Tamanna Bhatia On Diamond Ring : ಒಟಿಟಿ ಮೂವಿ ಲಸ್ಟ್ ಸ್ಟೋರೀಸ್ 2 ಬಂದ ಬಳಿಕ ನಟಿ ತಮನ್ನಾ ಭಾಟಿಯಾ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಅವರ ಬೆರಳುಗಳಲ್ಲಿ ದೊಡ್ಡ ವಜ್ರದ ಉಂಗುರವನ್ನು ಧರಿಸಿ ಪೋಸ್ ನೀಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಉಂಗುರದಲ್ಲಿ ಕಂಡುಬರುವ ವಜ್ರವು ವಿಶ್ವದ ಐದನೇ ಅತಿ ದೊಡ್ಡ ವಜ್ರವಾಗಿದೆ ಎಂದು ಹೇಳಲಾಗುತ್ತದೆ. ಅತ್ಯಂತ ವೇಗವಾಗಿ ಚಿತ್ರ ವೈರಲ್ ಆಯಿತು. ಜನರು ವಿಭಿನ್ನವಾಗಿ ಮಾತನಾಡಲು ಪ್ರಾರಂಭಿಸಿದರು. ಆದರೆ ಕೆಲವೇ ಗಂಟೆಗಳ ಬಳಿಕ ತಮನ್ನಾ ಅವರ ಈ ವಜ್ರದ ಉಂಗುರದ ಸತ್ಯ ಎಲ್ಲರ ಮುಂದೆ ಬಿಚ್ಚಿಟ್ಟರು. ನಿಜ ಹೇಳಬೇಕೆಂದರೆ, ತಮನ್ನಾ ಅವರೇ ಖುದ್ದಾಗಿ ಈ ಸತ್ಯ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಟ್ರೆಂಡ್ ಆಯ್ತು ರಾಕಿ KGF ಲುಕ್...ಸಲಾಂ ರಾಕಿಭಾಯ್ ಎಂದ ಜಪಾನಿಯರು..!
ಅಲ್ಲದೆ, ತಮನ್ನಾ ಬಳಿ ಆ ವಜ್ರವನ್ನು ನೋಡಿದ ನಂತರ, ಅನೇಕ ಜನರು ಈ ವಿಶ್ವದ 5 ನೇ ಅತಿದೊಡ್ಡ ವಜ್ರವನ್ನು ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ತಮನ್ನಾ ಭಾಟಿಯಾ ಅವರಿಗೆ ಉಡುಗೊರೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದರು. ಇದೀಗ ವದಂತಿಗಳಿಗೆ ಅಂತ್ಯ ಹಾಡುವ ಮೂಲಕ, ನಟಿ ತಮನ್ನಾ ಸ್ವತಃ ತಮಾಷೆಯಾಗಿ ಅದಲಕ್ಕೆ ವಿವರಣೆಯನ್ನು ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನ ಸ್ಟೋರಿ ವಿಭಾಗದಲ್ಲಿ ವೈರಲ್ ಫೋಟೋವನ್ನು ಹಂಚಿಕೊಂಡ ತಮನ್ನಾ, ಪ್ರತಿಯೊಬ್ಬರೂ ವಜ್ರ ಎಂದು ಯೋಚಿಸುತ್ತಿರುವ ಇದು ನಿಜವಾಗಿಯೂ ವಜ್ರವಲ್ಲ. ಇದೊಂದು 'ಬಾಟಲ್ ಓಪನರ್' ಎಂದು ಬಹಿರಂಗಪಡಿಸಿದ್ದಾರೆ.
ತಮನ್ನಾ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ತಮನ್ನಾ ಅವರು ವೆಬ್ ಸೀರೀಸ್ ಜಿ ಕರ್ದಾ ಮತ್ತು ಲಸ್ಟ್ ಸ್ಟೋರೀಸ್ 2 ನಂತರ ತಮಿಳು ಚಲನಚಿತ್ರ ಜೈಲರ್‌ನಲ್ಲಿ ತಮ್ಮ ಚಾರ್ಟ್‌ಬಸ್ಟರ್ ಐಟಂ ನೃತ್ಯಕ್ಕಾಗಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸುತ್ತಿದ್ದಾರೆ. ಚಿತ್ರದಲ್ಲಿ ಮೆಗಾಸ್ಟಾರ್ ರಜನಿಕಾಂತ್ ಕೂಡ ಇದ್ದಾರೆ. ಜೈಲರ್ ಜೊತೆಗೆ ಅವರು ತೆಲುಗು ಚಿತ್ರ ಭೋಲಾ ಶಂಕರ್, ಮಲಯಾಳಂ ಚಿತ್ರ ಬಾಂದ್ರಾ ಮತ್ತು ತಮಿಳು ಚಿತ್ರ ಅರಣ್ಮನೈ 4 ಅಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ, ಬಾಲಿವುಡ್‌ನಲ್ಲಿ ನಿಖಿಲ್ ಅಡ್ವಾಣಿ ನಿರ್ದೇಶನದ ವೇದಾ ಸಿನಿಮಾದಲ್ಲಿ ತಮನ್ನಾ ಜಾನ್ ಅಬ್ರಹಾಂ ಜೊತೆಗೆ ಕಾಣಿಸಿಕೊಳ್ಳಲಿದೆ.
ಇದನ್ನೂ ಓದಿ: ಮತ್ತೇ ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ತಮನ್ನಾ : ಫೋಟೋಸ್ ನೋಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.