ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಟೀಸರ್‌ ರಿಲೀಸ್‌

Sapta Sagaradaache ello: ಸಿಂಪಲ್‌ ಸ್ಟಾರ್‌ ನಟ ರಕ್ಷಿತ್‌ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಟೀಸರ್‌ ಸಿನಿಮಾದ ರಿಲೀಸ್‌ ಆಗಿದೆ. ಹಾಗಾದ್ರೆ ಈ ಟೀಸರ್‌ನ ಸ್ಪೇಷಲ್‌ ಏನಿರಬಹುದೆಂದು? ಹೆಚ್ಚಿನ ಮಾಹಿತಿ ತಿಳಿಯೋಣ.

Written by - Zee Kannada News Desk | Last Updated : Oct 28, 2023, 11:54 AM IST
  • ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಟೀಸರ್‌ ಸಿನಿಮಾದ ರಿಲೀಸ್‌ ಆಗಿದೆ
  • ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಟೀಸರ್‌ನಲ್ಲಿ ʼಸೈಡ್‌ ಬಿʼನ ಯಾವುದೇ ಹಿಂಟ್‌ ಬಿಟ್ಟು ಕೊಟ್ಟಿಲ್ಲ
  • ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾ ನವೆಂಬರ್‌ 17ರಂದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ.
ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಟೀಸರ್‌ ರಿಲೀಸ್‌  title=

Sapta Sagaradaache Ello Teaser: ಸಪ್ತ ಸಾಗರದಾಚೆ ಎಲ್ಲೋ ಅಂತ ಹೇಳಿದರೆ ಎಲ್ಲರಿಗೂ ಸಹ ನೆನಪಾಗುವುದು ಅಮೇರಿಕಾ ಅಮೇರಿಕಾ ಚಿತ್ರದ ಹಾಡು. ಈ ಹಾಡಿನ ಒಂದು ಸಾಲನ್ನ  ಶೀರ್ಷಿಕೆಯಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನ ಸಿಂಪಲ್‌ ಸ್ಟಾರ್‌ ನಟ ರಕ್ಷಿತ್‌ ಶೆಟ್ಟಿ ಅಭಿನಯದ ʼಸಪ್ತ ಸಾಗರದಾಚೆ ಎಲೋʼ ಸೈಡ್‌ ಎ ಸಿನಿಮಾ ಇದೇ ವರ್ಷ ಸೆಪ್ಟೆಂಬರ್‌ 1ರಂದು ರಾಜ್ಯಾದಂತ ಬಿಡುಯಾಗಿತ್ತು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಮನು ಹಾಗೂ ಪ್ರಿಯಾಳ ಪಾತ್ರ ಜನರ ಮೆಚ್ಚುಗೆಗೆ ಕಾರಣವಾಗಿದೆ. 

ರಕ್ಷಿತ್‌ ಶೆಟ್ಟಿ ಅಭಿನಯಿಸಿದ ಮನು ಪಾತ್ರವು ಎಲ್ಲರಿಂದ ಮೆಚ್ಚುಗೆ ಪಡೆದಿದ್ದು, ಸಿನಿಮಾದಲ್ಲಿ ಪ್ರಿಯಾ ಪಾತ್ರದ ರುಕ್ಮಿಣಿ ವಸಂತ್‌ ಕತ್ತೆ ಎಂದು ಮನುಗೆ ಕರೆಯುವ ಶೈಲಿ ಪ್ರತಿಯೊಬ್ಬರಿಗೂ ಇಷ್ಟವಾಗಿದೆ.ಮನು ಎಂಬ ಕಾರು ಚಾಲಕನ ಪಾತ್ರ ಹಾಗೂ ಪ್ರಿಯಾ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಹುಡುಗಿಯಾ ಕಥೆಯೇ ಸಪ್ತ ಸಾಗರದಾಚೆ ಎಲ್ಲೋ. ಮನು ಹಾಗೂ ಪ್ರಿಯಾ ಇಬ್ಬರು ಮದುವೆಯ ಬಳಿಕ ಒಂದು ತಮ್ದೇ ಸ್ವಂತ ಮನೆಯ ಕನಸು ಕಾಣುತ್ತಿದ್ದರು. ಅದೇ ವೇಳೆ ಚಿತ್ರದ ನಾಯಕ ಮನು ಹಣದ ವ್ಯಾಮೋಹದಿಂದ ಯಾರೋ ಮಾಡಿದ ಅಪಘಾತವನ್ನು ತನ್ನ ಮೇಲೆ ಹಾಕಿಕೊಂಡು ಜೈಲಿಗೆ ಸೇರುತ್ತಾನೆ. ಈ ಸಿನಿಮಾ 75%ರಷ್ಟು ಭಾಗ ಮನು ಜೈಲಿನಲ್ಲಿ ಕಳೆಯುವುದೇ ತೋರಿಸಿದ್ದಾರೆ.

ಇದನು ಓದಿ: ಗರಡಿಗೆ ದರ್ಶನ್‌ ಸಾಥ್..‌ ಟ್ರೇಲರ್ ಬಿಡುಗಡೆ ಮಾಡಲಿರುವ ಚಾಲೆಂಜಿಂಗ್ ಸ್ಟಾರ್

ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಟೀಸರ್‌ ಪರವಃ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಕೊನೆಯಲ್ಲಿ ಮನು ಸುಮಾರು 10 ವರ್ಷಗಳ ಬಳಿಕ ಜೈಲಿನಿಂದ ಹೊರಬಂದಿದನ್ನು ಹಾಗೂ ಸೈಡ್‌ ಬಿಯ ಕೆಲವು ಝಲಕನ್ನು ತೋರಿಸಿದ್ದಾರೆ. ಆದರೆ ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಟೀಸರ್‌ನಲ್ಲಿ ʼಸೈಡ್‌ ಬಿʼನ ಯಾವುದೇ ಹಿಂಟ್‌ ಬಿಟ್ಟು ಕೊಟ್ಟಿಲ್ಲ. ಆದರೆ ಇದರಲ್ಲಿ ʼಸೈಡ್‌ ಎʼನ ಕೆಲವು ದೃಶ್ಯಗಳು ಹಾಗೂ ಮನು ಕ್ಯಾಸೆಟ್‌ ಹಾಕಿಕೊಂಡು ಪ್ರಿಯಾಳ ,ಮಾತನ್ನು ಕೇಳಿಸುತ್ತಿರುವ ದೃಶ್ಯವನ್ನು ತೋರಿಸಿದ್ದಾರೆ. 

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್‌ ಮಾಡಲಾಗಿತ್ತು. ಸಿನಿಪ್ರಿಯರಿಂದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಬಳಿಕ ಈ ಚಿತ್ರವು ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾವು ಆಕ್ಟೋಬರ್‌ ಮೊದಲ ವಾರದಂದು ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾ ನವೆಂಬರ್‌ 17ರಂದು ಕನ್ನಡ ಸೇರಿ ತೆಲುಗು, ತಮಿಳು ಹಾಗೂ ಮಲಯಾಳಂ, ಒಟ್ಟು ನಾಲ್ಕು ಭಾಷೆಗಳಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ. 

ಇದನು ಓದಿ: 'ಲಿಯೋ' ಸಿನಿಮಾದಲ್ಲಿ ನಟಿಸಿದ್ದಕ್ಕೆ ಪ್ರಿಯಾ ಆನಂದ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ಭಾಗದಲ್ಲಿ ರುಕ್ಷಿಣಿ ವಸಂತ್‌ ನಾಯಕಿಯಾಗಿದ್ದರೆ, ಈ ಚಿತ್ರದ ಎರಡನೇಯ ಭಾಗದಲ್ಲಿ ಚೈತ್ರಾ ಆಚಾರ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರುಕ್ಷಿಣಿ ವಸಂತ್‌ ಕೆಲವು ದೃಶ್ಯಗಳಲ್ಲಿ ತೆರೆ ಮೇಲೆ ಬರಲಿದ್ದು, ಅವರ ಪಾತ್ರವು ಸೈಡ್‌ ಬಿಯಲ್ಲಿ  ಮುಖ್ಯಾವಾಗಿರುತ್ತದೋ ಇಲ್ಲವೋ ಎಂದು ಸಿನಿಮಾ ರಿಲೀಸ್‌ ಆದ ಬಳಿಕ ಚಿತ್ರವನ್ನು ನೋಡಿಯೇ ತಿಳಿಯಬೇಕು. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾ ವೀಕ್ಷಕರಿಂದ ಇನ್ನಷ್ಟು ಮೆಚ್ಚುಗೆ ಪಡೆಯಲಿ ಎಂದು ಆಶಿಸೋಣ. 

<iframe allow="accelerometer; autoplay; encrypted-media; gyroscope; picture-in-picture" allowfullscreen="" frameborder="0" height="350" src= https://zeenews.india.com/kannada/live-tv/embed?autoplay=1&mute=0  width="100%"></iframe>

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News