ಬೆಂಗಳೂರು: ‘ಕೆಜಿಎಫ್’ ಹೆಸರು ಕೇಳಿದ್ರೆ ಸಾಕು ಸಿನಿಪ್ರಿಯರು ರೋಮಾಂಚನಗೊಳ್ಳುತ್ತಾರೆ. ಅದರಲ್ಲೂ ಸೌತ್ ಸಿನಿಪ್ರಿಯರು ‘ಕೆಜಿಎಫ್-2’ ನೋಡಿ ಥಿಯೇಟರ್ನಲ್ಲಿ ಹಬ್ಬ ಆಚರಿಸಿದ್ದಾರೆ. ಹೀಗೆ ಎಲ್ಲೆಲ್ಲೂ ‘ಕೆಜಿಎಫ್’ ಕಹಳೆ ಮೊಳಗಿರುವಾಗಲೇ ಮತ್ತೊಂದು ಮಹತ್ವದ ದಾಖಲೆಗೆ ಸಾಕ್ಷಿಯಾಗಿದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ. ಅದೇನು ಅಂತಾ ತಿಳಿಯೋಕೆ ಮುಂದೆ ಓದಿ.
ಅಂದಹಾಗೆ ಈವರೆಗೂ ‘ಕೆಜಿಎಫ್: ಚಾಪ್ಟರ್ 2’ ಬಾಕ್ಸ್ ಆಫೀಸ್ ಪುಡಿ ಪುಡಿ ಮಾಡುತ್ತಿತ್ತು. ಇದೀಗ ಇತಿಹಾಸವನ್ನೇ ಸೃಷ್ಟಿಮಾಡುತ್ತಿದೆ. 'ಕೆಜಿಎಫ್-2' ಚಿತ್ರ ಪ್ರೇಕ್ಷಕರ ವಿಚಾರದಲ್ಲೂ ದಾಖಲೆ ಬರೆದಿದೆ. ಯಶ್ ಅಭಿನಯದ 'ಕೆಜಿಎಫ್-2' ಚಿತ್ರವನ್ನು ಬರೋಬ್ಬರಿ 5 ಕೋಟಿ 5ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರಂತೆ. ಈ ಮೂಲಕ ಈವರೆಗೂ ಅತಿಹೆಚ್ಚು ಜನ ವೀಕ್ಷಿಸಿದ 3ನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ‘ಕೆಜಿಎಫ್-2’.
ಇದನ್ನೂ ಓದಿ: ಕೆಜಿಎಫ್ 2 ಸಿನಿಮಾ ನೋಡುತ್ತಲೇ ಅಭಿಮಾನಿ ಸಾವು..!
ಮೊದಲ ಸ್ಥಾನ ಯಾರಿಗೆ..?
‘ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ..?’ ಇದೊಂದೇ ಪ್ರಶ್ನೆಗೆ ಉತ್ತರ ಹುಡುಕಲು ಕೋಟಿ ಕೋಟಿ ಅಭಿಮಾನಿಗಳು ‘ಬಾಹುಬಲಿ-2’ಗಾಗಿ ಕಾಯುತ್ತಾ ಕುಳಿತಿದ್ದರು. ಹಾಗೇ ಬಾಹುಬಲಿ ಹೊಸ ಇತಿಹಾಸ ನಿರ್ಮಿಸಿತ್ತು. ‘ಬಾಹುಬಲಿ-2’ ಸಿನಿಮಾವನ್ನು ಒಟ್ಟು 10 ಕೋಟಿ 80 ಲಕ್ಷ ಜನರು ವೀಕ್ಷಿಸಿದ್ದರು. ಈ ಮೂಲಕ ಅತಿಹೆಚ್ಚು ಜನ ವೀಕ್ಷಿಸಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಬಾಹುಬಲಿ ಸಿನಿಮಾಗೆ ಇದೆ. ಇನ್ನು 2ನೇ ಸ್ಥಾನವನ್ನು ‘ಗದರ್; ಏಕ್ ಪ್ರೇಮ್ ಕಥಾ’ ಸಿನಿಮಾ ಪಡೆದುಕೊಂಡಿದೆ. ಸುಮಾರು 9 ಕೋಟಿ ಜನರು ಈ ಸಿನಿಮಾವನ್ನು ನೋಡಿದ್ದರಂತೆ. ಇದೀಗ ಕನ್ನಡ ಸಿನಿಮಾ ‘ಕೆಜಿಎಫ್-2’ 3ನೇ ಸ್ಥಾನ ಪಡೆದಿದ್ದು, ಮತ್ತಷ್ಟು ಸಾಧನೆ ಮಾಡುವ ಮುನ್ಸೂಚನೆ ನೀಡಿದೆ.
ಹೊಸ ಇತಿಹಾಸ ಸೃಷ್ಟಿ..!
ಖಡಕ್ ಲುಕ್, ಜಬರ್ದಸ್ತ್ ಡೈಲಾಗ್ಸ್ ಮೂಲಕ ಜಗತ್ತಿನಾದ್ಯಂತ ರಾಕಿಭಾಯ್ ಅಬ್ಬರದ ಎಂಟ್ರಿ ಕೊಟ್ಟಾಗಿದೆ. ರಾಕಿ ಅಬ್ಬರದ ಎದುರು ಹಾಲಿವುಡ್, ಬಾಲಿವುಡ್ ಫುಲ್ ಶೇಕ್ ಶೇಕ್ ಆಗಿವೆ. ಪೋಸ್ಟರ್, ಟೀಸರ್ ಮತ್ತು ಟ್ರೇಲರ್ ಮೂಲಕ ಹೊಸ ಹೊಸ ದಾಖಲೆ ಸೃಷ್ಟಿಸಿದ್ದ ‘ಕೆಜಿಎಫ್-2’ ಥಿಯೇಟರ್ಗಳಲ್ಲಿ ಕೂಡ ಇದೇ ರೀತಿ ಹೊಸ ಇತಿಹಾಸ ಸೃಷ್ಟಿಸಿದೆ. ಹೀಗಾಗಿ ‘ಕೆಜಿಎಫ್: ಚಾಪ್ಟರ್ 3’ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಇದೇ ಸಂದರ್ಭದಲ್ಲೇ ಮತ್ತೊಂದು ಮಹತ್ವದ ಸಾಧನೆ ಮಾಡಿದೆ ‘ಕೆಜಿಎಫ್-2’.
ಇದನ್ನೂ ಓದಿ: Viral Video: ನಟ ರಣ್ಬೀರ್ ಕಪೂರ್ ನೋಡಿ ಅಭಿಮಾನಿ ಮಾಡಿದ್ದೇನು ನೋಡಿ
ಒಟ್ಟಾರೆ ಹೇಳೋದಾದ್ರೆ 'ಕೆಜಿಎಫ್' ಸ್ಯಾಂಡಲ್ವುಡ್ ಪಾಲಿಗೆ ರಿಯಲ್ ಗೋಲ್ಡ್. ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದ್ರೆ ‘ಕೆಜಿಎಫ್-2’ ವಿಶ್ವದಾದ್ಯಂತ 1,150 ಕೋಟಿ ರೂ.ಗೂ ಹೆಚ್ಚು ಹಣ ಬಾಚಿದ್ದು, ಹಿಂದಿ ಬೆಲ್ಟ್ ನಲ್ಲಿ 400 ಕೋಟಿ ರೂ.ಗೂ ಹೆಚ್ಚು ಹಣ ಗಳಿಸಿದೆ. ಈ ಮೂಲಕ ಹಲವು ದಾಖಲೆಗಳನ್ನು ‘ಕೆಜಿಎಫ್’ ತನ್ನ ಹೆಸರಿಗೆ ಬರೆದುಕೊಂಡಿದ್ದು, ಇದೇ ರೀತಿ ಮತ್ತಷ್ಟು ರೆಕಾರ್ಡ್ ಬ್ರೇಕ್ ಆಗೋದರಲ್ಲಿ ಅನುಮಾನವೇ ಇಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.