ಶಾರುಖ್ ಖಾನ್ ಬಾಲಿವುಡ್ ಪಯಣಕ್ಕೆ ಈಗ 26 ವರ್ಷ

     

Last Updated : Jun 26, 2018, 12:04 AM IST
ಶಾರುಖ್ ಖಾನ್ ಬಾಲಿವುಡ್ ಪಯಣಕ್ಕೆ ಈಗ 26 ವರ್ಷ title=

ನವದೆಹಲಿ: ಬಾಲಿವುಡ್ ನಟ ಕಿಂಗ್ ಖಾನ್ ಖ್ಯಾತಿಯ ಶಾರುಖ್ ಖಾನ್ ಈಗ ಬಾಲಿವುಡ್ ಗೆ ಬಂದು 26 ವರ್ಷವಾಯಿತು ಇದನ್ನು ಸ್ವತ ಶಾರುಖ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ  ಬಹಿರಂಗಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸುತ್ತಾ" ನಾಳೆ ನಿಖರವಾಗಿ ಜೀವನದ ಅರ್ಧ ಸಮಯವನ್ನು  ಇತರರ  ಪ್ರೀತಿ ಸಂತೋಷ, ದುಃಖ, ನೃತ್ಯ ,ಬಿಳುವಿಕೆ ಹಾರಾಡುವಿಕೆಯಲ್ಲಿ  ಕಳೆದಿದ್ದೇನೆ. ನಾನು ಸಣ್ಣ ಪ್ರಮಾಣದಲ್ಲಿ ನಿಮ್ಮ ಹೃದಯವನ್ನು ತಲುಪಿದ್ದೇನೆ  ನಾನು ಜೀವನ ಪೂರ್ತಿ ಇದನ್ನು ಮಾಡುತ್ತೇನೆ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.....????????????? ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೊಂದೆಡೆಗೆ ಬಾಲಿವುಡ್ ಬಾದಾಷಾ ನ ಈ ಸಿನಿ ಪಯಣಕ್ಕೆ ಎಲ್ಲಡೆಯಿಂದ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ. ಟ್ವಿಟ್ಟರ್ ನಲ್ಲಿ #26GoldenYearsofSRK ಎನ್ನುವ ಹ್ಯಾಶ್ ಟ್ಯಾಗ್ ಈಗ ಟ್ರೆಂಡಿಂಗ್ ನಲ್ಲಿದೆ.
 

Trending News