Keradi : ಕಾಂತಾರ ಸಿನಿಮಾ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರು ಕೆರಾಡಿ ಹೆಸರಿನಲ್ಲಿ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ನಟ, ನಿರ್ದೇಶಕ, ನಿಮರ್ಮಾಪಕರಾಗಿಯೂ ಸೈ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಷಯವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. "ಒಂದು ಸಿನಿಮಾದ ಯಶಸ್ಸಿಗೆ ಅದರ ನಿರ್ಮಾಣವಷ್ಟೇ ಕಾರಣವಾಗುವುದಿಲ್ಲ, ಪ್ರಚಾರವೂ ಅಷ್ಟೇ ಕಾರಣವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ನಮ್ಮ ತಂಡ ಹೊಸ ಹೆಜ್ಜೆ ಇಡುತ್ತಿದೆ
ʼಕೆರಾಡಿ ಸ್ಟುಡಿಯೋಸ್ʼ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುವುದೇ ನಮ್ಮ ಆಶಯ" ಎಂದು ರಿಷಬ್ ಶೆಟ್ಟಿ ಪತ್ರದಲ್ಲಿ ಬರೆದಿದ್ದಾರೆ.
ನಮ್ಮ ಕನಸಿನ 'ಕೆರಾಡಿ', ಇದೀಗ ಚಿತ್ರಪ್ರಚಾರಕ್ಕೆ ಆಗಿದೆ ರೆಡಿ! #kerady #keradystudios #rishabshettyfilms #moviemarketing #kannadafilmindustry pic.twitter.com/hOGqKMlyQV
— Rishab Shetty (@shetty_rishab) May 25, 2023
ಇದನ್ನೂ ಓದಿ-ʼದಿ ಕೇರಳ ಸ್ಟೋರಿʼ ನಟಿ ಆದಾ ಶರ್ಮಾಗೆ ಆನ್‌ಲೈನ್ ಬೆದರಿಕೆ; ವೈಯಕ್ತಿಕ ಮಾಹಿತಿ ಲೀಕ್
ಅಂದಹಾಗೆ ಕೆರಾಡಿ.. ನಾನು ಹುಟ್ಟಿ ಬೆಳೆದ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು. ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೆ! ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ. ನಿಮ್ಮ ಸಹಕಾರವಿರಲಿ" ಎಂದು ರಿಷಬ್ ಕೋರಿದ್ದಾರೆ.
ಹೊಸ ಹೆಜ್ಜೆ, ಹೊಸ ಕನಸು!#kerady #keradystudios #rishabshettyfilms #moviemarketing #kannadafilmindustry pic.twitter.com/H67tiPQCDE
— Rishab Shetty (@shetty_rishab) May 25, 2023
ರಿಷಬ್ ಶೆಟ್ಟಿ ಉತ್ತಮ ನಟ, ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಪ್ರತಿಕ್ಷೇತ್ರದಲ್ಲಿಯೂ ಅವರು ಯಶಸ್ಸನ್ನು ಕಂಡಿದ್ದಾರೆ. ಈಗ ಅವರು ಇದೇ ಭರವಸೆಯೊಂದಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರಿಷಬ್ ಅವರು ಸಿನಿಮಾಗಳ ಪ್ರಚಾರ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಸೇವೆಗಳನ್ನು ಒದಗಿಸಲು ಹೊಸ ವೇದಿಕೆಯನ್ನು ಪರಿಚಯಿಸಿದ್ದಾರೆ. ಅವರ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಶುಭಹಾರೈಕೆಗಳು ಬರುತ್ತಿದ್ದು, ಅವರು ಈ ಎಲ್ಲ ಕ್ಷೇತ್ರಗಲ್ಲಿಯೂ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಿದ್ದಾರೆ.
ಇದನ್ನೂ ಓದಿ-Naveen Shankar : ಖಡಕ್ ವಿಲನ್ ಈಗ ರಗಡ್ ಲುಕ್‌ನಲ್ಲಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ