ಸಪ್ತ ಸಾಗರದಾಚೆ ಎಲ್ಲೋ ಟೈಟಲ್ ಸಾಂಗ್‌ಗೆ ರಾಕ್ ಬ್ಯಾಂಡ್ ಟಚ್!ಕವರ್‌ ಸಾಂಗ್‌ ರೀತಿಯಲ್ಲಿ ಸೈಡ್‌-ಬಿ ಟ್ರ್ಯಾಕ್

Sapta Sagaradaache Ello: ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಸಿನಿಮಾದ ಟೈಟಲ್ ಟ್ರ್ಯಾಕ್  ಮತ್ತೊಂದು ವರ್ಶನ್ ಕೂಡ ಕ್ರಿಯೇಟ್ ಆಗಿದ್ದು, ಇದಕ್ಕೆ ಒಂದು ರೀತಿ ರಾಪ್ ಫೀಲ್ ಬಂದಿದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Nov 11, 2023, 03:23 PM IST
  • ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್.‌
  • ಸೈಡ್-ಬಿ ಸಿನಿಮಾದ ಟೈಟಲ್ ಟ್ರ್ಯಾಕ್ ಕೆಂಪು ಬಣ್ಣದ ಹಿನ್ನೆಲೆಯಲ್ಲಿಯೇ ತೋರಿಸಲಾಗಿದೆ.
  • ಈ ಟೈಟಲ್ ಸಾಂಗ್‌ಗೆ ರಾಕ್ ಬ್ಯಾಂಡ್ ಟಚ್ ನೀಡಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಟೈಟಲ್ ಸಾಂಗ್‌ಗೆ ರಾಕ್ ಬ್ಯಾಂಡ್ ಟಚ್!ಕವರ್‌ ಸಾಂಗ್‌ ರೀತಿಯಲ್ಲಿ ಸೈಡ್‌-ಬಿ ಟ್ರ್ಯಾಕ್ title=

Sapta Sagaradaache Ello Side B Title Track: ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ನಲ್ಲಿ ನೀಲಿ ಬಣ್ಣದ ಹೊಳಪು ಜಾಸ್ತಿಯಿದ್ದು, ಸಮುದ್ರದ ನೀರಿನ ಪ್ರತಿಬಿಂಬದಂತೇನೆ ಇದು ಕಾಣಿಸಿಕೊಂಡಿತ್ತು. ಈ ಚಿತ್ರದ ಟೈಟಲ್‌ ಸಾಂಗ್‌ ಕಪಿಲ್ ಕಪಿಲನ್ ಕಂಠಸಿರಿಯಲ್ಲಿ ತುಂಬಾನೆ ಸೆಳೆದಿದ್ದು, ಇದೀಗ ಇದೇ ಹಾಡಿನ ಇನ್ನೂ ಒಂದು ವರ್ಶನ್ ಕೂಡ ಕ್ರಿಯೇಟ್ ಆಗಿದೆ. 

ಹೌದು.. ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದ್ದು, ಇದು ಒಂದು ರೀತಿ ಇದಕ್ಕೆ ರಾಪ್ ಫೀಲ್ ಬಂದಿದೆ. ರಾಕ್ ಬ್ಯಾಂಡ್ ಹಾಡೊಂದನ್ನ ಕೇಳಿದಾಗ ಆಗೋ ಫೀಲ್ ಆಗುತ್ತೋ, ಅದೇ ರೀತಿ ಇದು ಸೈಡ್ ಬಿ ಚಿತ್ರದ ಹಾಡು ಅನ್ನೋದು ಅಷ್ಟೇ ವಿಶೇಷ ಅಂತಲೇ ಹೇಳಬಹುದು. ಇದೀಗ ಈ ಹಾಡು ರಿಲೀಸ್ ಆಗಿದ್ದು, ಕೆಂಪು ಬಣ್ಣದ ಹಿನ್ನೆಲೆಯಲ್ಲಿಯೇ ತೋರಿಸಲಾಗಿದೆ.

ಇದನ್ನು ಓದಿ: 35 ಕೋಟಿಗೆ ‌ʼಬ್ಯಾಡ್‌ ಮ್ಯಾನರ್ಸ್ʼ ಹಕ್ಕು ಸೇಲ್:‌ ಜೂ.ರೆಬಲ್‌ಸ್ಟಾರ್ ಚಿತ್ರದ ರೈಟ್ಸ್ ಜಯಣ್ಣನ ಪಾಲು..!

ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಸಿನಿಮಾದ ಟೈಟಲ್ ಟ್ರ್ಯಾಕ್‌ ಧನಂಜಯ್ ರಾಜನ್ ಬರೆದ ಅದೇ ಹಾಡಿನ್ನ, ಕಾರ್ತಿಕ್ ಚೆನ್ನೋಜಿ ಇಲ್ಲಿ ಬೇರೆ ರೀತಿ ಹಾಡಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಈ ಹಾಡಿನ ರಾಕ್ ಬ್ಯಾಂಡ್ ಸೌಂಡ್ ಕೊಟ್ಟಿದ್ದು, ಹಾಗಾಗಿಯೇ ಇದರ ಫೀಲ್ ಫಾಸ್ಟ್ ಆಗಿಯೇ ಇದ್ದು, ಒಂದು ರೀತಿ ರಾಕ್ ಸಾಂಗ್ ಕೇಳಿದ ಅನುಭವ ಆಗುತ್ತದೆ.

ವಿಶೇಷವಾಗಿ ಈ ಒಂದು ಗೀತೆಯನ್ನ ರಾಕ್ ಬ್ಯಾಂಡ್ ಜೊತೆಗೆ ಚಿತ್ರೀಕರಿಸಲಾಗಿದ್ದು, ಬಹುಶಃ ಇದನ್ನ ಪ್ರಚಾರಕ್ಕೆ ಬಳಸಿದಂತೆ ಇದೆ. ಅಥವಾ ಚಿತ್ರದಲ್ಲಿ ಈ ಒಂದು ರಾಂಕ್ ಬ್ಯಾಂಡ್ ಗೀತೆಯನ್ನ ಹಾಗಾಗಿಯೇ ಇಡ್ತಾರಾ ಅನ್ನುವ ಕುತೂಹಲ ಕೂಡ ಮೂಡಿದ್ದು, ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ಈ ಒಂದು ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಟ್ಟಿಗೆ ಗಾಯಕ ಕಾರ್ತಿಕ್ ಅಂತೂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News