weekend with Ramesh season 5: ಮಾ.25 ರಿಂದ ಆರಂಭಗೊಳ್ಳಲಿದೆ 'ವೀಕೆಂಡ್‌ ವಿತ್‌ ರಮೇಶ್‌ʼ ಸೀಸನ್‌ 5'

Weekend With Ramesh season 5: ಝೀ ವಾಹಿನಿಯಲ್ಲಿ ಪ್ರಸಾರವಾಗುವ ʼವೀಕೆಂಡ್‌ ವಿತ್‌ ರಮೇಶ್‌ʼ, ಈಗಾಗಲೇ 4ಸೀಸನ್‌ಗಳನ್ನು ಮುಗಿಸಿ ಯಶಸ್ವಿನ್ನು ಕಂಡಿದೆ. ಇದೀಗ ಕೆಲವೇ ದಿನಗಳಲ್ಲಿ 5ನೇ ಸೀಸನ್‌ ಕೂಡ  ಆರಂಭಗೊಳ್ಳುತ್ತಿದೆ.

Written by - Zee Kannada News Desk | Last Updated : Mar 19, 2023, 03:55 PM IST
  • ಕೆಲವೇ ದಿನಗಳಲ್ಲಿ ʼವೀಕೆಂಡ್‌ ವಿತ್‌ ರಮೇಶ್‌ʼ 5ನೇ ಸೀಸನ್‌ ಆರಂಭ
  • ಕಾರ್ಯಕ್ರಮ ಕುರಿತು ಪ್ರೋಮೊ ಹಂಚಿಕೊಂಡ ಜೀ ವಾಹಿನಿ
weekend with Ramesh season 5: ಮಾ.25 ರಿಂದ ಆರಂಭಗೊಳ್ಳಲಿದೆ 'ವೀಕೆಂಡ್‌ ವಿತ್‌ ರಮೇಶ್‌ʼ ಸೀಸನ್‌ 5' title=

Weekend With Ramesh season 5: ಝೀ ವಾಹಿನಿಯಲ್ಲಿ  ಪ್ರಸಾರವಾಗುವ ʼವೀಕೆಂಡ್‌ ವಿತ್‌ ರಮೇಶ್‌ʼ,ಇದು ಸಾಧಕರ ವೇದಿಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಇಲ್ಲಿ ಕರೆದು, ಪರಿಚಯಿಸಲಾಗುತ್ತದೆ.ಈಗಾಗಲೇ 4ಸೀಸನ್‌ಗಳನ್ನು ಮುಗಿಸಿ ಯಶಸ್ವಿನ್ನು ಕಂಡಿದೆ. ಇದೀಗ ಕೆಲವೇ ದಿನಗಳಲ್ಲಿ 5ನೇ ಸೀಸನ್‌ ಕೂಡ  ಆರಂಭಗೊಳ್ಳುತ್ತಿದೆ.

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮವು ಅಭಿಮಾನಿಗಳ ಪಾಲಿನ ರಸದೌತನ  ರಿಯಾಲಿಟಿ ಶೋ ಆಗಿದೆ. ಈಗಾಗಲೇ 4ಸೀಸನ್‌ಗಳನ್ನು ಮುಗಿಸಿ ಯಶಸ್ವಿನ್ನು ಕಂಡಿರುವ ಝೀವಾಹಿನಿ  ಇದೀಗ ಮತ್ತೆ 5ನೇ ಸೀಸನ್‌ ಕೂಡ  ಆರಂಭಗೊಳ್ಳುತ್ತಿದೆ ಎಂದು ಪ್ರೋಮೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖಚಿತ ಪಡಿಸಿದೆ.  

ಇದನ್ನೂ ಓದಿ: Kabzaa Collection: ಎರಡೇ ದಿನಕ್ಕೆ 100 ಕೋಟಿ ಕ್ಲಬ್‌ ಸೇರಿದ ‘ಕಬ್ಜʼ

ಬಾರಿ ಕೂತುಹಲ ಮೂಡಿಸಿರುವ ಪ್ರೋಮೊ ಬಿಟ್ಟಾಗಿನಿಂದ ಸಾಕಷ್ಟು ಪ್ರಶ್ನೆಗಳನ್ನು  ಮೂಡಿಸಿತ್ತು. ಯಾರು ಮೋದಲು ಸಾಧಕರ ಸೀಟಿನಲ್ಲಿ ಕೂರಲಿದ್ದಾರೆ,ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಕೂತುಹಲಕ್ಕೆ ಕಾರಣವಾಗಿತ್ತು. ಜೀ ಕನ್ನಡ  ತಮ್ಮ ಅಧಿಕೃತ ಪುಟದಲ್ಲಿ ಪ್ರೋಮೊ ಹಂಚಿಕೊಳ್ಳುವ ಮೂಲಕ ಕೂತುಹಲ , ಪ್ರಶ್ನೆಗಳಿಗೆ ತೆರೆ ಎಳೆದಿದೆ.

 

ಇದೀಗ  ʼವೀಕೆಂಡ್‌ ವಿತ್‌ ರಮೇಶ್‌ʼ  5ನೇ ಸೀಸನ್‌ ಕಾರ್ಯಕ್ರಮದ ಮೊದಲ ಸಂಚಿಕೆ ಮಾರ್ಚ್‌ 25ರ ಶನಿವಾರದಂದು ಆರಂಭವಾಗಲಿದ್ದು . ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಗಂಟೆಗೆ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮ ಪ್ರಸಾರವಾಗಲಿದೆ.ವೀಕೆಂಡ್‌ ವಿತ್‌ ರಮೇಶ್‌ 5ನೇ ಸೀಸನ್‌ ಆರಂಭವಾಗಲಿದೆ ಎಂಬ ಸುದ್ದಿ ಬಿದ್ದಾಗಿನಿಂದ ಯಾವ ಯಾವ ಗಣ್ಯರು ಇರುತ್ತಾರೆ. ಮೊದಲು ಆ ಸೀಟ್‌ನಲ್ಲಿ ಯಾರು ಕೂರಲಿದ್ದಾರೆ. ಎಂಬುವುದು ಕೂತೂಹಲ ಮೂಡಿಸಿರುವ ವಿಷಯವಾಗಿದೆ.

ಇದನ್ನೂ ಓದಿ:  Kabzaa : 50 ದೇಶ, 5 ಭಾಷೆ, 4000 ಸ್ಕ್ರೀನ್! ವಿಶ್ವದ ಮೂಲೆ‌ ಮೂಲೆಯಲ್ಲೂ ಕಬ್ಜ

ಈ ಬಾರಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರಿಷಭ್‌ ಶೆಟ್ಟಿ, ಪ್ರಭುದೇವ, ಖ್ಯಾತ ಯೂಟ್ಯೂಬರ್‌ ಡಾ. ಬ್ರೋ, ಡಾಲಿ ಧನಂಜಯ್‌, ಧ್ರುವ ಸರ್ಜಾ, ಕ್ರಿಕೆಟಿಗ ಕೆ.ಎಲ್‌ ರಾಹುಲ್‌, ರಚಿತಾ ರಾಮ್‌, ಅನುಶ್ರೀ, ರಮ್ಯಾ ಮೊದಲಾದವರು ಭಾಗವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News