ಲೇಡಿ ಪಾತ್ರದ ಮೂಲಕ ಗಮನ ಸೆಳೆದ ಸ್ಯಾಂಡಲ್‌ವುಡ್‌ ನಟರಿವರು..!

Sandalwood Stars in Lady Role :  ಒಬ್ಬ ಅದ್ಭುತ ಕಲಾವಿದ ಯಾವ ಪಾತ್ರಕೊಟ್ಟರೂ ಅದನ್ನು ನಿರವಹಿಸಬಲ್ಲ. ಹೌದು ಪುರುಷರು ಮಹಿಳೆಯ ವೇಷ ಹಾಕುವುದು ಅಂದುಕೊಂಡಷ್ಟು ಸುಲಭವಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಅಭಾಸವಾಗುತ್ತದೆ.   

Written by - Savita M B | Last Updated : Jul 9, 2023, 07:28 PM IST
  • ಲೇಡಿ ಪಾತ್ರದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ ಸ್ಟಾರ್‌ ಗಳು
  • ಲೇಡಿ ವೇಷ ಧರಿಸುವ ಮೂಲಕ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ.
  • ಪ್ರೇಕ್ಷಕರ ಮನಗೆದ್ದ ನಟರ ಬಗ್ಗೆ ಇಲ್ಲಿದೆ ಮಾಹಿತಿ
ಲೇಡಿ ಪಾತ್ರದ ಮೂಲಕ ಗಮನ ಸೆಳೆದ ಸ್ಯಾಂಡಲ್‌ವುಡ್‌ ನಟರಿವರು..!  title=

Sandawood : ಕನ್ನಡ ಚಿತ್ರರಂಗದಲ್ಲಿ ಅನೇಕ ನಟರು ಲೇಡಿ ಪಾತ್ರ ನಿರ್ವಹಿಸಿಸುವ  ಮೂಲಕ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಹಾಗಾದರೆ ಈ ಲೇಡಿ ಪಾತ್ರಗಳ ಮೂಲಕ ಸಿನಿಮಾಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದ ನಟರ ಬಗ್ಗೆ ತಿಳಿಯಲು ಮುಂದೆ ಓದಿ...

ಶಿವರಾಜಕುಮಾರ್‌
ಇಲ್ಲಿವರೆಗೂ 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌ ಎರಡು ಸಿನಿಮಾಗಳಲ್ಲಿ ಲೇಡಿ ಪಾತ್ರದಲ್ಲಿ ನಟಿಸಿದ್ದಾರೆ. ʼಮಿಡಿದ ಶೃತಿʼ ಮತ್ತು ʼಅಣ್ಣಾವ್ರ ಮಕ್ಕಳುʼ ಸಿನಿಮಾದಲ್ಲಿ ಮಹಿಳೆಯ ವೇಷದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಪ್ರಕಾಶ್‌ ರಾಜ್‌ 
ನಟ ಪ್ರಕಾಶ್‌ ರಾಜ್‌ ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.ಇವರು ರಾಘವೇಂದ್ರ ರಾಜಕುಮಾರ್‌ ನಟಿಸಿದ ʼಅನುಕೂಲಕ್ಕೊಬ್ಬ ಗಂಡʼ ಸಿನಿಮಾದಲ್ಲಿ ಸ್ತ್ರೀ ಪಾತ್ರದಲ್ಲಿ ನಟಿಸಿದ್ದರು. 

ಇದನ್ನೂ ಓದಿ-ಸ್ಯಾಂಡಲ್‌ವುಡ್‌ ನಟ ನಿನಾಸಂ ಅಶ್ವಥ್‌ ಬಂಧನ..!

ಶರಣ್‌
ಕನ್ನಡದ ಖ್ಯಾತ ಹಾಸ್ಯನಟರಾಗಿರುವ ಶರಣ್‌ ಮೂರು ಸಿನಿಮಾಗಳಲ್ಲಿ ಸ್ತ್ರೀ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ʼಜೈ ಲಲಿತಾʼ ʼವಿಕ್ಟರಿ 2ʼ ಹಾಗೂ ʼಫ್ರೆಂಡ್ಸ್‌ʼ ಚಿತ್ರಗಳಲ್ಲಿ ನಟ ಶರಣ್‌ ಲೇಡಿ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. 

ಸಾಧು ಕೋಕಿಲ
ನಟ ಹಾಗೂ ನಿರ್ದೇಶಕನಾಗಿರುವ ಸಾಧುಕೋಕಿಲ ಅವರು ಶರ್ಣ್‌ ನಟನೆಯ ವಿಕ್ಟರಿ 2 ಸಿನಿಮಾದಲ್ಲಿ ಹಾಗೂ ಗೋಲ್ಡನ್‌ ಸ್ಟಾರ್‌ ಅಭಿನಯದ ಪಟಾಕಿ ಸಿನಿಮಾದಲ್ಲಿ ಲೇಡಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. 

ರವಿಶಂಕರ್‌ ಪಿ
ನಟ ಹಾಗೂ ಖಳನಾಯಕ ರವಿಶಂಕರ್‌ ಕೂಡ ಒಂದು ಸಿನಿಮಾದಲ್ಲಿ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರಣ್‌ ಅಭಿನಯದ ʼವಿಕ್ಟರಿ 2ʼ ಸಿನಿಮಾದಲ್ಲಿ ಲೇಡಿ ಗೆಟಪ್‌ನಲ್ಲಿ ನಟಿಸಿದ್ದರು. 

ಇದನ್ನೂ ಓದಿ-ಹಾರ್ಟ್‌ ಬೀಟ್‌ ಹೆಚ್ಚಿಸುತ್ತಿದೆ ʼತಂಗಲಾನ್ʼ ನಟಿಯ ಅದ್ಭುತ ಅಂದ..! ಫೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News