ಗೌರಿಹಬ್ಬದಂದು "ಲಂಕಾಸುರ" ನ ಎರಡನೇ ಹಾಡು ಬಿಡುಗಡೆ

ಒಂಚೂರು ಪ್ಲೀಸು ಟಚುಮಿ" ಎಂಬ ಹಾಡು ಗೌರಿ ಹಬ್ಬದ ಶುಭ ಸಂದರ್ಭ ದಲ್ಲಿ ಬಿಡುಗಡೆಯಾಗುತ್ತಿದೆ. ವಿಜೇತ್ ಕೃಷ್ಣ ಈ ಹಾಡಿಗೆ ಸಂಗೀತ ನೀಡಿದ್ದಾರೆ.

Written by - YASHODHA POOJARI | Last Updated : Aug 30, 2022, 02:30 PM IST
  • ಲಂಕಾಸುರ" ಚಿತ್ರದ ಹಾಡೊಂದು ಬಿಡುಗಡೆ
  • ಇದು ಚಿತ್ರ ತಂಡ ಬಿಡುಗಡೆ ಮಾಡುತ್ತಿರುವ ಎರಡನೇ ಹಾಡಾಗಿದೆ.
  • ವಿಜೇತ್ ಕೃಷ್ಣ ಈ ಹಾಡಿಗೆ ಸಂಗೀತ ನೀಡಿದ್ದಾರೆ.
 ಗೌರಿಹಬ್ಬದಂದು "ಲಂಕಾಸುರ" ನ  ಎರಡನೇ ಹಾಡು ಬಿಡುಗಡೆ  title=
lankasura song release

ಬೆಂಗಳೂರು : ನಾಡಿನಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಟೈಗರ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ಲಂಕಾಸುರ" ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದೆ. ಇದು ಚಿತ್ರ ತಂಡ  ಬಿಡುಗಡೆ ಮಾಡುತ್ತಿರುವ ಎರಡನೇ  ಹಾಡಾಗಿದೆ. 

ಚೇತನ್ ಕುಮಾರ್ ಬರೆದಿರುವ "ಲಕ್ ಲಕ್ ಲಕ್ಕು ಪದುಮಿ. ಒಂಚೂರು ಪ್ಲೀಸು ಟಚುಮಿ" ಎಂಬ ಹಾಡು ಗೌರಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿದೆ. ವಿಜೇತ್ ಕೃಷ್ಣ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಸಹನ ಗೌಡ ನರ್ತಿಸಿರುವ ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನವಿದೆ.   ಇಂದು ನಾಗರಾಜ್ ಇಂಪಾಗಿ ಹಾಡಿದ್ದಾರೆ.  ಈ ಹಿಂದೆ ಬಿಡುಗಡೆಯಾಗಿದ್ದ "ಲಂಕಾಸುರ" ಚಿತ್ರದ ಟೈಟಲ್ ಸಾಂಗ್ ಸಹ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.  ಇದೀಗ ಚಿತ್ರದ ಎರಡನೇ ಹಾಡು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ : ‘ಧಮಾಕ' ಸಿನಿಮಾಗೆ ಅಭಿಷೇಕ್ ಅಂಬರೀಶ್ ಸಾಥ್...ಗೆಳಯನ ಸಿನಿಮಾ ಬಗ್ಗೆ ಏನಂದ್ರೂ ಯಂಗ್ ರೆಬಲ್ ಸ್ಟಾರ್?

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ನಿಶಾ ವಿನೋದ್ ಪ್ರಭಾಕರ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರಮೋದ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. 

ಇದನ್ನೂ ಓದಿ : ತೆರೆಗೆ ಬರಲಿದೆ ಶಿವಣ್ಣ - ಪ್ರಭುದೇವ ಅಭಿನಯದ ಚಿತ್ರ , ಭಟ್ರ ನಿರ್ದೇಶನದಲ್ಲಿ ಭರದಿಂದ ಸಾಗಿದೆ ಚಿತ್ರೀಕರಣ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News