Shree Leela: ಶ್ರೀಲೀಲಾ ಜೊತೆ ರೊಮ್ಯಾನ್ಸ್: ರವಿಚಂದ್ರನ್ ಹೇಳಿದ್ದೇನು ಗೊತ್ತಾ..?‌

ನಿಮಗೆಲ್ಲಾ ಗೊತ್ತಿರುವಂತೆ 'ಬೈ ಟು ಲವ್' ಸಿನಿಮಾ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಈ ಕಾರಣಕ್ಕೆ ಸಿನಿಮಾ ತಂಡ ಪ್ರೀ ರಿಲೀಸ್‌ ಇವೆಂಟ್‌ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಕನ್ನಡಿಗರ ಪ್ರೀತಿಯ 'ರವಿಮಾಮ' ಕೂಡ ಬಂದಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ.

Written by - Malathesha M | Edited by - Yashaswini V | Last Updated : Feb 17, 2022, 11:05 AM IST
  • ರವಿಚಂದ್ರನ್‌ ಮಾತಿಗೆ ನಿಂತರೆ ಎಷ್ಟೊತ್ತಾದರೂ ಬೇಸರ ಆಗೋದೆ ಇಲ್ಲ
  • ತಮ್ಮ ಮಾತಿನ ಮಧ್ಯೆ ಮಧ್ಯೆ 'ರವಿಮಾಮ' ಹಾರಿಸುವ ನಗೆ ಚಟಾಕಿಗೆ ಮನಸೋಲದೆ ಇರೋರು ಇಲ್ಲ
  • ಆಂಕರ್ಸ್‌ ಕೂಡ ನಟ ರವಿಚಂದ್ರನ್‌ ಅವರ ಕಾಲು ಎಳೆಯಲು ಟ್ರೈ ಮಾಡ್ತಾರೆ. ಆದರೆ 'ರವಿಮಾಮ' ಸೋಲುವ ಮಾತೇ ಇಲ್ಲ
Shree Leela: ಶ್ರೀಲೀಲಾ ಜೊತೆ ರೊಮ್ಯಾನ್ಸ್: ರವಿಚಂದ್ರನ್ ಹೇಳಿದ್ದೇನು ಗೊತ್ತಾ..?‌ title=
Ravichandran romance with shree leela

ಸ್ಯಾಂಡಲ್‌ವುಡ್‌ ಗಲ್ಲಿಯಲ್ಲಿ ಎಲ್ಲೆಲ್ಲೂ ಶ್ರೀಲೀಲಾ ಬಗ್ಗೆಯೇ ಮಾತುಕತೆ. ಈಗಾಗಲೇ ಸೌತ್‌ ಸಿನಿ ವೇದಿಕೆಯಲ್ಲಿ ಸಖತ್‌ ಸೌಂಡ್‌ ಮಾಡುತ್ತಿರುವ ಶ್ರೀಲೀಲಾ ಬಗ್ಗೆ, ನಟ ರವಿಚಂದ್ರನ್‌ ಹೇಳಿರುವ ಮಾತು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ನಿಮಗೆಲ್ಲಾ ಗೊತ್ತಿರುವಂತೆ 'ಬೈ ಟು ಲವ್' ಸಿನಿಮಾ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಈ ಕಾರಣಕ್ಕೆ ಸಿನಿಮಾ ತಂಡ ಪ್ರೀ ರಿಲೀಸ್‌ ಇವೆಂಟ್‌ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಕನ್ನಡಿಗರ ಪ್ರೀತಿಯ 'ರವಿಮಾಮ' ಕೂಡ ಬಂದಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ.

ಇದನ್ನೂ ಓದಿ- 'ಕೆಜಿಎಫ್‌-2' ದಿನವೇ 'ಜೆರ್ಸಿ' ರಿಲೀಸ್..!‌ ನಿರ್ಮಾಪಕ ಹೇಳಿದ್ದೇನು ಗೊತ್ತಾ..?

ಸೋಲಿಲ್ಲದ ಸರದಾರ..!
ರವಿಚಂದ್ರನ್‌ (Ravichandran) ಮಾತಿಗೆ ನಿಂತರೆ ಎಷ್ಟೊತ್ತಾದರೂ ಬೇಸರ ಆಗೋದೆ ಇಲ್ಲ. ತಮ್ಮ ಮಾತಿನ ಮಧ್ಯೆ ಮಧ್ಯೆ 'ರವಿಮಾಮ' ಹಾರಿಸುವ ನಗೆ ಚಟಾಕಿಗೆ ಮನಸೋಲದೆ ಇರೋರು ಇಲ್ಲ. ಹೀಗಾಗಿ ಆಂಕರ್ಸ್‌ ಕೂಡ ನಟ ರವಿಚಂದ್ರನ್‌ ಅವರ ಕಾಲು ಎಳೆಯಲು ಟ್ರೈ ಮಾಡ್ತಾರೆ. ಆದರೆ 'ರವಿಮಾಮ' ಸೋಲುವ ಮಾತೇ ಇಲ್ಲ. ಹೀಗೆ ನಟ ರವಿಚಂದ್ರನ್‌ ನಟಿ ಶ್ರೀಲೀಲಾ ಬಗ್ಗೆ ನೀಡಿರುವ ಹೇಳಿಕೆಯೊಂದು ವೈರಲ್‌ ಆಗುತ್ತಿದೆ.

ಅನುಶ್ರೀ ಸವಾಲು..!
ಅಂದಹಾಗೆ 'ಬೈ ಟು ಲವ್' ಪ್ರೀ ರಿಲೀಸ್‌ ಇವೆಂಟ್‌ ನಲ್ಲಿ ಮಾತನಾಡಿದ ರವಿಚಂದ್ರನ್‌ಗೆ ನಿರೂಪಕಿ ಅನುಶ್ರೀ (Anushree) ಒಂದು ಸವಾಲು ಹಾಕಿದ್ರು. ಅದೇನಪ್ಪ ಅಂದ್ರೆ, ನೀವು ಶ್ರೀಲೀಲಾ (Shree Leela) ಜೊತೆ ಈಗ ರೋಮ್ಯಾನ್ಸ್ ಮಾಡಬೇಕು ಅಂದ್ರು.

ಇದನ್ನೂ ಓದಿ- ಕನ್ನಡಕ್ಕಾಗಿ ಒಂದನ್ನು ಒತ್ತಿ' ಅಂತಿದ್ದ ಕೃಷಿ ಈಗ ವಿಭಿನ್ನ ವೇಷದಲ್ಲಿ..!

ನಿರೂಪಕಿ ಅನುಶ್ರೀ ಸವಾಲಿಗೆ ತಕ್ಷಣ ಉತ್ತರ ನೀಡಿದ ನಟ ರವಿಚಂದ್ರನ್‌, ಶ್ರೀಲೀಲಾ ಜೊತೆ ರೋಮ್ಯಾನ್ಸ್ ಮಾಡಲು ಸಾಧ್ಯವಿಲ್ಲ. ಅದನ್ನ ನೀವೇ ಅರ್ಥ ಮಾಡಿಕೊಳ್ಳಿ  ಅಂತಾ ಒಂದು ಸ್ಮೈಲ್‌ ಕೊಟ್ಟರು. ಇಷ್ಟೇ ಅಲ್ಲದೆ ತಮ್ಮ ಮಗ ಶ್ರೀಲೀಲಾ ಅವರನ್ನು ನೋಡಲು ಬಂದಿದ್ದಾನೆ ಅಂದ್ರು. ಸಭೆಯಲ್ಲಿದ್ದವರೆಲ್ಲಾ ನಕ್ಕಿದ್ದೇ ನಕ್ಕಿದ್ದು. ಹೀಗೆ 'ರವಿಮಾಮ' ಹಾರಿಸಿದ ಹಾಸ್ಯ ಚಟಾಕಿಯ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News