ಸಾಂಸಾರಿಕ ಜೀವನ ತ್ಯಜಿಸಿದ ಸಿತಾರಾ ಈಗ ಅಯ್ಯಪ್ಪ ಸ್ವಾಮಿ ಭಕ್ತೆ; ಶಬರಿಮಲೆಯಲ್ಲಿ ಹಾಲುಂಡ ತವರು ನಟಿ

Sitara in Shabarimale : ಸದ್ಯ ಸಿನಿಮಾಗಳಿಂದ ದೂರ ಮಲಯಾಳಿ ನಟಿ ಸಿತಾರಾ ನಾಯರ್ ಸಾಂಸಾರಿಕ ಜೀವನ ತೊರೆದಿದ್ದರು. ಸದ್ಯ ದೇವರ ಧ್ಯಾನದಲ್ಲಿ ಮುಳುಗಿದ ನಟಿ ಕೆಲವು ದಿನಗಳ ಹಿಂದೆ ಶಬರಿಮಲೆಗೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗವಹಿಸಿರುವ ಪೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  

Written by - Savita M B | Last Updated : Jul 22, 2023, 03:55 PM IST
  • ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ಸ್ಟಾರ್‌ ನಟಿ ಸಿತಾರಾ ನಾಯರ್‌
  • ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಹೀಗೆ ಬಹುಭಾಷಾ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು.
  • ನಟಿ ಕೆಲ ವರ್ಷಗಳಿಂದ ಸಿತಾರಾ ಸಾರ್ವಜನಿಕವಾಗಿ ಕಾಣಿಸುವುದೇ ಅಪರೂಪ.
ಸಾಂಸಾರಿಕ ಜೀವನ ತ್ಯಜಿಸಿದ ಸಿತಾರಾ ಈಗ ಅಯ್ಯಪ್ಪ ಸ್ವಾಮಿ ಭಕ್ತೆ; ಶಬರಿಮಲೆಯಲ್ಲಿ ಹಾಲುಂಡ ತವರು ನಟಿ title=

Actress Sitara : ಸೌತ್‌ ಸಿನಿರಂಗದಲ್ಲಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ಸ್ಟಾರ್‌ ನಟಿ ಸಿತಾರಾ ನಾಯರ್‌. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಹೀಗೆ ಬಹುಭಾಷಾ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು. ವಿಪರ್ಯಾಸವೆಂದರೇ ಇಷ್ಟೆಲ್ಲಾ ಜನಪ್ರಿಯತೆ ಹೊಂದಿರುವ ನಟಿ ಕೆಲ ವರ್ಷಗಳಿಂದ ಸಿತಾರಾ ಸಾರ್ವಜನಿಕವಾಗಿ ಕಾಣಿಸುವುದೇ ಅಪರೂಪ.

ಇನ್ನು ಮೊದಲಿಂದಲೂ ಅಯ್ಯಪ್ಪ ಸ್ವಾಮಿ ಭಕ್ತಿಯಾಗಿರುವ ಸಿತಾರಾ ಸಿತಾರಾ ಕುಟುಂಬದ ಜತೆಗೆ ತಲೆಮೆಲೆ ಇರುಮುಡಿ ಹೊತ್ತು ಶಬರಿಮಲೆ ಪಂದಳಕಂದನ ದರ್ಶನ ಪಡೆದಿದ್ದಾರೆ. ಸನ್ನಿಧಾನದಲ್ಲಿನ ಅವರ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಇದನ್ನೂ ಓದಿ-ನಂಬಿಕೆ ಸುಳ್ಳಾಗಿಸಿದ್ದಕ್ಕೆ ಧನ್ಯವಾದ...'ಹಾಸ್ಟೆಲ್ ಹುಡುಗರಿಗೆ' ರಾಜ್ ಬಿ ಶೆಟ್ಟಿ ಸಂದೇಶ..!

ಶಬರಿಮಲೆಯಲ್ಲಿ ಪ್ರತಿ ವರ್ಷ ಕರ್ಕಾಟಕ ಮಾಸವನ್ನು ಆಚರಿಸಲಾಗುತ್ತದೆ. ಈ ಮಾಸದಂದು ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆದು ಅಭಿಷೇಕ, ದೀಪಾರಾಧನೆ ಸೇರಿ ಹತ್ತು ಹಲವು ಪೂಜೆಗಳನ್ನು ಮಾಡಲಾಗುತ್ತದೆ. ಇದೇ ವೇಳೆ ನಟಿ ಸಿತಾರಾ ಕೂಡ ಕರ್ಕಾಟಕ ಮಾಸದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದಾರೆ. 

ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರೂ, ಸಹ ಸಿತಾರಾ ಮದುವೆಯಾಗಲಿಲ್ಲ. ಅವರಿಗೆ ವೈವಾಹಿಕ ಜೀವನದಲ್ಲಿ ಆಸಕ್ತಿ ಇಲ್ಲವೆ ಇಲ್ಲ. ಅಪ್ಪ ಅಮ್ಮನನ್ನು ಬಿಟ್ಟು ಇರಲಾಗದ ಇವರು ಮದುವೆಯೇ ಬೇಡ ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದರೆಂದು ಕೆಲವು ಸಂದರ್ಶನದಲ್ಲಿ ತಾವೇ ಹೇಳಿಕೊಂಡಿದ್ಧಾರೆ. 

ಇದನ್ನೂ ಓದಿ-Shivarajkumar : ಪೈಲೆಟ್.. ಟ್ರೈನ್ ಮಾಸ್ಟರ್ ಲುಕ್‌ನಲ್ಲಿ ಸೆಂಚುರಿ ಸ್ಟಾರ್‌..ಇದು 'ಕ್ಯಾಪ್ಟನ್ ಮಿಲ್ಲರ್' ಗೆಟಪ್ ಹೌದಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News