Salar: ಪ್ರಭಾಸ್‌ ನ್ಯೂ ಸಿನಿಮಾ ಶೂಟಿಂಗ್‌ ನಡೆದ ʼಖಾನ್ಸರ್ʼ ಸಿಟಿ ಎಲ್ಲಿದೆ ಗೊತ್ತಾ?

Salar: ಪ್ರಭಾಸ್ ಸಲಾರ್ ಭಾಗ 1 ಪಾಸಿಟಿವ್ ಟಾಕ್ ನಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ತೋರಿಸಿರುವ ಖಾನ್ಸರ್ ಸಿಟಿ ಈಗ ಚರ್ಚೆಯಾಗುತ್ತಿದೆ. ಈ ನಗರ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಅಥವಾ ಸಿನಿಮಾಗಾಗಿ ರಚನೆಯಾಗಿದೆಯೇ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌..  

Written by - Savita M B | Last Updated : Dec 23, 2023, 10:54 AM IST
  • ಪ್ರಭಾಸ್ ಸಲಾರ್ ಪಾರ್ಟ್ 1 ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ.
  • ಆದರೆ ಈ ಸಿನಿಮಾ ಬಿಡುಗಡೆಯಾದ ನಂತರ ಒಂದು ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ
  • ಈ ಚಿತ್ರದ ಸಂಪೂರ್ಣ ಕಥೆಯು ಖಾನ್ಸರ್ ಎಂಬ ನಗರದ ಸುತ್ತ ಸುತ್ತುತ್ತದೆ
Salar: ಪ್ರಭಾಸ್‌ ನ್ಯೂ ಸಿನಿಮಾ ಶೂಟಿಂಗ್‌ ನಡೆದ ʼಖಾನ್ಸರ್ʼ ಸಿಟಿ ಎಲ್ಲಿದೆ ಗೊತ್ತಾ?   title=

Salar Khansar City: ಪ್ರಭಾಸ್ ಸಲಾರ್ ಪಾರ್ಟ್ 1 ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ.. ಪ್ರಭಾಸ್ ಅಭಿಮಾನಿಗಳು ಪಾಸಿಟಿವ್ ಟಾಕ್‌ನೀಡಿ ಸಂಭ್ರಮಿಸುತ್ತಿದ್ದಾರೆ.. ಭಾಗ 1 ನೋಡಿದವರಿಗೆ ಎರಡನೇ ಭಾಗ ಯಾವಾಗ ಬರುತ್ತೆ ಅನ್ನೋ ಕುತೂಹಲ... ಆದರೆ ಈ ಸಿನಿಮಾ ಬಿಡುಗಡೆಯಾದ ನಂತರ ಒಂದು ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಚಿತ್ರದ ಸಂಪೂರ್ಣ ಕಥೆಯು ಖಾನ್ಸರ್ ಎಂಬ ನಗರದ ಸುತ್ತ ಸುತ್ತುತ್ತದೆ... ಹಾಗಾದರೆ ಆ ನಗರ ನಿಜವಾಗಿಯೂ ಭಾರತದಲ್ಲಿದೆಯೇ? ಅಥವಾ ಚಿತ್ರಕ್ಕಾಗಿ ರಚಿಸಲಾಗಿದೆಯೇ? ಎನ್ನುವ ಪ್ರಶ್ನೆಗಳು ಇದೀಗ ಉದ್ಭವವಾಗಿವೆ.. 

ಪ್ರಭಾಸ್ ಬಾಹುಬಲಿ ಚಿತ್ರದಿಂದ.. ಪ್ರಶಾಂತ್ ನೀಲ್ ಕೆಜಿಎಫ್‌ನಿಂದ ಪ್ರೇಕ್ಷಕರ ಮೇಲೆ ಸಾಮಾನ್ಯ ಪ್ರಭಾವ ಬೀರಲಿಲ್ಲ... ಹಾಗಾಗಿ ಇವರಿಬ್ಬರ ಕಾಂಬಿನೇಷನ್ ಎಂದರೆ ಬೇರೆ ಲೆವೆಲ್ ನಲ್ಲಿ ಸಿನಿಮಾ ಎಂದು ಅಭಿಮಾನಿಗಳು ಬಿಂಬಿಸಿಕೊಂಡಿದ್ದಾರೆ. ಅವರ ನಿರೀಕ್ಷೆಯಂತೆ ಪ್ರಶಾಂತ್ ನೀಲ್ ಸಲಾರ್‌ ಚಿತ್ರವನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಿದ್ದಾರೆ ಎನ್ನಲಾಗುತ್ತಿದೆ.. ಈ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿಹಾಸನ್, ಜಗಪತಿ ಬಾಬು, ಶ್ರೀಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ... 

ಇದನ್ನೂ ಓದಿ-Salar: ಸಲಾರ್ ಒಟಿಟಿ ರಿಲೀಸ್ ಡೇಟ್‌ ಫಿಕ್ಸ್..! ಸ್ಟ್ರೀಮಿಂಗ್ ಎಲ್ಲಿ? ಯಾವಾಗ?

ಇನ್ನು ಈ ಚಿತ್ರದ ಸಂಪೂರ್ಣ ಕಥೆಯು ಖಾನ್ಸರ್ ಎಂಬ ನಗರದ ಸುತ್ತ ಸುತ್ತುತ್ತದೆ... ಸಿನಿಮಾದಲ್ಲಿ ಈ ನಗರ ಪಾಕಿಸ್ತಾನ-ಗುಜರಾತ್ ನಡುವೆ ಇದೆ ಎಂದು ತೋರಿಸಲಾಗಿದೆ.. ಹಾಗಾದರೆ ಈ ನಗರ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಎನ್ನುವ ಅನುಮಾನಗಳು ಇದೀಗ ಸೃಷ್ಟಿಯಾಗಿವೆ.. 

ವಾಸ್ತವವಾಗಿ ಖಾನಸಾರ್ ಎಂಬ ನಗರವಿದೆ. ಆದರೆ ಇರಾನ್‌ನ ಖಾನ್ಸರ್ ಕೌಂಟಿ ಚಿತ್ರದಲ್ಲಿ ತೋರಿಸಿದಂತೆ ಅಲ್ಲ.. ಹೌದು ಈ ಖಾನ್ಸರ್ ನಗರ ಇರಾನ್‌ನ ಇಸ್ಫಹಾನ್ ಪ್ರಾಂತ್ಯದಲ್ಲಿದ್ದು.. 22 ಸಾವಿರಕ್ಕೂ ಹೆಚ್ಚು ಪರ್ಷಿಯನ್ನರು ಇಲ್ಲಿ ವಾಸಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.. ಆದರೆ ಚಿತ್ರದಲ್ಲಿ ತೋರಿಸಿರುವ ಖಾನ್‌ಸರ್‌ಗೂ ಇರಾನ್‌ನ ಖಾನ್ಸರ್ ಕೌಂಟಿಗೂ ಯಾವುದೇ ಹೋಲಿಕೆ ಇಲ್ಲ. ಸಲಾರ್ ಸಿನಿಮಾ ಬಿಡುಗಡೆಯಾದ ನಂತರ ಈ ಖಾನ್ಸಾರ್ ಸಿಟಿ ಬೆಳಕಿಗೆ ಬಂದಿದ್ದು.. ಸದ್ಯ ಈ ನಗರ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ ಎಂದು ನೋಡಲು ಅಭಿಮಾನಿಗಳು ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ.

ಇದನ್ನೂ ಓದಿ-BBK 10: ಬಿಗ್‌ಬಾಸ್‌ನಲ್ಲಿ ಕಿಚ್ಚನ ಪಂಚಾಯ್ತಿ ಇಲ್ಲದೆ ವೀಕೆಂಡ್‌ ಮುಕ್ತಾಯ: ಅಸಲಿ ಮ್ಯಾಟರ್‌ ಗೊತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News