Shraddha Kapoor : ಈ ನಟನ ಮನೆಯಿಂದ ಶ್ರದ್ಧಾ ಕಪೂರ್ ರನ್ನು ಎಳೆದೊಯ್ದಿದ್ರು ಶಕ್ತಿ ಕಪೂರ್

Farhan Akhtar Shraddha Kapoor Live in Relationship: ನಟಿ ಶ್ರದ್ಧಾ ಕಪೂರ್ ಬಾಲಿವುಡ್‌ನ ಮುದ್ದಾದ ನಟಿಯರಲ್ಲಿ ಒಬ್ಬರು, ಅವರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸುತ್ತಾರೆ. ನಟರ ಜೊತೆ ಇವರ ಡೇಟಿಂಗ್‌ ವದಂತಿಗಳಿದ್ದರು ಅದರ ಬಗ್ಗೆ ನಟಿ ಎಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲ. 

Written by - Chetana Devarmani | Last Updated : Mar 4, 2023, 08:08 AM IST
  • ಬಾಲಿವುಡ್‌ನ ಮುದ್ದಾದ ನಟಿ ಶ್ರದ್ಧಾ ಕಪೂರ್
  • ನಟಿ ಶ್ರದ್ಧಾ ಕಪೂರ್ ತಂದೆ ಹಿರಿಯ ನಟ ಶಕ್ತಿ ಕಪೂರ್
  • ಈ ನಟನ ಮನೆಯಿಂದ ಮಗಳನ್ನು ಎಳೆದುಕೊಂಡು ಬಂದಿದ್ದ ತಂದೆ
Shraddha Kapoor : ಈ ನಟನ ಮನೆಯಿಂದ ಶ್ರದ್ಧಾ ಕಪೂರ್ ರನ್ನು ಎಳೆದೊಯ್ದಿದ್ರು ಶಕ್ತಿ ಕಪೂರ್  title=
Shraddha Kapoor

Farhan Akhtar Shraddha Kapoor Live in Relationship: ನಟಿ ಶ್ರದ್ಧಾ ಕಪೂರ್ ಬಾಲಿವುಡ್‌ನ ಮುದ್ದಾದ ನಟಿಯರಲ್ಲಿ ಒಬ್ಬರು, ಅವರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸುತ್ತಾರೆ. ನಟರ ಜೊತೆ ಇವರ ಡೇಟಿಂಗ್‌ ವದಂತಿಗಳಿದ್ದರು ಅದರ ಬಗ್ಗೆ ನಟಿ ಎಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲ. ಬಾಲಿವುಡ್‌ ಹಿರಿಯ ನಟ ಶಕ್ತಿ ಕಪೂರ್‌ ಮಗಳಾದ ಶ್ರದ್ಧಾ ನಟ ಫರಾನ್‌ ಅಖ್ತರ್‌ ಜೊತೆ ಸಂಬಂಧದಲ್ಲಿದ್ದರು ಮತ್ತು ಇಬ್ಬರೂ ಲಿವ್‌ ಇನ್‌ ರಿಲೇಶನ್‌ನಲ್ಲಿದ್ದರೆಂಬ ವದಂತಿಗಳಿವೆ. ಆದರೆ ಈ ಸಂಬಂಧ ಶ್ರದ್ಧಾ ತಂದೆ ಶಕ್ತಿ ಕಪೂರ್‌ಗೆ ಇಷ್ಟವಿರಲಿಲ್ಲವಂತೆ. ಇದರಿಂದ ಕೋಪಗೊಂಡಿದ್ದ ಅವರು ತಮ್ಮ ಮಗಳನ್ನು ನಟ ಫರಾನ್‌ ಅಖ್ತರ್‌ ಮನೆಯಿಂದ ಎಳೆದುಕೊಂಡು ಬಂದಿದ್ದರು ಎಂದು ಹೇಳಲಾಗುತ್ತದೆ. 

ಇದು 'ರಾಕ್ ಆನ್ 2' ಚಿತ್ರ ಬಿಡುಗಡೆಯಾದ ಆ ದಿನಗಳ ಸುದ್ದಿ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರದ ಪ್ರಮುಖ ತಾರೆಯರಾದ ಶ್ರದ್ಧಾ ಕಪೂರ್ ಮತ್ತು ಫರಾನ್ ಅಖ್ತರ್ ಶೂಟಿಂಗ್ ಸಮಯದಲ್ಲಿ ಬಹಳ ಹತ್ತಿರವಾಗಿದ್ದರು ಮತ್ತು ಇಬ್ಬರೂ ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ಹೇಳಲಾಗುತ್ತದೆ. ಶ್ರದ್ಧಾ ಅವರ ತಂದೆ, ನಟ ಶಕ್ತಿ ಕಪೂರ್ ಈ ಸಂಬಂಧದಿಂದ ಸ್ವಲ್ಪವೂ ಸಂತೋಷವಾಗಿರಲಿಲ್ಲ.

ಇದನ್ನೂ ಓದಿ : ʼಕ್ಯಾಮರಾ ತಗೋಂಡು ಬೆಡ್‌ ರೂಮ್‌ ಬನ್ನಿʼ...! ಕ್ಯಾಮರಾಮೆನ್‌ ಶಾಕ್‌... ಸೈಪ್‌ ರಾಕ್‌

ಫರಾನ್ ಅಖ್ತರ್ ಮತ್ತು ಶ್ರದ್ಧಾ ಒಬ್ಬರಿಗೊಬ್ಬರು ತುಂಬಾ ಗಂಭೀರವಾಗಿ ಪ್ರೀತಿಸುತ್ತಿದ್ದರು ಮತ್ತು ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಇದರಿಂದ ಕೋಪಗೊಂಡ ಶಕ್ತಿ ಕಪೂರ್ ಒಂದು ದಿನ ತನ್ನ ಅತ್ತಿಗೆ, ನಟಿ ಪದ್ಮಿನಿ ಕೊಲ್ಹಾಪುರಿ ಜೊತೆಗೆ ಶ್ರದ್ಧಾಳನ್ನು ಫರಾನ್ ಅಖ್ತರ್ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಶ್ರದ್ದಾರನ್ನು ಎಳೆದುಕೊಂಡು ಹೋಗಿದ್ದರು ಎನ್ನಲಾಗುತ್ತದೆ. ಶ್ರದ್ಧಾ ಮತ್ತು ಶಕ್ತಿ ಕಪೂರ್ ಇಬ್ಬರೂ ಈ  ಘಟನೆಯನ್ನು ನಿರಾಕರಿಸಿದ್ದಾರೆ ಮತ್ತು ಅಂತಹದ್ದೇನೂ ಸಂಭವಿಸಿಲ್ಲ ಎಂದು ಸಹ ಹೇಳಿದ್ದಾರೆ.

ಇದನ್ನೂ ಓದಿ : Megha Shetty: ನಟಿ ಮೇಘಾ ಶೆಟ್ಟಿ ಫುಲ್ ಬೋಲ್ಡ್ ವಿಡಿಯೋ.. ಪಡ್ಡೆ ಹೈಕ್ಳು ನಿದ್ದೆ ಕೆಡೋದು ಪಕ್ಕಾ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News