ಲಿಪ್ ಲಾಕ್ ಬಗ್ಗೆ ಸುಳ್ಳು ಹೇಳಿದ ಶ್ರೀಲೀಲಾ..! ಕ್ಯೂಟ್ ಬೆಡಗಿ ಮೊದಲು ʼಕಿಸ್‌ʼ ಮಾಡಿದ್ದು ಯಾರೊಂದಿಗೆ ಗೊತ್ತಾ?

Sreeleela On her First Liplock: ಕನ್ನಡದ ʼಕಿಸ್‌ʼ ಸಿನಿಮಾದ ಮೂಲಕ ಸಿನಿ ಪ್ರಿಯರಿಗೆ ಪರಿಚಯವಾದ ನಟಿ ಶ್ರೀಲೀಲಾ ಇತ್ತೀಚೆಗೆ ತಮ್ಮ ಮೊದಲ ಲಿಪ್‌ಲಾಕ್‌ ಬಗ್ಗೆ ಮಾತನಾಡಿದ್ದರು.. ಇದೀಗ ಅದೇ ವಿಚಾರವಾಗಿ ಮತ್ತೊಂದು ಚರ್ಚೆ ಶುರುವಾಗಿದೆ ಏನದು ಅಂತೀರಾ ಈ ಸ್ಟೋರಿ ಓದಿ...  

Written by - Savita M B | Last Updated : Oct 28, 2023, 01:33 PM IST
  • ಬೆಂಗಳೂರು ಸುಂದರಿ ಶ್ರೀಲೀಲಾ ಸದ್ಯ ಮಿಂಚಿನಂತೆ ಸಿಡಿದೆದ್ದಿದ್ದಾರೆ
  • ಈ ನಟಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಗಳ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದಾಳೆ.
  • ಶ್ರೀಲೀಲಾ ಲಿಪ್‌ ಕಿಸ್‌ ಬಗ್ಗೆ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ
ಲಿಪ್ ಲಾಕ್ ಬಗ್ಗೆ ಸುಳ್ಳು ಹೇಳಿದ ಶ್ರೀಲೀಲಾ..! ಕ್ಯೂಟ್ ಬೆಡಗಿ ಮೊದಲು ʼಕಿಸ್‌ʼ ಮಾಡಿದ್ದು ಯಾರೊಂದಿಗೆ ಗೊತ್ತಾ?  title=

Sreeleela Lip Lock Seen: 'ಪೆಲ್ಲಿಸಂಡಾ-ಡಿ' ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಬೆಂಗಳೂರು ಸುಂದರಿ ಶ್ರೀಲೀಲಾ ಸದ್ಯ ಮಿಂಚಿನಂತೆ ಸಿಡಿದೆದ್ದಿದ್ದಾರೆ. ಈ ನಟಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಗಳ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದಾಳೆ.

ಇನ್ನು ನಟಿ ಶ್ರೀಲೀಲಾ ಇತ್ತೀಚೆಗೆ ಭಗವಂತ ಕೇಸರಿ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಈ ಸಿನಿಮಾದ ಪ್ರಮೋಷನ್‌ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಭಗವಂತ ಕೇಸರಿ ಚಿತ್ರದಲ್ಲಿ ಶ್ರೀಲೀಲಾ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. 

ಇದನ್ನೂ ಓದಿ-ಲವ್ ಮಾಕ್ಟೇಲ್ 2 ನಟಿಯ ಬೆಡ್‌ ರೂಮ್‌ ಫೋಟೋ ವೈರಲ್‌

ಆದರೆ ಇತ್ತೀಚೆಗಷ್ಟೇ ಶ್ರೀಲೀಲಾ ಸಿನಿಮಾಗಳಲ್ಲಿ ಲಿಪ್ ಕಿಸ್ ಸೀನ್ ನಲ್ಲಿ ನಟಿಸುವ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಯಾವ ನಾಯಕನ ಜೊತೆ ಲಿಪ್ ಕಿಸ್ ಸೀನ್ ನಲ್ಲಿ ನಟಿಸುತ್ತೀರಿ ಎಂಬ ಪ್ರಶ್ನೆಗೆ ಶ್ರೀಲೀಲಾ ಉತ್ತರಿಸಿದ್ದು, "ನಾನು ಯಾರೊಂದಿಗೂ ಲಿಪ್ ಲಾಕ್ ದೃಶ್ಯದಲ್ಲಿ ನಟಿಸುವುದಿಲ್ಲ..ಮೊದಲ ಮುತ್ತು ಗಂಡನಿಗೆ ಮಾತ್ರ ಕೊಡುತ್ತೇನೆ" ಎಂದಿದ್ದಾಳೆ. 

ಇದನ್ನೂ ಓದಿ-ಲಿಯೋ vs ಜೈಲರ್..! ಬಾಕ್ಸಾಫೀಸ್ ಸೆಣಸಾಟದಲ್ಲಿ ಗೆದ್ದೋರು ಯಾರು..?

ಮದುವೆಯಾದ ನಂತರ ಮುತ್ತು ಕೊಡುವುದು ಗಂಡನ ಜೊತೆ ಮಾತ್ರ ಎಂದಿದ್ದ ಶ್ರೀಲೀಲಾ ಅಸಲಿ ವಿಷಯ ಮರೆತು ಸಿಕ್ಕಿಬಿದ್ದಿದ್ದಾರೆ. ಇದರಿಂದ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಶ್ರೀಲೀಲಾ ಈ ಹಿಂದೆ ಕನ್ನಡ ದ ಕಿಸ್ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ಪ್ರೇಮ ದೃಶ್ಯದ ಭಾಗವಾಗಿ ನಾಯಕನೊಂದಿಗೆ ಲಿಪ್ ಕಿಸ್ ಮಾಡಿದ್ದಾರೆ. 

ಈ ಸತ್ಯವನ್ನು ಮರೆತ ಶ್ರೀಲೀಲಾಗೆ ನೆಟ್ಟಿಗರು ಇದು ಗಂಡನ ಮೊದಲ ಮುತ್ತು ಎಂದು ಗೇಲಿ ಮಾಡುತ್ತಿದ್ದಾರೆ. ಅಲ್ಲದೇ ಆ ದೃಶ್ಯಗಳನ್ನು ಪೋಸ್ಟ್ ಮಾಡುವ ಮೂಲಕ ಶ್ರೀಲೀಲಾ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಅದೇನೇ ಇರಲಿ, ಶ್ರೀಲೀಲಾ ಸದ್ಯ ಟಾಲಿವುಡ್ ನಲ್ಲಿ ಕ್ರೇಜಿ ಹೀರೋಯಿನ್. ಇತ್ತೀಚೆಗೆ ನಟಿ ಗುಂಟೂರ್ ಕರಮ್, ಉಸ್ತಾದ್ ಭಗತ್ ಸಿಂಗ್, ಆದಿ ಕೇಶವ್, ಎಕ್ಸ್‌ಟ್ರಾರ್ಡಿನರಿ ಮ್ಯಾನ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News