BBK 9 Winner: ರೂಪೇಶ್ ಶೆಟ್ಟಿ ಮುಡಿಗೆ ಬಿಗ್ ಬಾಸ್ ಕಿರೀಟ, ರನ್ನರ್‌ ಅಪ್‌ ಆದ ರಾಕೇಶ್‌ ಅಡಿಗ

Bigg Boss Kannada 9 Grand Finale : ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 9 ಗೆ ಇಂದು ತೆರೆ ಬಿದ್ದಿದೆ. 100 ದಿನಗಳ ಆಟದಲ್ಲಿ ದೊಡ್ಮನೆಯೊಳಗೆ ತಮ್ಮದೇ ಶೈಲಿಯಲ್ಲಿ ಆಡಿ ಇದೀಗ ಒಬ್ಬರು ವಿನ್ನರ್‌ ಆಗಿದ್ದಾರೆ. ರೂಪೇಶ್ ಶೆಟ್ಟಿ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. 

Written by - Chetana Devarmani | Last Updated : Jan 1, 2023, 12:27 AM IST
  • ಬಿಗ್‌ಬಾಸ್ ಸೀಸನ್ 9 ಗೆ ಇಂದು ತೆರೆ ಬಿದ್ದಿದೆ
  • ರೂಪೇಶ್ ಶೆಟ್ಟಿ ಮುಡಿಗೆ ಬಿಗ್ ಬಾಸ್ ಕಿರೀಟ
  • ರನ್ನರ್‌ ಅಪ್‌ ಆದ ರಾಕೇಶ್‌ ಅಡಿಗ
BBK 9 Winner: ರೂಪೇಶ್ ಶೆಟ್ಟಿ ಮುಡಿಗೆ ಬಿಗ್ ಬಾಸ್ ಕಿರೀಟ, ರನ್ನರ್‌ ಅಪ್‌ ಆದ ರಾಕೇಶ್‌ ಅಡಿಗ  title=

Bigg Boss Kannada 9 Grand Finale : ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 9 ಗೆ ಇಂದು ತೆರೆ ಬಿದ್ದಿದೆ. 100 ದಿನಗಳ ಆಟದಲ್ಲಿ ದೊಡ್ಮನೆಯೊಳಗೆ ತಮ್ಮದೇ ಶೈಲಿಯಲ್ಲಿ ಆಡಿ ಇದೀಗ ಒಬ್ಬರು ವಿನ್ನರ್‌ ಆಗಿದ್ದಾರೆ. ರೂಪೇಶ್ ಶೆಟ್ಟಿ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸು ಮೂಲಕ ಪರಿಚಿತರಾಗಿದ್ದ ರೂಪೇಶ್‌ ಶೆಟ್ಟಿ, ಬಿಗ್‌ ಬಾಸ್‌ ಮನೆಗೆ ಕಾಲಿಟ್ಟರು. ಸದಾ ನಗು ಮುಖದ ಈ ಚೆಲುವ ತಮ್ಮ ಸ್ನೇಹದಿಂದಲೇ ಎಲ್ಲರ ಮನಗೆದ್ದರು. 

'ಗಿರಿಗಿಟ್' ಚಿತ್ರದ ಮೂಲಕ ಸೂಪರ್ ಸಕ್ಸಸನ್ನು ಕಂಡಿದ್ದರು. ಈ ಚಿತ್ರದ ನಟನೆ ನೋಡಿಯೇ, ಬಿಗ್ ಬಾಸ್‌ಗೆ ಬರಲು ರೂಪೇಶ್ ಶೆಟ್ಟಿಗೆ ಅವಕಾಶ ಕೂಡ ಸಿಕ್ಕಿತ್ತು. ಒಟಿಟಿಯ ಬಿಗ್‌ ಬಾಸ್‌ನಲ್ಲೂ ವಿನ್ನರ್‌ ಆಗಿದ್ದ ರೂಪೇಶ್‌ ಶೆಟ್ಟಿ ಇದೀಗ ಟಿವಿ ಬಿಗ್‌ಬಾಸ್‌ನಲ್ಲೂ ವಿನ್ನರ್‌ ಆಗಿದ್ದಾರೆ.

ಇದನ್ನೂ ಓದಿ : BBK 9 : 2ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ದೀಪಿಕಾ ದಾಸ್‌

ರಾಕೇಶ್ ಅಡಿಗ ಅವರು ಪ್ರತಿ ಕಾರ್ಯದಲ್ಲೂ ಅತ್ಯುತ್ತಮವಾದದ್ದನ್ನು ನೀಡಿದರು. ಅವರು ಬಿಗ್ ಬಾಸ್ ಕನ್ನಡ 9 ಮನೆಗೆ ಪ್ರವೇಶಿಸಿದಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದರು ಮತ್ತು ಟಾಸ್ಕ್‌ಗಳಲ್ಲಿ ತಮ್ಮ ಕಾರ್ಯಕ್ಷಮತೆ ಮತ್ತು ನಡವಳಿಕೆಯಿಂದ ಜನರನ್ನು ಆಕರ್ಷಿಸಿದರು. ರಾಕೇಶ್ ಅಡಿಗ ಅಭಿಮಾನಿಗಳು ಅವರನ್ನು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಮಾಡಲು ಯಾವುದೇ ಅವಕಾಶವನ್ನು ಬಿಡಲಿಲ್ಲ. ರಾಕೇಶ್ ಅಡಿಗ ನಾಮೆನೇಟ್‌ ಆದಾಗ ಸೇವ್‌ ಆಗುವವರಲ್ಲಿ ಯಾವಾಗಲೂ ಹೆಚ್ಚು ಮತ ಪಡೆದು ಅಗ್ರಸ್ಥಾನದಲ್ಲಿದ್ದರು. 

ಬಿಗ್ ಬಾಸ್ ಜರ್ನಿಯಲ್ಲಿ ರಾಕೇಶ್ ಅಡಿಗ ಅಬ್ಬಬ್ಬಾ ಅಂದ್ರೆ ಎರಡರಿಂದ ಮೂರು ಬಾರಿ ಏರುಧ್ವನಿಯಲ್ಲಿ ಮಾತನಾಡಿರುವುದು ಬಿಟ್ಟರೆ, ಮತ್ತೆಲ್ಲ ಸಂದರ್ಭಗಳನ್ನು ಶಾಂತವಾಗಿಯೇ ಹ್ಯಾಂಡಲ್‌ ಮಾಡಿದ್ದಾರೆ. ಎಂತಹ ಕಠಿಣ  ಪರಿಸ್ಥಿತಿಯಲ್ಲಿಯೂ ರಾಕೇಶ್ ಅಡಿಗ ತಾಳ್ಮೆ ಕಳೆದುಕೊಂಡಿಲ್ಲ. ತಾಳ್ಮೆಯೇ ಎಲ್ಲಕ್ಕಿಂತ ಮಿಗಿಲಾದ ಆಯುಧ ಎಂದು ತೋರಿಸಿದ ರಾಕೇಶ್‌ ಅಡಿಗ ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್‌ 9 ರ ಮೊದಲ ರನ್ನರ್‌ ಅಪ್‌ ಆಗಿದ್ದಾರೆ. 

ಇದನ್ನೂ ಓದಿ : Kiccha Sudeep : ಬಿಗ್‌ ಬಾಸ್‌ ವೇದಿಕೆ ಮೇಲೆ ಕಣ್ಣೀರಿಟ್ಟ ಕಿಚ್ಚ! ಯಾಕೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News