Kabzaa 2 Movie: ಕಬ್ಜಾ 2 ದಲ್ಲಿ ಹೊರರಾಜ್ಯಗಳ ಸ್ಟಾರ್‌ ನಟರು.. ದುಪ್ಪಟ್ಟಾಯ್ತು ನಿರೀಕ್ಷೆ!

Kabzaa 2 Updates: ಖಾಲಿ ಕರ್ಚಿ, ಪಕ್ಕದಲ್ಲೊಂದು ಗನ್‌ ಇಟ್ಟು ಪೋಸ್ಟರ್‌ ಬಿಟ್ಟು ಜನರ ತಲೆಗೆ ಹುಳ ಬಿಟ್ಟಿದ್ದಾರೆ ನಿರ್ದೇಶಕ ಆರ್.ಚಂದ್ರು. ಇದೀಗ ಕಬ್ಜ 2 ಸಿನಿಮಾ ಬಗ್ಗೆ ಮತ್ತೊಂದು ಅಪ್‌ಡೇಟ್‌ ಹೊರಬಂದಿದ್ದು, ಇದು ಚಿತ್ರದ ಮೇಲಿನ ಕುತೂಹಲವನ್ನು ಇಮ್ಮಡಿ ಮಾಡಿದೆ. 

Written by - Chetana Devarmani | Last Updated : Apr 19, 2023, 10:54 AM IST
  • ಕಬ್ಜಾ 2 ಬಗ್ಗೆ ಹೊರಬಿತ್ತು ಮುಖ್ಯ ಮಾಹಿತಿ
  • ಸಿನಿಮಾದಲ್ಲಿ ಹೊರರಾಜ್ಯಗಳ ಸ್ಟಾರ್‌ ನಟರು
  • ದುಪ್ಪಟ್ಟಾಯ್ತು ಕಬ್ಜಾ 2 ಮೇಲಿನ ನಿರೀಕ್ಷೆ!
Kabzaa 2 Movie: ಕಬ್ಜಾ 2 ದಲ್ಲಿ ಹೊರರಾಜ್ಯಗಳ ಸ್ಟಾರ್‌ ನಟರು.. ದುಪ್ಪಟ್ಟಾಯ್ತು ನಿರೀಕ್ಷೆ!  title=
Kabzaa 2

Kabzaa 2 : ಉಪೇಂದ್ರ, ಕಿಚ್ಚ ಸುದೀಪ್‌, ಶಿವರಾಜ್‌ ಕುಮಾರ್‌ ಅಭಿನಯದ ಕಬ್ಜ ಸಿನಿಮಾ ನೋಡುಗರ ಮನಗೆದ್ದಿದೆ. ರೆಟ್ರೋ ಕಾಲದ ಅಂಡರ್‌ವಲ್ಡ್‌ ಕಥೆ ಸಿನಿಪ್ರಿಯರ ಹೃದಯ ಗೆದ್ದಿದೆ. ಇತ್ತೀಚೆಗೆ ಕಬ್ಜ 2 ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದ್ದು, ಖಾಲಿ ಕುರ್ಚಿ ಅದರ ಪಕ್ಕದಲ್ಲಿರುವ ಗನ್‌ ಜನರ ತಲೆಗೆ ಹುಳ ಬಿಟ್ಟಿತ್ತು. ಇದೀಗ ಮತ್ತೊಂದು ಅಪ್‌ಡೇಟ್‌ ಚಂದನವನದಲ್ಲಿ ಹರಿದಾಡುತ್ತಿದೆ. ಕಬ್ಜ 2 ಕಾಸ್ಟಿಂಗ್‌  ಬಗ್ಗೆ ಸಾಕಷ್ಟು ಕುತೂಹಲ ಹೊಂದಿರುವ ಸಿನಿಪ್ರಿಯರಿಗೆ ಈ ಮಾಹಿತಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ: Ileana D'Cruz: 'ಮ್ಯಾನ್... ನೀನು ನಿನ್ನ ಕನ್ಯತ್ವ ಯಾವಾಗ ಕಳೆದುಕೊಂಡೆ?', ಪ್ರಶ್ನಿಸಿದ ವ್ಯಕ್ತಿಗೆ ಇಲಿಯಾನಾ ಹೇಳಿದ್ದೇನು?

ಸದ್ಯ 25 ದಿನಗಳನ್ನು ಪೂರೈಸಿದ ಸಂತಸದಲ್ಲಿರುವ ಕಬ್ಜ ಟೀಂ, ಪಾರ್ಟ್‌  2 ಗೂ ರೆಡಿಯಾಗಿದೆ. ಕಬ್ಜ 2 ಚಿತ್ರದಲ್ಲೂ ಸುದೀಪ್‌, ಶಿವಣ್ಣ ಇರಲಿದ್ದಾರಾ ಎಂಬುದು ಹಲವರ ಅನುಮಾನವಾಗಿತ್ತು. ಕಬ್ಜ 2 ಸಿನಿಮಾದ ತಾರಾಗಣ ಹೇಗಿರಲಿದೆ ಎಂಬ ಹುಳ ಎಲ್ಲರ ತಲೆಯಲ್ಲೂ ಓಡಾಡುತ್ತಿದೆ. ಇದೀಗ ಸಿನಿ ದುನಿಯಾದಲ್ಲಿನ ಈ ಸುದ್ದಿ ಎಲ್ಲರ ಕುತೂಹಲ ಕೆರಳಿಸಿದೆ. 

ಆರ್​. ಚಂದ್ರು ನಿರ್ದೇಶನದ ಕಬ್ಜ ಸಕ್ಸಸ್​ ಆಗಿದೆ. ಶೀಘ್ರದಲ್ಲೇ ಕಬ್ಜ 2 ಸಿನಿಮಾ ಸೆಟ್ಟೇರಲಿದೆ. ಕಬ್ಜಾ 2 ದಲ್ಲಿ ಹೊರರಾಜ್ಯಗಳ ಸ್ಟಾರ್‌ ನಟರು ಇರುತ್ತಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಕಬ್ಜ ಮೊದ ಭಾಗದಿಂದ ಸಿನಿರಸಿರ ಮನಗೆದ್ದಿರುವ ಆರ್‌. ಚಂದ್ರು ಇದೀಗ ಮತ್ತೆ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ. ಕಬ್ಜ 2 ಸಿನಿಮಾಗಾಗಿ ಅನೇಕರು ಕಾದು ಕುಳಿತಿದ್ದ, ಶೀಘ್ರದಲ್ಲೇ ತಯಾರಿ ಶುರುವಾಗಲಿದೆ. ಕಬ್ಜಾ 2 ಚಿತ್ರದಲ್ಲಿ ಉಪೇಂದ್ರ, ಸುದೀಪ್ ಮತ್ತು ಶಿವರಾಜಕುಮಾರ್ ನಟಿಸಲಿದ್ದಾರೆ. ವರದಿಗಳ ಪ್ರಕಾರ, ತಂಡವು ಬಾಲಿವುಡ್ ಮತ್ತು ದಕ್ಷಿಣದ ಚಲನಚಿತ್ರೋದ್ಯಮದಿಂದ ಹೆಚ್ಚಿನ ನಟರನ್ನು ಮುಂದಿನ ಭಾಗಕ್ಕಾಗಿ ಆಯ್ಕೆ ಮಾಡಲು ಯೋಜಿಸುತ್ತಿದೆ. 

ಇದನ್ನೂ ಓದಿ: ಈ 2 ಷರತ್ತು ಇಲ್ಲದಿದ್ರೆ.. ಅಭಿಷೇಕ್ ಬಚ್ಚನ್ ಪತ್ನಿಯಾಗುತ್ತಿದ್ರು ಕರಿಷ್ಮಾ ಕಪೂರ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News