ಲಾಕ್ ಡೌನ್ ನಿಂದಾಗಿ ಹಣವಿಲ್ಲದೆ ಸಂಕಷ್ಟದಲ್ಲಿನ ನಟಿಗೆ ನೆರವು ನೀಡಿದ ಮೇಕಪ್ ಮ್ಯಾನ್..! ನಟಿ ಹೇಳಿದ್ದೇನು

ಜನಪ್ರಿಯ ಟೆಲಿವಿಷನ್ ನಟಿ ಸೋನಾಲ್ ವೆಂಗುರ್ಲೆಕರ್ ಲಾಕ್ ಡೌನ್ ಹಿನ್ನಲೆಯಲ್ಲಿ ಅನುಭವಿಸಿದ ಆರ್ಥಿಕ ಸಂಕಷ್ಟದ ಕುರಿತಾಗಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಂತಹ ಸಂಕಷ್ಟದ ಮಧ್ಯದಲ್ಲಿಯೂ ಕೂಡ ತನ್ನ ಹೆಂಡತಿ ಗರ್ಭಿಣಿಯಾಗಿದ್ದರೂ ಕೂಡ ಮೇಕಪ್ ಮ್ಯಾನ್ ನಟಿಗೆ 15 ಸಾವಿರ ರೂ ಸಹಾಯ ಹಸ್ತಚಾಚಿದ್ದಾನೆ.

Last Updated : May 14, 2020, 10:13 PM IST
ಲಾಕ್ ಡೌನ್ ನಿಂದಾಗಿ ಹಣವಿಲ್ಲದೆ ಸಂಕಷ್ಟದಲ್ಲಿನ ನಟಿಗೆ ನೆರವು ನೀಡಿದ ಮೇಕಪ್ ಮ್ಯಾನ್..! ನಟಿ ಹೇಳಿದ್ದೇನು  title=
file photo(facebook)

ನವದೆಹಲಿ: ಜನಪ್ರಿಯ ಟೆಲಿವಿಷನ್ ನಟಿ ಸೋನಾಲ್ ವೆಂಗುರ್ಲೆಕರ್ ಲಾಕ್ ಡೌನ್ ಹಿನ್ನಲೆಯಲ್ಲಿ ಅನುಭವಿಸಿದ ಆರ್ಥಿಕ ಸಂಕಷ್ಟದ ಕುರಿತಾಗಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಂತಹ ಸಂಕಷ್ಟದ ಮಧ್ಯದಲ್ಲಿಯೂ ಕೂಡ ತನ್ನ ಹೆಂಡತಿ ಗರ್ಭಿಣಿಯಾಗಿದ್ದರೂ ಕೂಡ ಮೇಕಪ್ ಮ್ಯಾನ್ ನಟಿಗೆ 15 ಸಾವಿರ ರೂ ಸಹಾಯ ಹಸ್ತಚಾಚಿದ್ದಾನೆ.

ನಿರ್ಮಾಪಕರೊಬ್ಬರು ತಮಗೆ ಹಣ ನೀಡದ ಹಿನ್ನಲೆಯಲ್ಲಿ ನಟಿ ಸಂಕಷ್ಟಕ್ಕೆ ಸಿಲುಕಿದ್ದರು.ಈ ಸಂದರ್ಭದಲ್ಲಿ ಮೇಕಪ್ ಮ್ಯಾನ್ ಪಂಕಜ್ ಗುಪ್ತಾ ಎನ್ನುವವರು ಸಹಾಯ ಹಸ್ತ ಚಾಚಿರುವ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.ತಮ್ಮನ್ನು 'ಶ್ರೀಮಂತರು' ಎಂದು ಕರೆದುಕೊಳ್ಳುವ ಜನರು ನಿಜವಾಗಿಯೂ ಶ್ರೀಮಂತವಾದ ಮತ್ತು ದೊಡ್ಡ ಹೃದಯವನ್ನು ಹೊಂದಿರಬೇಕು ಎಂದು ನಟಿ ಹೇಳಿದ್ದಾರೆ.

 
 
 
 

 
 
 
 
 
 
 
 
 

@pankajgupt09 ♥️

A post shared by Sonal Vengurlekar (@sonal_1206) on

ಸೋನಾಲ್ ವೆಂಗುರ್ಲೆಕರ್ ಅವರು 2012 ರಲ್ಲಿ 'ಅಲಕ್ಷ್ಮಿ' ಎಂಬ ಟಿವಿ ಶೋನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಅಂದಿನಿಂದ, ಅವರು ಶಾಸ್ತ್ರಿ ಸಿಸ್ಟರ್ಸ್, ಯೆ ವಾಡಾ ರಾಹಾ, ಸಾಮ್ ದಾಮ್ ದಂದ್ ಭೆಡ್, ದಿಲ್ ದೋಸ್ತಿ ಡ್ಯಾನ್ಸ್, ಯೆ ರಿಷ್ಟಾ ಕ್ಯಾ ಕೆಹ್ಲತಾ ಹೈ, ದೇವ್, ಲಾಲ್ ಇಶ್ಕ್ ಮತ್ತು ಯೆ ತೆರಿ ಗಲಿಯನ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಧ್ಯೆ, ಟೆಲಿವಿಷನ್ ಮತ್ತು ಫಿಲ್ಮ್ ಶೂಟ್‌ಗಳನ್ನು ತಡೆಹಿಡಿಯಲಾಗಿದೆ ಮತ್ತು ಇದು ದೈನಂದಿನ ಕೂಲಿ ಕಾರ್ಮಿಕರು ಮತ್ತು ಇತರ ಕಲಾವಿದರ ಜೀವನದ ಮೇಲೆಯೂ ಪರಿಣಾಮ ಬೀರಿದೆ. ವಾಸ್ತವವಾಗಿ, ಹಲವಾರು ಸೆಲೆಬ್ರಿಟಿಗಳು ಮತ್ತು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ದೈನಂದಿನ ಕೂಲಿ ಕಾರ್ಮಿಕರಿಗೆ ಪರಿಹಾರ ನಿಧಿಯನ್ನು ಸಹ ಸ್ಥಾಪಿಸಿತು.

Trending News