Samantha: ಮದುವೆ ಫೋಟೋ ಡಿಲೀಟ್ ಮಾಡಿದ ನಟಿ ಸಮಂತಾ..!

ಇಬ್ಬರು ಬೇರೆಯಾದ ಕೆಲವೇ ದಿನಗಳಲ್ಲಿ ಸಮಂತಾ ಅವರು ನಾಗಚೈತನ್ಯ ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

Written by - Puttaraj K Alur | Last Updated : Nov 1, 2021, 08:28 PM IST
  • ತಮ್ಮ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ ಟಾಲಿವುಡ್ ನಟಿ ಸಮಂತಾ
  • ಇನ್‍ಸ್ಟಾಗ್ರಾಮ್ ಖಾತೆಯಲ್ಲಿರುವ ಮದುವೆ ಫೋಟೋಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದಾರೆ
  • 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಾಗಚೈತನ್ಯ & ಸಮಂತಾ ವಿಚ್ಛೇದನ ಪಡೆದುಕೊಂಡಿದ್ದಾರೆ
Samantha: ಮದುವೆ ಫೋಟೋ ಡಿಲೀಟ್ ಮಾಡಿದ ನಟಿ ಸಮಂತಾ..! title=
ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ ಸಮಂತಾ

ನವದೆಹಲಿ: ಟಾಲಿವುಡ್ ಖ್ಯಾತ ನಟಿ ಸಮಂತಾ ರುತ್ ಪ್ರಭು(Samantha Ruth Prabhu) ಇನ್‍ಸ್ಟಾಗ್ರಾಮ್ ಖಾತೆಯಲ್ಲಿನ ತಮ್ಮ ಮದುವೆ ಫೋಟೋಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದಾರೆ. ಇಬ್ಬರು ಬೇರೆಯಾದ ಕೆಲವೇ ದಿನಗಳಲ್ಲಿ ಸಮಂತಾ ಅವರು ನಾಗಚೈತನ್ಯ ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

ಸಮಂತಾ ಮತ್ತು ನಾಗಚೈತನ್ಯ(Samantha & Naga Chaitanya) ಅ.2ರಂದು ತಾವು ಬೇರೆಯಾಗುತ್ತಿದ್ದೇವೆಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದರು. ಪರಸ್ಪರ ಮಾತುಕತೆ ಮೂಲಕ ನಾವು ಬೇರೆಯಾಗುತ್ತಿದ್ದೇವೆ ಎಂದು ಸ್ಟಾರ್ ದಂಪತಿ ಹೇಳಿಕೊಂಡಿದ್ದರು. ಬಾಹುಬಲಿ ಸಿನಿಮಾ ನಟ ರಾಣಾ ದಗ್ಗುಬಾಟಿ ಅವರ ಮದುವೆಯಲ್ಲಿ ನಾಗಚೈತನ್ಯ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಕೂಡ ಸಮಂತಾ ಅವರು ಡಿಲೀಟ್ ಮಾಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Samantha (@samantharuthprabhuoffl)

ಇದನ್ನೂ ಓದಿ: ಹೊಸ ಐಪಿಎಲ್ ತಂಡಕ್ಕೆ ಬಿಡ್ ಮಾಡಲು ಮುಂದಾದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್..!

‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ನಲ್ಲಿನ ಸಮಂತಾ(Samantha)ಅವರ ಬೋಲ್ಡ್ ನಟನೆ ಮತ್ತು ಕೆಲವು ವೈಯಕ್ತಿಕ ಕಾರಣಗಳಿಂದ ಸಮಂತಾ ಮತ್ತು ನಾಗಚೈತನ್ಯ ಬೇರೆ ಬೇರೆಯಾಗುತ್ತಿದ್ದಾರೆಂದು ಗಾಳಿಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಸಾಕ್ಷಿಯಂತೆ ನಟಿ ಸಮಂತಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಹೆಸರಿನ ಜೊತೆಗಿದ್ದ ನಾಗಚೈತನ್ಯ ಹೆಸರನ್ನು ತೆಗೆದುಹಾಕಿದ್ದರು. ಗಾಳಿ ಸುದ್ದಿಗಳ ಬಗ್ಗೆ ಎಲ್ಲಿಯೂ ಹೇಳಿಕೆ ನೀಡದ ಈ ಜೋಡಿ ದಿಢೀರ್ ವಿಚ್ಛೇದನ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.

ಟಾಲಿವುಡ್ ಸ್ಟಾರ್ ದಂಪತಿಯ ಬಾಳಿನಲ್ಲಿ ಬೀರುಗಾಳಿ ಎದ್ದಿದ್ದೇಕೆ ಎಂದು ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಅಧಿಕೃತ ವಿಚ್ಛೇದನ(Samantha Divorce) ಪಡೆದ ಬಳಿಕ ಈ ತಾರಾ ಜೋಡಿ ಭಾರೀ ಸುದ್ದಿಯಲ್ಲಿತ್ತು. ತಮ್ಮಿಬ್ಬರ ನಡುವೆ ಏನೂ ಇಲ್ಲ, ನಾವು ಎಲ್ಲವನ್ನು ಮರೆಯಲು ಪ್ರಯತ್ನಿಸುತ್ತಿದ್ದೇವೆಂದು ತಿಳಿಸಲು ಇದೀಗ ಸುಮಂತಾ ತಮ್ಮ ಮದುವೆಯ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.  

ಇದನ್ನೂ ಓದಿ: ನಾಗ ಚೈತನ್ಯ ಮತ್ತು ಸಮಂತಾ ಡಿವೋರ್ಸ್ ಗಾಸಿಪ್: ಬೋಲ್ಡ್ ನಟನೆಯಿಂದ ಹಾಳಾಯ್ತಾ ಸಂಬಂಧ?

ನಟಿ ಸಮಂತಾ ಅವರು ನಾಗಚೈತನ್ಯ(Naga Chaitanya) ಅವರೊಂದಿಗಿನ ಮದುವೆ ಫೋಟೋಗಳನ್ನು ಮಾತ್ರ ಡಿಲೀಟ್ ಮಾಡಿದ್ದಾರೆ. ಆದರೆ ಸ್ನೇಹಿತರು, ಕುಟುಂಬದವರ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿಲ್ಲ. ಮಾಹಿತಿಯ ಪ್ರಕಾರ ಸುಮಂತಾ 100ಕ್ಕೂ ಹೆಚ್ಚು ಫೋಟೋಗಳನ್ನು ತಮ್ಮ ಇನ್‍ಸ್ಟಾ ಖಾತೆಯಿಂದ ಅಳಸಿ ಹಾಕಿದ್ದಾರಂತೆ. ಈಗ ಅವರ ಇನ್‍ಸ್ಟಾ ಖಾತೆಯಲ್ಲಿ ಸಿನಿಮಾ, ಫ್ಯಾಷನ್, ಲೈಫ್ ಸ್ಟೈಲ್, ಸ್ನೇಹಿತರು ಮತ್ತು ಬಂಧುಗಳ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳು  ತುಂಬಿಕೊಂಡಿವೆ. ಬಹುಕಾಲದ ಡೇಟಿಂಗ್ ಬಳಿಕ 2017ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಸಮಂತಾ ಇತ್ತೀಚೆಗೆ ಋಷಿಕೇಶಕ್ಕೆ ಭೇಟಿ ನೀಡಿದ್ದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News