Anushka Shetty: ಪ್ರಭಾಸ್‌ ಅಲ್ಲ.. ʼಆʼ ಯಂಗ್ ಹೀರೋ ಜೊತೆ ಸೌತ್‌ ನಟಿ ಅನುಷ್ಕಾ ರಹಸ್ಯ ಸಂಬಂಧ..?

Anushka Shetty Relationship With Young Star:  ಸೌತ್‌ ಬ್ಯೂಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.. ಟಾಲಿವುಡ್‌ ಸ್ವೀಟಿ ಸದ್ಯ ಯಂಗ್ ಹೀರೋ ಜೊತೆ ರಹಸ್ಯ ಸಂಬಂಧ ಹೊಂದಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.   

Written by - Savita M B | Last Updated : Apr 12, 2024, 12:39 PM IST
  • ನಾಯಕಿ ಅನುಷ್ಕಾ ಶೆಟ್ಟಿ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ
  • ಅತಿ ಕಡಿಮೆ ಸಮಯದಲ್ಲಿ ಅನುಷ್ಕಾ ತಮಗೊಂದು ವಿಶೇಷ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.
 Anushka Shetty: ಪ್ರಭಾಸ್‌ ಅಲ್ಲ.. ʼಆʼ ಯಂಗ್ ಹೀರೋ ಜೊತೆ ಸೌತ್‌ ನಟಿ ಅನುಷ್ಕಾ ರಹಸ್ಯ ಸಂಬಂಧ..? title=

Anushka Shetty: ನಾಯಕಿ ಅನುಷ್ಕಾ ಶೆಟ್ಟಿ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅತಿ ಕಡಿಮೆ ಸಮಯದಲ್ಲಿ ಅನುಷ್ಕಾ ತನಗೊಂದು ವಿಶೇಷ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ತೆಲುಗಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಫುಲ್ ಜನಪ್ರಿಯತೆ ಗಳಿಸಿರುವ ಬ್ಯೂಟಿ ಈಕೆ... 

ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸಿ ವಿಶೇಷ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಅರುಂಧತಿ ಸಿನಿಮಾದಿಂದ ಅನುಷ್ಕಾ ರೇಂಜ್ ಅಗಾಧವಾಗಿ ಬದಲಾಗಿತ್ತು.. ತೆಲುಗು ಹೀರೋಗಳಿಗೆ ಸರಿಸಮನಾದ ಸಂಭಾವನೆ ಅನುಷ್ಕಾಗೆ ಇದೆ ಎಂದರೆ ಅತಿಶಯೋಕ್ತಿಯಲ್ಲ.

ಇದನ್ನೂ ಓದಿ-ಹೆಸರು ಬದಲಿಸಿಕೊಂಡ ದುನಿಯಾ ವಿಜಯ್ ಪುತ್ರಿ..! ಅದಕ್ಕೆ ಅವರ ತಂಗಿಯೇ ಕಾರಣವಂತೆ..

 ಆದರೆ ಕೆಲ ದಿನಗಳಿಂದ ಅನುಷ್ಕಾ ತಮ್ಮ ಸಿನಿಮಾಗಳನ್ನು ಕಡಿಮೆ ಮಾಡಿದ್ದಾರೆ ಎಂದೇ ಹೇಳಬಹುದು.. ಅಧಿಕ ತೂಕ ಹೆಚ್ಚಿಸಿಕೊಂಡಿದ್ದ ಅನುಷ್ಕಾ ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಈ ಕಾರಣದಿಂದಲೇ ನಟಿ ಸಿನಿರಂಗದಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು ಎನ್ನಲಾಗಿದೆ.. 

ಕಳೆದ ವರ್ಷ ಯಂಗ್ ಹೀರೋ ನವೀನ್ ಪೋಲಿಶೆಟ್ಟಿ ಜೊತೆ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೂಲಕ ಅನುಷ್ಕಾ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ದಾಖಲಿಸಿದೆ. ಅದರ ನಂತರ ಅನುಷ್ಕಾ ಬೇರೆ ಯಾವ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. 

ಇದೆಲ್ಲದರ ಮಧ್ಯೆ ಅನುಷ್ಕಾ ಮದುವೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ವದಂತಿಗಳು ಹುಟ್ಟಿಕೊಂಡಿವೆ. ಅನುಷ್ಕಾ ಅವರು ನಾಯಕ ಪ್ರಭಾಸ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಅನೇಕ ಕಥೆಗಳು ಬೆಳಕಿಗೆ ಬಂದಿವೆ. ಅಲ್ಲದೇ ಅವರು ನಟ ನಾಗಾರ್ಜುನ ಜೊತೆ ಸಿಕ್ರೇಟ್ ಅಫೇರ್ ಹೊಂದಿದ್ದಾರೆ ಎನ್ನಲಾಗಿತ್ತು.. 

ಇದನ್ನೂ ಓದಿ-Brindavana Kannada Serial: ಬೃಂದಾವನ‌ ನಟಿ ಪುಷ್ಪ ರಿಯಲ್ ಲವ್ ಬ್ರೇಕಪ್ ಆಗಿದ್ದು ನಿಜಾನಾ? ಹಾಗಿದ್ರೆ ಹುಡುಗ ಯಾರು?!

ಇತ್ತೀಚೆಗೆ ಮತ್ತೆ ಅನುಷ್ಕಾಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ. ಹೌದು ನಾಯಕ ಗೋಪಿಚಂದ್ ಜೊತೆ ಅನುಷ್ಕಾ ರಹಸ್ಯ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ಈ ಸುದ್ದಿಯ ಸಾರಾಂಶ. ಶೌರ್ಯಂ ಸಿನಿಮಾದದಿಂದ ಈ ಜೋಡಿ ಸದ್ದು ಮಾಡಿತ್ತು. ಆಗಿನಿಂದಲೇ ಇವರಿಬ್ಬರು ಪ್ರೀತಿಸುತ್ತಿದ್ದರು ಎಂದು ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ. ಹಲವು ದಿನಗಳಿಂದ ಇವರಿಬ್ಬರ ನಡುವೆ ರಹಸ್ಯ ಸಂಬಂಧವಿತ್ತು. 

ಆದರೆ ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಸ್ವೀಟಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿಗೆ ಎರಡು ಸಿನಿಮಾ ಮಾಡಿದರೆ ಈ ರೀತಿ ಕಾಮೆಂಟ್ ಮಾಡುತ್ತೀರಾ ಎಂದು ಅನುಷ್ಕಾ ಅಭಿಮಾನಿಗಳು ಕಿಡಿಕಾರಿದ್ದಾರೆ. ಅನುಷ್ಕಾ ಮತ್ತು ಗೋಪಿಚಂದ್ ಕುರಿತಾದ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News