ಅಭಿಮಾನಿಗಳಿಗಾಗಿ ವಿಡಿಯೋ ಕರೆ ಆಫರ್ ನೀಡಿದ ಶಾರುಖ್ ಖಾನ್! ಆದರೆ...

ಶಾರುಖ್ ಖಾನ್ (Shahrukh Khan) ಕಾಲಕಾಲಕ್ಕೆ ತಮ್ಮ ಅಭಿಮಾನಿಗಳೊಂದಿಗೆ ಮಾತನಾಡುತ್ತಲೇ ಇರುತ್ತಾರೆ.

Last Updated : May 11, 2020, 03:28 PM IST
ಅಭಿಮಾನಿಗಳಿಗಾಗಿ ವಿಡಿಯೋ ಕರೆ ಆಫರ್ ನೀಡಿದ ಶಾರುಖ್ ಖಾನ್! ಆದರೆ... title=

ಮುಂಬೈ: ದೇಶಾದ್ಯಂತ ಲಾಕ್ ಡೌನ್ ಜಾರಿ ಇರುವ ಸಂದರ್ಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಹಲವು ರೀತಿಯಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.  ಜೊತೆಗೆ ಪ್ರಸ್ತುತ ಕೊರೋನಾವೈರಸ್  ಪರಿಸ್ಥಿತಿಯ ಬಗ್ಗೆ ನಿರಂತರವಾಗಿ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಇದಕ್ಕೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ (Shahrukh Khan) ಸಹ ಹೊರತಾಗಿಲ್ಲ. ಈ ಸಮಯದಲ್ಲಿ, ಅವರು ತಮ್ಮ ಅಭಿಮಾನಿಗಳೊಂದಿಗೆ ಪರಿಚಿತರಾಗಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ನಿಮ್ಮ ಕೌಶಲ್ಯಗಳನ್ನು ತೋರಿಸಲು ಮತ್ತು ನಿಮ್ಮ ನೆಚ್ಚಿನ ತಾರೆ ಶಾರುಖ್ ಖಾನ್ ಅವರೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಲು ನಿಮಗೆ ಉತ್ತಮ ಅವಕಾಶವಿದೆ.

ಈ ಬಾರಿ ಶಾರುಖ್ ಖಾನ್ ಶಾರ್ಟ್ ಫಿಲಂಸ್ ಮಾಡುವಂತೆ ತಮ್ಮ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಈ ಕಾರ್ಯವನ್ನು ಪೂರ್ಣಗೊಳಿಸಿದ ನಂತರ, ಶಾರುಖ್ ತಂಡದ ಪರವಾಗಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕಿಂತಲೂ ವಿಶೇಷ ಎಂದರೆ ಶಾರುಖ್ ಖಾನ್ ಅವರಿಗೆ ವೀಡಿಯೊ ಕರೆ ಮಾಡುತ್ತಾರೆ.

ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ನಲ್ಲಿ ಶಾರುಖ್ ಖಾನ್ ಈ ಮಾಹಿತಿ ನೀಡಿದ್ದಾರೆ. ಅವರು ತಮ್ಮ ಟ್ವೀಟ್‌ನೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ 'ಯಾರು ಭಯಾನಕ ಚಿತ್ರ ನೋಡಲು ಇಷ್ಟಪಡುವುದಿಲ್ಲ. ಇದೀಗ, ನಾವು ಸಾಕಷ್ಟು ಚಲನಚಿತ್ರಗಳನ್ನು ನೋಡುವ ಸಮಯವನ್ನು ಕಳೆಯುತ್ತಿರುವಾಗ ನಮ್ಮ ಆಂತರಿಕ ಚಲನಚಿತ್ರ ನಿರ್ಮಾಪಕರನ್ನು ಏಕೆ ಎಚ್ಚರಗೊಳಿಸಬಾರದು ಮತ್ತು ಭಯಾನಕ ಒಳಾಂಗಣ ಚಲನಚಿತ್ರವನ್ನು ಚಿತ್ರೀಕರಿಸಬಾರದು ಎಂದು ತಮ್ಮೊಳಗಿನ ಟ್ಯಾಲೆಂಟ್ ಅನ್ನು ಹೊರತರುವಂತೆ ಶಾರುಖ್ ತಮ್ಮ ಅಭಿಮಾನಿಗಳನ್ನು ಪ್ರೇರೇಪಿಸಿದ್ದಾರೆ. ಇದರೊಂದಿಗೆ  ಅವರು ಕಾರ್ಯದ ಹಲವು ಷರತ್ತುಗಳನ್ನು ಫೋಟೋದಲ್ಲಿ ಬರೆದಿದ್ದಾರೆ.

ಈ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಜನರು ಚಿತ್ರವನ್ನು ಮನೆಯಲ್ಲಿ ಚಿತ್ರೀಕರಿಸಬೇಕು ಮತ್ತು ಅವರಿಗೆ ನೀಡಿದ ಮೇಲ್ ಐಡಿಗೆ ಕಳುಹಿಸಬೇಕು. ಇದರ ನಂತರ ಅವರ ತಂಡವು ಈ ವೀಡಿಯೊಗಳನ್ನು ವೀಕ್ಷಿಸುತ್ತದೆ ಮತ್ತು ಅದರಲ್ಲಿ ಮೂರು ಜನರಿಗೆ ಶಾರುಖ್ ಖಾನ್ ಮತ್ತು ಅವರ ತಂಡದಿಂದ ವೀಡಿಯೊ ಕರೆ ಬರುತ್ತದೆ. ಈ ಚಿತ್ರಗಳನ್ನು ಪ್ಯಾಟ್ರಿಕ್ ಗ್ರಹಾಂ, ವಿನೀತ್ ಕುಮಾರ್, ಅಹಾನಾ ಕುಮ್ರಾ ಮತ್ತು ಗೌರವ್ ವರ್ಮಾ ಅವರು ಜಡ್ಜ್ ಮಾಡಲಿದ್ದಾರೆ. 

ಶಾರುಖ್ ಖಾನ್ ಅವರ ಹೊಸ ವೆಬ್ ಸರಣಿ 'ಬೀಟಾಲ್' (Betaal) ಕಾರಣದಿಂದಾಗಿ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಅವರ ವೆಬ್ ಸರಣಿ ಮೇ 24ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದರ ಟ್ರೈಲರ್ ಬಿಡುಗಡೆಯಾಗಿದೆ.
 

Trending News