Sajid Khan ಮೇಲೆ Sherlyn Chopra ಗಂಭೀರ ಆರೋಪ

Sherlyn Chopra Alligations On Sajid Khan - ಖ್ಯಾತ ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಸಾಜಿದ್ ಖಾನ್ ಅವರ ಮೇಲೆ ಮತ್ತೊಮ್ಮೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಬಾರಿ ಖ್ಯಾತ ನಟಿ ಶೆರ್ಲಿನ್ ಚೋಪ್ರಾ ಈ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೂ ಮೊದಲು ಜಿಯಾ ಖಾನ್ ಸಹೋದರಿ ಕರೀಷ್ಮಾ ಕೂಡ ತಮ್ಮ ಸಹೋದರಿ ಎದುರಿಸಿದ್ದ ಘಟನೆಯೊಂದರ ಉಲ್ಲೇಖ ಮಾಡಿದ್ದರು.

Written by - Zee Kannada News Desk | Last Updated : Jan 20, 2021, 09:58 AM IST
  • ಬಾಲಿವುಡ್ ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಮೇಲೆ ಶೆರ್ಲಿನ್ ಚೋಪ್ರಾ ಗಂಭೀರ ಆರೋಪ.
  • ತಮ್ಮ ಖಾಸಗಿ ಅಂಗವನ್ನು ಅನುಭವಿಸಲು ಶೆರ್ಲಿನ್ ಗೆ ಹೇಳಿದ್ದನಂತೆ ಸಾಜೀದ್.
  • ನನ್ನ ಉದ್ದೇಶ ಖಂಡಿತ ಅದಾಗಿಲ್ಲ ಎಂದು ಹೇಳಿ ಶೆರ್ಲಿನ್ ಜಾರಿಕೊಂಡಿದ್ದರಂತೆ.
Sajid Khan ಮೇಲೆ Sherlyn Chopra ಗಂಭೀರ ಆರೋಪ title=

Sherlyn Chopra Alligations On Sajid Khan - ನವದೆಹಲಿ: ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಅವರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಖ್ಯಾತ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಈ ಆರೋಪ ಮಾಡಿದ್ದಾರೆ. ತಮ್ಮ ಮಾತುಗಳನ್ನು ಹೇಳಲು ಶೆರ್ಲಿನ್ ಸಾಮಾಜಿಕ ಮಾಧ್ಯಮವನ್ನು ಬಳಸಿದ್ದಾರೆ. ಒಂದು ಭೇಟಿಯ ವೇಳೆ ಸಾಜೀದ್ ತಮ್ಮೊಂದಿಗೆ ಹೇಗೆ ವರ್ತಿಸಿದ್ದರು ಎಂಬುದನ್ನು ಶೆರ್ಲಿನ್ ಹೇಳಿಕೊಂಡಿದ್ದಾರೆ. 6 ವರ್ಷಗಳ ಹಿಂದೆ ತಾವು ಸಾಜಿದ್ ಅವರನ್ನು ಭೇಟಿಯಾಗಿದ್ದು, ಆ ವೇಳೆ ಸಾಜೀದ್ ಅವರ ವರ್ತನೆ ತುಂಬಾ ಕೆಟ್ಟದಾಗಿತ್ತು ಎಂದು ಶೆರ್ಲಿನ್ ಆರೋಪಿಸಿದ್ದಾರೆ.

ಶೆರ್ಲಿನ್ ಹೇಳಿರುವ ಮಾತುಗಳಿವು
ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಶೆರ್ಲಿನ್ ಚೋಪ್ರಾ (Sherlyn Chopra) , "ನನ್ನ ತಂದೆಯ ಸಾವಿನ ಕೆಲ ದಿನಗಳ ಬಳಿಕ ಅಂದರೆ ಏಪ್ರಿಲ್ 2015ರಲ್ಲಿ ನಾನು ಸಾಜಿದ್ ಅವರನ್ನು ಭೇಟಿಯಾಗಿದ್ದೆ. ಆಗ ಅವರು ತಮ್ಮ ಪ್ಯಾಂಟ್ ನಿಂದ ಖಾಸಗಿ ಅಂಗವನ್ನು ಪ್ರದರ್ಶಿಸಿ ಅದನ್ನು ಅನುಭವಿಸು ಎಂದಿದ್ದರು. ಆಗ ಖಾಸಗಿ ಅಂಗದ ಅನುಭವ ನನಗಿದೆ, ನನ್ನ ಭೇಟಿಯ ಉದ್ದೇಶ ಖಂಡಿತವಾಗಿಯೂ ಅದಾಗಿಲ್ಲ ಎಂದು ಹೇಳಿರುವುದು ನನಗೆ ನೆನಪಿದೆ" ಎಂದು ಹೇಳಿದ್ದಾರೆ.

ನಟಿ ಜಿಯಾ ಖಾನ್ ಸಹೋದರಿಯ ಆರೋಪ 
ಇದಕ್ಕೂ ಮೊದಲು ನಟಿ ಜಿಯಾ ಖಾನ್ ಅವರ ಸಹೋದರಿ ಕರಿಷ್ಮಾ ಕೂಡ ಹಲವು ಗಂಭೀರ ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. ಬಿಬಿಸಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸಾಜಿದ್ ಖಾನ್ (Sajid Khan) ತಮ್ಮ ಸಹೋದರಿ ಜಿಯಾ ಖಾನ್ ಗೆ ಶಾರೀರಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಸಾಜಿದ್ ನಟಿಗೆ ಟಾಪ್ ಲೆಸ್ ಆಗಲು ಹೇಳಿದ್ದರು ಎಂದು ಕರಿಷ್ಮಾ ಹೇಳಿದ್ದಾರೆ.  ಈ ಮೊದಲು ಕೂಡ ಸಾಜೀದ್ ಅವರ ಮೇಲೆ ಹಲವರು ಆರೋಪ ಮಾಡಿದ್ದಾರೆ. ಜಿಯಾ ಸಹೋದರಿ ಕರೀಷ್ಮಾ 7ನೇ ಮಹಿಳೆಯಾಗಿದ್ದಾರೆ. ಇಂತಹುದರಲ್ಲಿ ಇದೀಗ ಶೆರ್ಲಿನ್ ಹೆಸರು ಕೂಡ ಈ ಪಟ್ಟಿ ಸೇರಿದೆ ಎಂದೇ ಹೇಳಬಹುದು.

ಇದನ್ನು ಓದಿ- ಖ್ಯಾತ ಬಾಲಿವುಡ್ ನಟ ಹಾಗೂ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಡೆಲ್

ಈ ಚಿತ್ರದ ವೇಳೆ ನಡೆದಿತ್ತು ಘಟನೆ
ಜಿಯಾ ಖಾನ್(Jiah Khan), ಸಾಜೀದ್ ಖಾನ್ ಅವರ ಬಹುತಾರಾಗಣ ಚಿತ್ರ 'ಹೌಸ್ ಫುಲ್' ನಲ್ಲಿ ನಟಿಸಿದ್ದರು. ಈ ಚಿತ್ರದ ರಿಹರ್ಸಲ್ ವೇಳೆ ಸಾಜಿದ್ ಜಿಯಾಳಿಗೆ ಟಾಪ್ ಹಾಗೂ ಬ್ರಾ ಕಳಚಲು ಹೇಳಿದ್ದನಂತೆ. ಈ ಕುರಿತು ತಮ್ಮ ಸಹೋದರಿ ಬಳಿ ಉಲ್ಲೇಖಿಸಿದ್ದ ಜಿಯಾ, ಚಿತ್ರದ ಚಿತ್ರೀಕರಣ ಇನ್ನೂ ಆರಂಭಗೊಂಡಿಲ್ಲ ಹಾಗೂ ಇದೆಲ್ಲ ನನ್ನೊಂದಿಗೆ ನಡೆಯುತ್ತಿದೆ ಎಂದಿದ್ದರಂತೆ.

ಇದನ್ನು ಓದಿ-ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆದ 'ಬಿಗ್ ಬಾಸ್'ನ ಈ ಮಾಜಿ ಸ್ಪರ್ಧಿ Video!

ಕರೀಷ್ಮಾ ಮಾಡಿರುವ ಆರೋಪಗಳನ್ನು ನಂಬುವುದಾದರೆ. ಜಿಯಾ ಒಂದೊಮ್ಮೆ ಚಿತ್ರ ತೊರೆದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಧಮಕಿ ಕೂಡ ಸಾಜೀದ್ ನೀಡಿದ್ದರಂತೆ. ಜಿಯಾ ಹೇಳಿಕೆ ಕುರಿತು ಮಾತನಾಡಿರುವ ಕರೀಷ್ಮಾ, 'ನಾನೊಂದು ಒಪ್ಪಂದಕ್ಕೆ ಸಹಿ ಹಾಕಿರುವೆ, ಈ ಒಪ್ಪಂದ ಮುರಿದರೆ ಅವರು ನನ್ನ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳುವವರು ಹಾಗೂ ಉದ್ಯಮದಲ್ಲಿ ನನ್ನ ಹೆಸರು ಹಾಳಾಗಲಿದೆ ಎಂದು ಜಿಯಾ ಹೇಳಿದ್ದಳು' ಎಂದಿದ್ದಾರೆ. ಚಿತ್ರದ ಜೊತೆಗೆ ಮುಂದುವರೆದರೆ ಅವಳಿಗೆ ಶಾರೀರಿಕ ಕಿರುಕುಳ ನೀಡಲಾಗುವುದು. ಜಿಯಾ ಪಾಲಿಗೆ ಇದೊಂದು ಸೋಲಿನ ಸಿಚ್ಯುಯೇಶನ್ ಆಗಿತ್ತು ಹಾಗೂ ಆಗ ಜಿಯಾ ಬಲವಂತವಾಗಿ ಚಿತ್ರದಲ್ಲಿ ಮುಂದುವರೆಯಲು ನಿರ್ಧರಿಸಿದ್ದಳು ಎಂದು ಕರಿಷ್ಮಾ ಹೇಳಿದ್ದಾರೆ.

ಇದನ್ನು ಓದಿ- Rhea Chakraborty ಜೊತೆಗಿನ ಚ್ಯಾಟ್ ಬಳಿಕ, ಇದೀಗ Jiah Khan-Mahesh Bhatt ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News