Tamannaah Bhatia : "ಇವರೇ ನನ್ನ ಗಂಡ" ಎಂದ ತಮನ್ನಾ! ಮಿಲ್ಕಿ ಬ್ಯೂಟಿ ಪತಿಯನ್ನು ಕಂಡು ನೆಟ್ಟಿಗರು ಶಾಕ್‌

Tamannaah Bhatia : ತಮನ್ನಾ ಭಾಟಿಯಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈನ ಯುವ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವದಂತಿಗಳು ಹರಡಿದ್ದವು. ಆಕೆಯ ಪೋಷಕರು ಕೂಡ ಅವನನ್ನು ಇಷ್ಟಪಟ್ಟಿದ್ದಾರೆ ಮತ್ತು ಒಪ್ಪಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. 

Written by - Chetana Devarmani | Last Updated : Nov 17, 2022, 04:47 PM IST
  • "ಇವರೇ ನನ್ನ ಗಂಡ" ಎಂದ ತಮನ್ನಾ!
  • ಮಿಲ್ಕಿ ಬ್ಯೂಟಿ ಪತಿಯನ್ನು ಕಂಡು ನೆಟ್ಟಿಗರು ಶಾಕ್‌
  • ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ತಮನ್ನಾ ಭಾಟಿಯಾ?
Tamannaah Bhatia : "ಇವರೇ ನನ್ನ ಗಂಡ" ಎಂದ ತಮನ್ನಾ! ಮಿಲ್ಕಿ ಬ್ಯೂಟಿ ಪತಿಯನ್ನು ಕಂಡು ನೆಟ್ಟಿಗರು ಶಾಕ್‌   title=
ತಮನ್ನಾ ಭಾಟಿಯಾ

Tamannaah Bhatia : ತಮನ್ನಾ ಭಾಟಿಯಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈನ ಯುವ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವದಂತಿಗಳು ಹರಡಿದ್ದವು. ಆಕೆಯ ಪೋಷಕರು ಕೂಡ ಅವನನ್ನು ಇಷ್ಟಪಟ್ಟಿದ್ದಾರೆ ಮತ್ತು ಒಪ್ಪಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ತಮನ್ನಾ ಯಾವುದೇ ಹೊಸ ಚಿತ್ರಗಳಿಗೆ ಸಹಿ ಹಾಕಿಲ್ಲ, ಆದ್ದರಿಂದ ಇದು ಅವರ ಮದುವೆಯ ದಿನಗಳು ಹತ್ತಿರವಾಗುತ್ತಿರುವುದರ ಸೂಚನೆ ಎಂದು ಕೂಡ ಹೇಳಲಾಗಿತ್ತು. ಸಂಬಂಧಿಸಿದೆ. ಆದರೆ ಇದೀಗ ತಮನ್ನಾ ಈ ಎಲ್ಲ ವದಂತಿಗಳು ಬ್ರೇಕ್‌ ಹಾಕಿದ್ದಾರೆ.  

ಇದನ್ನೂ ಓದಿ: ಜಾನ್ವಿಗೆ ಬಾತ್ ರೂಂ ಲಾಕ್‌ ಮಾಡಲು ಬಿಡುತ್ತಿರಲಿಲ್ಲವಂತೆ ತಾಯಿ ಶ್ರೀದೇವಿ.!

ಮದುವೆಯ ವದಂತಿಗಳನ್ನು ತಳ್ಳಿಹಾಕಲು ತಮನ್ನಾ ಭಾಟಿಯಾ ಬುಧವಾರ ಒಂದು ನೂತನ ವಿಧಾನವನ್ನು ಅನುಸರಿಸಿದ್ದಾರೆ. ಉದ್ಯಮಿಯೊಂದಿಗೆ ಮದುವೆಯಾಗಲಿರುವ ಸಾಕಷ್ಟು ಊಹಾಪೋಹಗಳಿವೆ. ಹೀಗಾಗಿ ತಮನ್ನಾ Instagram ಸ್ಟೋರಿಯಲ್ಲಿ ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ. ತಮನ್ನಾ ಮೊದಲ ಸ್ಟೋರಿಯಲ್ಲಿ, ಮುಂದಿನ ಪೋಸ್ಟ್‌ನಲ್ಲಿ "ನನ್ನ ಉದ್ಯಮಿ ಪತಿಯನ್ನು ಪರಿಚಯಿಸುತ್ತಿರುವೆ" ಎಂದು ಬರೆದಿದ್ದಾರೆ. “#Marriage Rumours, #Everyone scripting my life.” ಎಂದು ಮುಂದಿನ ಸ್ಟೋರಿಯಲ್ಲಿ ಬರೆದಿದ್ದಾರೆ. 

Tamannaah Bhatia

ತಮ್ಮ ವಿಡಿಯೋ ಮೂಲಕ ನಟಿ ತಮನ್ನಾ ವಿವಾಹ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಒಮ್ಮೆ ಸೀರೆಯುಟ್ಟು ಪೋಸ್ ಕೊಟ್ಟ ತಮನ್ನಾ ಸಡನ್ ಆಗಿ ಬಾಗಿಲು ಮುಚ್ಚಿ, ಗಂಡು ಹುಡುಗನ ವೇಷದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಗಂಡು ಹುಡುಗನ ವೇಷ ಧರಿಸಿ, ಇವರೇ ಉದ್ಯಮಿ ಎಂದು ಹೇಳುವ ಮೂಲಕ ತಮ್ಮದೇ ರೀತಿಯಲ್ಲಿ ತಮನ್ನಾ ರೂಮರ್‌ಗೆ ಬ್ರೇಕ್‌ ಹಾಕಿದ್ದಾರೆ.

ಇದನ್ನೂ ಓದಿ: ಮಗನನ್ನು ಮದುವೆಯಾಗುವಂತೆ ರಶ್ಮಿಕಾಗೆ ಆಫರ್ ನೀಡಿದ್ರಾ ರವಿಚಂದ್ರನ್‌..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News