ನಾಗಚೈತನ್ಯ ನಿಶ್ಚಿತಾರ್ಥ.. ಕೊನೆಗೂ ಮೌನಮುರಿದ ನಟಿ ಸಮಂತಾ!!

South Actress samantha: ನಾಗ ಚೈತನ್ಯ-ಶೋಭಿತಾ ಅವರ ನಿಶ್ಚಿತಾರ್ಥ ಆಗಸ್ಟ್ 8 ರಂದು ಅದ್ಧೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಹತ್ತಿರದ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ನಡುವೆ ನಿಶ್ಚಿತಾರ್ಥ ನಡೆದಿದ್ದು, ಅಕ್ಕಿನೇನಿ ನಾಗಾರ್ಜುನ ಅವರು ಸಾಮಾಜಿಕ ಮಾಧ್ಯಮದಲ್ಲಿ ಚೈತು ಶೋಭಿತಾ ಅವರ ನಿಶ್ಚಿತಾರ್ಥವನ್ನು ಖಚಿತಪಡಿಸಿದ್ದಾರೆ.  

Written by - Savita M B | Last Updated : Aug 15, 2024, 08:44 PM IST
  • ನಾಗ ಚೈತನ್ಯ ಅವರ ನಿಶ್ಚಿತಾರ್ಥದ ನಂತರ ಅಕ್ಕಿನೇನಿ ಅಭಿಮಾನಿಗಳು ನಾಗ ಚೈತನ್ಯ ಶೋಭಿತಾ ಅವರನ್ನು ಅಭಿನಂದಿಸಿದರು
  • ನಾಗ ಚೈತನ್ಯ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥದ ನಂತರ ಸಮಂತಾ ಬಗ್ಗೆಯೂ ಗುಸುಗುಸು ಹಬ್ಬಿತ್ತು
ನಾಗಚೈತನ್ಯ ನಿಶ್ಚಿತಾರ್ಥ.. ಕೊನೆಗೂ ಮೌನಮುರಿದ ನಟಿ ಸಮಂತಾ!!  title=

samantha sensational selfie: ನಾಗ ಚೈತನ್ಯ ಅವರ ನಿಶ್ಚಿತಾರ್ಥದ ನಂತರ ಅಕ್ಕಿನೇನಿ ಅಭಿಮಾನಿಗಳು ನಾಗ ಚೈತನ್ಯ ಶೋಭಿತಾ ಅವರನ್ನು ಅಭಿನಂದಿಸಿದರು.. ಆದರೆ ಸಮಂತಾ ಅಭಿಮಾನಿಗಳು ನಾಗ ಚೈತನ್ಯ ಸಮಂತಾಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿ ಕಾರುತ್ತಿದ್ದು, ನಾಗ ಚೈತನ್ಯ ಜೊತೆ ಸಮಂತಾ ಬ್ರೇಕ್ ಅಪ್ ಆಗಲು ಸೋಭಿತಾ ಕಾರಣವಿರಬಹುದು ಎನ್ನುತ್ತಿದ್ದಾರೆ.. 

ನಾಗ ಚೈತನ್ಯ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥದ ನಂತರ ಸಮಂತಾ ಬಗ್ಗೆಯೂ ಗುಸುಗುಸು ಹಬ್ಬಿತ್ತು. ಹೌದು ನಟಿ ಬಾಲಿವುಡ್ ಸ್ಟಾರ್‌ ಡೈರೆಕ್ಟರ್ ರಾಜ್ ನಿಡಿಯೋರ್ ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈ ನಡುವೆ ಸಮಂತಾ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ, ನೆಟಿಜನ್‌ಗಳು ಸಮಂತಾ ಅವರ ನೋಟಕ್ಕೆ ತಮ್ಮದೇ ಆದ ಅರ್ಥವನ್ನು ಹೇಳುತ್ತಿದ್ದಾರೆ.  

ಇದನ್ನೂ ಓದಿ-ʼಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆʼ ಫೋಟೋ ಶೇರ್ ಮಾಡಿ ಹಿಂಗ್ಯಾಕಂದ್ರು ಆಂಕರ್‌ ಅನುಶ್ರೀ! ಯಾರಿಗಾಗಿ ʼಆʼ ಪೋಸ್ಟ್‌?!

ಸದ್ಯ ಸ್ಯಾಮ್‌ ಪೋಸ್ಟ್‌ ಮಾಡಿರುವ ಪೋಟೋ ನೋಡಿದ ನೆಟ್ಟಿಗರು ನಟಿ ಮುಖದ ಮೇಲೆ ಮಧ್ಯದ ಬೆರಳು ಇಟ್ಟುಕೊಂಡು ಪೋಸ್‌ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.. ಇದು ನಾಗಚೈತನ್ಯ ಅವರಿಗೆ ಸಂಬಂಧಿಸಿರಬಹದು ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ..

ಇಷ್ಟೇ ಅಲ್ಲ ನಟಿ ಸಮಂತಾ ತಾವು ಶೇರ್‌ ಮಾಡಿಕೊಂಡಿರುವ ಪೋಟೋಗೆ ಆ ರೀತಿ ಬೆರಳು ಮಾಡಿದ್ದಲ್ಲದೇ.. ನೌ ವಿ ಆರ್‌ ಫ್ರೀ ಎಂಬ ಸಾಂಗ್‌ ಕೂಡಾ ಹಾಕಿದ್ದಾರೆ.. ಇದಕ್ಕೆ ಅವರ ಅಭಿಮಾನಿಗಳು ಅವರಿಗೆ ಬಂದ ಅರ್ಥವನ್ನು ಹೇಳುತ್ತಿದ್ದಾರೆ.. ಸದ್ಯ ವದಂತಿಗಳ ಬಗ್ಗೆ ಸೈಲೆಂಟ್ ಶಾಕ್ ಆದ ಸಮಂತಾ, ತುಂಬಾ ಕೂಲ್ ಆಗಿ ಪೋಸ್‌ ಕೊಟ್ಟಿದ್ದಾರೆ.. 

ಇದನ್ನೂ ಓದಿ-ಕೃಷ್ಣಂ ಪ್ರಣಯ ಸಖಿ: ಇದು ರೆಕಾರ್ಡ್‌ ಬ್ರೇಕ್‌ ಫಿಲ್ಮ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News