/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Vedha kannada movie: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಚಿತ್ರ ವೇದ ರಿಲೀಸ್ ಆಗಿದೆ. ಗೀತಾ ಶಿವರಾಜಕುಮಾರ್ ಹಾಗೂ ಜೀ ಸ್ಟುಡಿಯೋಸ್ ನಿರ್ಮಿಸಿರುವ, ಎ.ಹರ್ಷ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು‌ ನಿರೀಕ್ಷಿತ  "ವೇದ"  ಚಿತ್ರ ಇಂದು ಬೆಳ್ಳಿತೆರೆಗೆ ಅಪ್ಪಳಿಸಿದೆ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ 6 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಗೌಡನಪಾಳ್ಯದ ಶ್ರೀನಿವಾಸ, ಜೆಪಿನಗರದ ಸಿದ್ದೇಶ್ವರ, ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ವಿಶೇಷ ಶೋ ಆಯೋಜಿಸಲಾಗಿದೆ. ವೇದ ರಿಲೀಸ್ ಹಿನ್ನೆಲೆ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳು ಹೋಮ ಮಾಡಿಸುತ್ತಿದ್ದಾರೆ.

ಇದನ್ನೂ ಓದಿ : Jayaprada : ನಟಿ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ, ಬಂಧನ ಭೀತಿ

ಬೆಳಗ್ಗೆ 10:30ರ ಶೋಗೆ ನರ್ತಕಿ ಚಿತ್ರಮಂದಿರಕ್ಕೆ ಶಿವಣ್ಣ ದಂಪತಿ ಆಗಮಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಮೊದಲ ಶೋ ಎಲ್ಲೆಡೆ ಹೌಸ್ ಫುಲ್ ಆಗಿವೆ. ನರ್ತಕಿ ಥೀಯೇಟರ್ ಗೆ ಶಿವಣ್ಣನ ಆಗಮನ ಹಿನ್ನೆಲೆ ಭರದಿಂದ ಸಿದ್ಧತೆ ನಡೆದಿದೆ. ಅರ್ಜುನ್ ಜನ್ಯ  ಸಂಗೀತ ನೀಡಿರುವ ಈ ಚಿತ್ರಕ್ಕೆ ಸ್ವಾಮಿ ಜೆ ಗೌಡ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ ಹಾಗೂ ರವಿವರ್ಮ, ವಿಕ್ರಮ್ ಮೋರ್, ಚೇತನ್ ಡಿಸೋಜ ‌‌, ಅರ್ಜುನ್ ರಾಜ್ ಸಾಹಸ ನಿರ್ದೇಶನದ ಜೊತೆಗೆ ವೇದ ಸಿನಿಮಾಗೆ ರವಿ ಸಂತೆಹಕ್ಲು ಕಲಾ ನಿರ್ದೇಶನವಿದೆ. ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

 

 

ವೇದ ಸಿನಿಮಾದ ಮೊದಲ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲಾರ್ಧದಲ್ಲಿ ಶಿವಣ್ಣನ ಎಂಟ್ರಿ, ಆಕ್ಷನ್, ಡ್ಯಾನ್ಸ್ ಗೆ ಸಿನಿ ಪ್ರಿಯರು ಫುಲ್‌ ಫಿದಾ ಆಗಿದ್ದಾರೆ. ಶಿವಣ‍್ಣ ಎಂಟ್ರಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದು, ವೇದ ಅಬ್ಬರ ಎಲ್ಲೆಡೆ ಬಲು ಜೋರಾಗಿದೆ. ಶಿವರಾಜಕುಮಾರ್, ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ಶ್ವೇತ ಚಂಗಪ್ಪ, ಚೆಲುವರಾಜು, ರಾಘು ಶಿವಮೊಗ್ಗ, ವಿನಯ್ ಬಿದ್ದಪ್ಪ, ಪ್ರಸನ್ನ, ಕುರಿ ಪ್ರತಾಪ್, ಲಾಸ್ಯ ನಾಗರಾಜ್, ಭರತ್ ಸಾಗರ್, ಸಂಜೀವ್, ಚಾರ್ವಿ ಗೌಡ, ಜಗಪ್ಪ, ಚೇತನ ಹರಿ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ : Rashmika: "ಅಪ್ಪು ಸರ್​ ಮಾತುಗಳು ನೆನಪಾಗ್ತಿವೆ" ಎಂದ ರಶ್ಮಿಕಾ ಮಂದಣ್ಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Shivarajkumar action drama Vedha released today
News Source: 
Home Title: 

Vedha : ಶಿವಣ್ಣ ಅಭಿನಯದ 125 ನೇ ಚಿತ್ರ ವೇದ ರಿಲೀಸ್

Vedha : ಶಿವಣ್ಣ ಅಭಿನಯದ 125 ನೇ ಚಿತ್ರ ವೇದ ರಿಲೀಸ್
Caption: 
ವೇದ
Yes
Is Blog?: 
No
Tags: 
Facebook Instant Article: 
Yes
Highlights: 

ಶಿವಣ್ಣ ಅಭಿನಯದ 125 ನೇ ಚಿತ್ರ ವೇದ 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 

ಇಂದು ಬೆಳ್ಳಿತೆರೆಗೆ ಅಪ್ಪಳಿಸಿದ ವೇದ ಸಿನಿಮಾ

Mobile Title: 
Vedha : ಶಿವಣ್ಣ ಅಭಿನಯದ 125 ನೇ ಚಿತ್ರ ವೇದ ರಿಲೀಸ್
Chetana Devarmani
Publish Later: 
No
Publish At: 
Friday, December 23, 2022 - 09:49
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
2
Is Breaking News: 
No