಲ್ಲದ ಕಾರಣ ಟಾಂಗಾದಲ್ಲಿ ಪಾಲಿಕೆಗೆ ಬಂದ ಮೇಯರ್!

ಇನ್ಸ್ಟಾಗ್ರಾಂ ನಲ್ಲಿ ಟೀಸರ್ ಹಂಚಿಕೊಂಡಿರುವ ನೆಟ್ ಪ್ಲಿಕ್ಸ್ "ರಿಶು ಆರ್ ರಾಣಿ ಕಿ ಕಹಾನಿ ಮೇ ಪ್ಯಾರ್ ಆರ್ ಪಾಗಲ್ಪನ್, ದೋನೋ ಅಭಿ ಬಾಕಿ ಹೈಂ. 'ಫಿರ್ ಆಯಿ ಹಸಿನ್ ದಿಲ್ರುಬಾ'  ಶೀಘ್ರದಲ್ಲೇ ಬರಲಿದೆ , ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಎಂದು ಬರೆದು ಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News