ಸೌಂಡ್ ಮಾಡಲು ಬರ್ತಿದ್ದಾನೆ ʻಸೋಮುʼ.. ಮಾ.15ಕ್ಕೆ ಸೂರಿ ಶಿಷ್ಯನ ಚೊಚ್ಚಲ ಪ್ರಯತ್ನ ತೆರೆಗೆ

Somu Sound Engineer: ಯಶಸ್ವಿ ತಂತ್ರಜ್ಞರ ಸಿನಿಮಾ ಎಂಬ ಮುದ್ರೆ ಒತ್ತಿರುವ ಸೋಮು ಸೌಂಡ್ ಇಂಜಿನಿಯರ್ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. 

Written by - Chetana Devarmani | Last Updated : Feb 21, 2024, 12:51 PM IST
  • ಶಿಷ್ಯನ ಸಿನಿಮಾ ಮೆಚ್ಚಿದ ಸುಕ್ಕ ಸೂರಿ
  • ಮಾ.15ಕ್ಕೆ ಸೋಮು ಸೌಂಡ್ ಇಂಜಿನಿಯರ್ ತೆರೆಯಲ್ಲಿ ಸವಾರಿ
  • ಇದು ಉತ್ತರ ಕರ್ನಾಟಕದ ಸೊಗಡಿ ಸಿನಿಮಾ
ಸೌಂಡ್ ಮಾಡಲು ಬರ್ತಿದ್ದಾನೆ ʻಸೋಮುʼ.. ಮಾ.15ಕ್ಕೆ ಸೂರಿ ಶಿಷ್ಯನ ಚೊಚ್ಚಲ ಪ್ರಯತ್ನ ತೆರೆಗೆ title=

Somu Sound Engineer: ಯಶಸ್ವಿ ತಂತ್ರಜ್ಞರ ಸಿನಿಮಾ ಎಂಬ ಮುದ್ರೆ ಒತ್ತಿರುವ ಸೋಮು ಸೌಂಡ್ ಇಂಜಿನಿಯರ್ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಹಲವು ವಿಶೇಷತೆಗಳಿಂದ ಕೂಡಿರುವ ಚಿತ್ರ ಮಾರ್ಚ್ 15ಕ್ಕೆ ಥಿಯೇಟರ್ ಪ್ರವೇಶಿಸಲಿದೆ. ಉತ್ತರ ಕರ್ನಾಟಕದ ಈ ಸೊಡಗಿನ ಚಿತ್ರದಲ್ಲಿ  ‘ಸಲಗ’, ‘ಟಗರು’ ಚಿತ್ರಗಳ ತಂತ್ರಜ್ಞರು ಕೆಲಸ ಮಾಡಿದ್ದಾರೆ. 

‘ಕಡ್ಡಿಪುಡಿ’, ‘ಕೆಂಡಸಂಪಿಗೆ’, ‘ದೊಡ್ಡಮನೆ ಹುಡುಗ’, ‘ಟಗರು’ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ದುಡಿದ ಅನುಭವ ಹೊಂದಿರುವ ಸುಕ್ಕ ಸೂರಿ ಶಿಷ್ಯ ಅಭಿ ಚೊಚ್ಚಲ ಪ್ರಯತ್ನ ಸೋಮು ಸೌಂಡ್ ಇಂಜಿನಿಯರ್. ಈ ಚಿತ್ರದ ಮೂಲಕ ಅವರು ಸ್ವತಂತ್ರ್ಯ ನಿರ್ದೇಶಕ ಆಗುತ್ತಿದ್ದಾರೆ. ವಿಭಿನ್ನ ಶೀರ್ಷಿಕೆ ಜೊತೆಗೆ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಲಗ ಸಿನಿಮಾದಲ್ಲಿ ‘ಕೆಂಡ’ ಪಾತ್ರದಲ್ಲಿ ಮಿಂಚಿದ್ದ ಶ್ರೇಷ್ಠ ಈ ಸಿನಿಮಾದಲ್ಲಿ ನಾಯಕನಾಗಿದ್ದಾನೆ. ಬೆಳಗಾವಿ ಚೆಲುವೆ ಶೃತಿ ಪಾಟೀಲ್ ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪಾಪಾ ಪಾಂಡು ಖ್ಯಾತಿಯ ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ: Vidya Balan: ನಕಲಿ ಇನ್‌ಸ್ಟಾ ಐಡಿ.. ನಟಿ ವಿದ್ಯಾ ಬಾಲನ್ ಹೆಸರಿನಲ್ಲಿ ವಂಚನೆ! 

‘ಸೋಮು ಸೌಂಡ್ ಇಂಜಿನಿಯರ್’ ಪಕ್ಕಾ ಹಳ್ಳಿ ಕಥೆ. ಅದರಲ್ಲಿಯೂ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಇಳಕಲ್, ಗಂಜಿಹಾಳ, ಕೂಡಲ ಸಂಗಮಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ, ಭಾಷೆ, ಉತ್ತರ ಕರ್ನಾಟಕದ ಜವಾರಿ ಸಂಗೀತ, ಸ್ಥಳೀಯ ಹಾಡುಗಳು ಜತೆಗೆ ಸ್ಥಳೀಯರನ್ನೇ ಬಳಸಿಕೊಂಡು ಸಿನಿಮಾ ಮಾಡಲಾಗಿದೆ. ರಗಡ್ ಹುಡುಗನ ಕತೆಯನ್ನು ಭಾವನಾತ್ಮಕ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. 

ವೈದ್ಯರಾಗಿರುವ ಕ್ರಿಸ್ಟೋಪರ್ ಕಿಣಿ ಸೋಮ ಸೌಂಡ್ ಇಂಜಿನಿಯರ್ ಗೆ ಬಂಡವಾಳ ಹೂಡಿದ್ದಾರೆ. ಮಾಸ್ತಿ, ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ. ಶಿವಸೇನಾ ಕ್ಯಾಮೆರಾ ಕೈಚಳಕ, ಚರಣ್ ಸಂಗೀತದ ಪುಳಕ ಚಿತ್ರದ ಪ್ಲಸ್ ಪಾಯಿಂಟ್. ಸದ್ಯ ಸೆನ್ಸಾರ್ ಪಾಸಾಗಿರುವ ಸೋಮು ಮಾರ್ಚ್ 15ಕ್ಕೆ ಬೆಳ್ಳಿತೆರೆಯಲ್ಲಿ ಸೌಂಡ್ ಮಾಡಲಿದೆ.

ಇದನ್ನೂ ಓದಿ: ಡೆವಿಲ್ ಶೂಟಿಂಗ್‌ ಸಮಯದಲ್ಲೇ ಪ್ರಗ್ನೆಂಟ್ ಆದ್ರಂತೆ ಈ ನಟಿ.! 

ಸೋಮು ಸೌಂಡ್ ಇಂಜಿನಿಯರ್ ಸಿನಿಮಾವನ್ನು ಕಣ್ತುಂಬಿಕೊಂಡ ಸೂರಿ ಶಿಷ್ಯನ ಕೆಲಸವನ್ನು ಮನಸಾರೆ ಹೊಗಳಿದ್ದಾರೆ. ಇತ್ತೀಚೆಗೆಷ್ಟೇ ಚಿತ್ರತಂಡ ಸುರಿ ಹಾಗೂ ವಿತರಕ ಹಾಗೂ ನಿರ್ಮಾಪಕ ಜಯಣ್ಣ ಅವರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಚಿತ್ರ ನೋಡಿ ಭಾವುಕರಾದ ಸೂರಿ ಪತ್ರದ ಮೂಲಕ ಅಭಿ ಕೆಲಸವನ್ನು ಚಿತ್ರತಂಡದ ಶ್ರಮವನ್ನು ಕೊಂಡಾಡಿದ್ದಾರೆ. ಈ ಚಿತ್ರವನ್ನು ಚಿತ್ರಪ್ರೇಮಿಗಳು ತಪ್ಪದೇ ನೋಡುವಂತೆ ಮನವಿ ಮಾಡಿದ್ದಾರೆ.  ಸೋಮು ಸೌಂಡ್ ಇಂಜಿನಿಯರ್ ಸಿನಿಮಾವನ್ನು ಜಯಣ್ಣ ಅಖಂಡ ಕರ್ನಾಟಕ ವಿತರಣೆ ಮಾಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News