Shilpa Shetty: ಶೂಟಿಂಗ್ ವೇಳೆ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ

Shilpa Shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಈ ಮೂಲಕ ಅವರು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈ ನಡುವೆ ನಟಿ ಇಂತಹ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. 

Written by - Chetana Devarmani | Last Updated : Aug 10, 2022, 05:50 PM IST
  • ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ
  • 'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್ ಸರಣಿಯ ಚಿತ್ರೀಕರಣದ ವೇಳೆ ಅವಘಡ
  • ಶೂಟಿಂಗ್ ವೇಳೆ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ
Shilpa Shetty: ಶೂಟಿಂಗ್ ವೇಳೆ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ  title=
ಶಿಲ್ಪಾ ಶೆಟ್ಟಿ 

Shilpa Shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಈ ಮೂಲಕ ಅವರು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈ ನಡುವೆ ನಟಿ ಇಂತಹ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಮುನ್ನೆಲೆಗೆ ಬಂದ ತಕ್ಷಣ, ಅಭಿಮಾನಿಗಳು ನಟಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ವೆಬ್ ಸೀರೀಸ್‌ನ ಶೂಟಿಂಗ್‌ನಲ್ಲಿದ್ದರು ಮತ್ತು ಈ ಸಮಯದಲ್ಲಿ ಆಕೆ ಗಾಯಗೊಂಡಿದ್ದರು. ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಮುಂಬರುವ ಪ್ರಾಜೆಕ್ಟ್‌ನ ಶೂಟಿಂಗ್‌ನ ವೇಳೆ ಕಾಲನ್ನು ಮುರಿದುಕೊಂಡಿದ್ದಾರೆ. ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ಶಿಲ್ಪಾ ಅವರು ಆಸ್ಪತ್ರೆಯೊಳಗೆ ಗಾಲಿಕುರ್ಚಿಯಲ್ಲಿ ಕುಳಿತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. 'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್ ಸರಣಿಯ ಚಿತ್ರೀಕರಣದಲ್ಲಿ ಶಿಲ್ಪಾ ಶೆಟ್ಟಿ ಬ್ಯುಸಿಯಾಗಿದ್ದರು. ಬಿಳಿ ಟಿ ಶರ್ಟ್, ನೀಲಿ ಡೆನಿಮ್ ಜಾಕೆಟ್ ಮತ್ತು ಪ್ಯಾಂಟ್ ಧರಿಸಿರುವ ಶಿಲ್ಪಾ ಶೆಟ್ಟಿ ವಿಕ್ಟರಿ ಸಿಂಬಲ್‌ ತೋರಿಸುತ್ತ ಫೋಟೋಗೆ ಪೋಸ್‌ ನೀಡಿದ್ದಾರೆ. "ಅವರು ಹೇಳಿದರು, ರೋಲ್ ಕ್ಯಾಮೆರಾ ಆಕ್ಷನ್ - 'ಕಾಲು ಮುರಿಯಿರಿ!' ನಾನು ಅದನ್ನು ಅಕ್ಷರಶಃ ತೆಗೆದುಕೊಂಡೆ." ಎಂದು ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Shilpa Shetty Kundra (@theshilpashetty)

 

ಇದನ್ನೂ ಓದಿ :ಡೇಟಿಂಗ್‌ಗೆ 25 ಲಕ್ಷ.. ಕೈ ಬಿಟ್ರೆ 50 ಕೋಟಿ : ಪವಿತ್ರಾ ಲೋಕೇಶ್ - ನರೇಶ್ ನಡುವೆ ಒಪ್ಪಂದ!?

6 ವಾರಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ. ಆದರೆ ನಾನು ಶೀಘ್ರದಲ್ಲೇ ಬಲಶಾಲಿ ಮತ್ತು ಉತ್ತಮವಾಗಿ ಹಿಂತಿರುಗುತ್ತೇನೆ. ಅಲ್ಲಿಯವರೆಗೆ, ದುವಾ ಮೇ ಯಾದ್ ರಾಖಿಯೇಗಾ. ಪ್ರಾರ್ಥನೆಗಳು ಯಾವಾಗಲೂ ಕೆಲಸ ಮಾಡುತ್ತವೆ. ಕೃತಜ್ಞತೆಯಿಂದ ಶಿಲ್ಪಾ ಶೆಟ್ಟಿ ಕುಂದ್ರಾ." ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅವರ ಸಹೋದರಿ ಶಮಿತಾ ಶೆಟ್ಟಿ, "ನನ್ನ ಮುಂಕಿ ಸ್ಟ್ರಾಂಗ್ವೆಸ್ಟ್" ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಶಿಲ್ಪಾಗೆ ‘ಶೀಘ್ರ ಗುಣಮುಖರಾಗಲಿ’ ಎಂದು ಕಾಮೆಂಟ್‌ಗಳ ಮೂಲಕ ಹಾರೈಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಶೇರ್ ಮಾಡಿರುವ ಚಿತ್ರದಲ್ಲಿ ಎಡಗಾಲಿಗೆ ನೋವಾಗಿದ್ದು, ಕಾಲಿಗೆ ನೀ ಇಮೊಬಿಲೈಸರ್ ಹಾಕಿಕೊಂಡಿದ್ದಾರೆ. ಶಿಲ್ಪಾ ಗಾಲಿಕುರ್ಚಿಯ ಮೇಲೆ ಕುಳಿತು ಎರಡೂ ಕೈಗಳಿಂದ ವಿಕ್ಟರಿ ಚಿಹ್ನೆಯನ್ನು ತೋರಿಸಿದ್ದಾರೆ. ಈ ಫೋಟೋದಲ್ಲಿ ಶಿಲ್ಪಾ ಕೂಡ ಜೋರಾಗಿ ನಗುತ್ತಿದ್ದಾರೆ.

ಇದನ್ನೂ ಓದಿ : Hair Care Tips: ಚಹಾಲ್ ಪತ್ನಿ ಧನಶ್ರೀ ಸುಂದರ ಕೂದಲಿನ ರಹಸ್ಯ ಇದೇ ನೋಡಿ

ವೆಬ್ ಸಿರೀಸ್ ಶೂಟಿಂಗ್ ನಲ್ಲಿ ನಡೆದ ಅವಘಡ : 

ಶಿಲ್ಪಾ ಶೆಟ್ಟಿ ಈ ಹಿಂದೆ ತನ್ನ ಶೂಟಿಂಗ್ ಸೆಟ್‌ನಿಂದ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಆಕ್ಷನ್ ಮಾಡುತ್ತಿರುವುದನ್ನುಕಾಣಬಹುದು. ಈ ವಿಡಿಯೋ ನೋಡಿದರೆ ಇದೇ ಚಿತ್ರೀಕರಣದ ವೇಳೆ ನಟಿಗೆ ನೋವಾಗಿದೆಯಂತೆ ಅನಿಸುತ್ತಿದೆ. ಶಿಲ್ಪಾ ಶೆಟ್ಟಿ ಅವರು ರೋಹಿತ್ ಶೆಟ್ಟಿ ಅವರೊಂದಿಗೆ ಮುಂಬರುವ ವೆಬ್ ಸರಣಿ 'ಇಂಡಿಯನ್ ಪೊಲೀಸ್ ಫೋರ್ಸ್' ಗಾಗಿ ಗೋವಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ಶಿಲ್ಪಾ ಶೆಟ್ಟಿ ಜೊತೆಗೆ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಿಂದ ರೋಹಿತ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿಯೂ ತಮ್ಮ ಛಾಪು ಮೂಡಿಸಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News