Upendra UI Film Song: ಪ್ರೇಮಿಗಳ ದಿನಕ್ಕೆ ಹೊಸ ಸರ್ಪ್ರೈಸ್‌ ನೀಡಲಿದ್ದಾರೆ ರಿಯಲ್‌ ಸ್ಟಾರ್‌

UI Song Promo Release: ಉಪ್ಪಿ ನಿರ್ದೇಶನದ UI ಚಿತ್ರದ ಮೊದಲ ಹಾಡಿನ ಪ್ರೋಮೋ ಇದೇ ಫೆಬ್ರವರಿ 14 ರಂದು ಬೆಳಿಗ್ಗೆ 10 ಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.  

Written by - Zee Kannada News Desk | Last Updated : Feb 13, 2024, 01:05 PM IST
  • ಇದೇ 14 ರಂದು ಉಪ್ಪಿ ನಿರ್ದೇಶಿಸಿರುವ UI ಚಿತ್ರದ ಮೊದಲ ಹಾಡಿನ ಪ್ರೋಮೋ ರಿಲೀಸ್
    ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದ UI ಸಿನಿಮಾದ ಪೋಸ್ಟರ್
    ಹೊಸ ಅವತಾರದಲ್ಲಿ ಮತ್ತೆ ತೆರೆ ಮೇಲೆ ಉಪ್ಪಿ
Upendra UI Film Song: ಪ್ರೇಮಿಗಳ ದಿನಕ್ಕೆ ಹೊಸ ಸರ್ಪ್ರೈಸ್‌ ನೀಡಲಿದ್ದಾರೆ ರಿಯಲ್‌ ಸ್ಟಾರ್‌ title=

UI Song Promo Release Date : ರಿಯಲ್‌ಸ್ಟಾರ್‌ ಉಪೇಂದ್ರರವರು ನಟ,ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯವಾಗಿ ಉಳಿದಿದ್ದೂ ,ಇತರೆ ಭಾಷೆಗಳಲ್ಲಿಯೂ ಹೆಸರು ಮಾಡಿ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತಿದ್ದಾರೆ.ಒಮ್ಮೆ ಯಾವುದಾದರೂ ಸಿನಿಮಾವನ್ನು ತೆರೆ ಮೇಲೆ ತರಲು ಶುರುಮಾಡಿದ್ದರೆ ಅದಕ್ಕೆ ತಕ್ಕಾದ ನ್ಯಾಯವನ್ನು ಸಲ್ಲಿಸಿಯೇ ತೀರುತ್ತಾರೆ.ಅವರು ನಿರ್ದೇಶನ ಮಾಡಿದಂತಹ ಸಿನಿಮಾಗಳನ್ನು ನೋಡಲು ಕೇವಲ ಕನ್ನಡದ ಅಭಿಮಾನಿಗಳಷ್ಟೇ ಅಲ್ಲದೇ ಅಕ್ಕ-ಪಕ್ಕದ ರಾಜ್ಯದ ಅಭಿಮಾನಿಗಳು ಅಷ್ಟೇ ಕಾತುರದಿಂದ ಕಾಯುತ್ತಿರುತ್ತಾರೆ.ಹೌದು ಈಗ ಅಂತಹದ್ದೇ ಒಂದು ಕುತೂಹಲವನ್ನೇ ಹೊತ್ತು ತರುತ್ತಿರುವಂತಹ ಸಿನಿಮಾ UI ಆಗಿದೆ.

ಉಪ್ಪಿ ಯಾವುದೇ ಸಿನಿಮಾ ನಿರ್ದೇಶನ ಮಾಡಲು ಶುರು ಮಾಡಿದ್ದರೆ ನಿರ್ಮಾಣದ ಆರಂಭದಿಂದಲೂ ಕೊನೆಯವರೆಗೂ ತಮ್ಮ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಮಾಹಿತಿಯನ್ನು ಶೇರ್‌ ಮಾಡುತ್ತಲೇ ಇದ್ದೂ,ಉಪ್ಪಿ ಮಾಡುತ್ತಿರುವ ಸಿನಿಮಾದ ಕುತೂಹಲವನ್ನು ಹೆಚ್ಚಿಸುತ್ತಲೇ ಇರುತ್ತಾರೆ. UI ಸಿನಿಮಾದ ಮೊದಲ ಹಾಡಿನ ಸಣ್ಣ ತುಣುಕೊಂದನ್ನು ಇದೇ ಫೆಬ್ರವರಿ 14 ವಿಶೇಷವಾಗಿ ಪ್ರೇಮಿಗಳ ದಿನದಂದೇ ಬಿಡುಗಡೆ ಮಾಡಲು ತಯಾರಾಗಿದ್ದಾರೆ. 

ಇದನ್ನೂ ಓದಿ : ಟ್ರೈಲರ್ ನೋಡಿದ್ರೆ ಸಿನಿಮಾ ಬಗ್ಗೆ ಆಸಕ್ತಿ ಮೂಡುತ್ತೆ

ಖುದ್ದು ಉಪೇಂದ್ರರವರೇ ತಮ್ಮ ಅಭಿಮಾನಿಗಳಿಗೆ ಹಾಡಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಇದೇ ಸಂದರ್ಭದಲ್ಲಿ UI ಚಿತ್ರದ ಹೊಸ ಪೋಸ್ಟರ್‌ ಒಂದನ್ನೂ ಬಿಡುಗಡೆ ಮಾಡುತ್ತಿದ್ದೂ, ಈ ಪೋಸ್ಟರ್‌ ನಲ್ಲಿ ಉಪ್ಪಿ ಯಾವ ಗೆಟಪ್‌ನಲ್ಲಿ ಮಿಂಚಿದ್ದಾರೆ ಎನ್ನುವ ಕುತೂಹಲವು ಅಭಿಮಾನಿಗಳಲ್ಲಿ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಪೋಸ್ಟರ್ಸ್‌ ಬಗ್ಗೆ ಚರ್ಚೆಗಳು ಹುಟ್ಟುಹಾಕುತ್ತಿದೆ. ಸಂಗೀತ ನಿರ್ದೇಶಕರಾಗಿ ಅಜನೀಶ್ ಲೋಕನಾಥ್  ಈ ಹಿಂದೆ, ಕಾಂತಾರ, ವಿಕ್ರಾಂತ್‌ ರೋಣ ಇನ್ನೂ ಸಾಕಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದೂ, ಉಪ್ಪಿ ನಟನೆಯ UI ಸಿನಿಮಾದಲ್ಲಿಯೂ ಅಜನೀಶ್‌ ಲೋಕನಾಥ್‌ ರವರೇ ಸಂಗೀತ ಸಂಯೋಜಕರಾಗಿದ್ದಾರೆ.

ಇವರ ಸಂಗೀತವನ್ನು ಕೇಳಲು ಕೇವಲ ಕನ್ನಡಿಗರಷ್ಟೇ ಅಲ್ಲದೇ ಬೇರೆ ಬೇರೆ ಭಾಷೆಯವರು ಕಾತುರದಿಂದ ಕಾಯುತ್ತಿದ್ದಾರೆ. ಉಪೇಂದ್ರರವರು UI ಸಿನಿಮಾದಲ್ಲಿ ಹೊಸ ಪ್ರಪಂಚವನ್ನು ಸೃಷ್ಟಿಸಿದ್ದೂ , ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವರ್ಲ್ಡ್‌ನಂತೆ ಹೊಸ ಅವತಾರಕ್ಕೆ ಮುನ್ನುಡಿಯನ್ನು ಕ್ರಿಯೇಟ್‌ ಮಾಡಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಸ್ಟಾರ್‌ ಬಳಗವೇ ಉಪ್ಪಿ ಜೊತೆ ತೆರೆಯನ್ನು ಹಂಚಿಕೊಂಡಿದ್ದೂ, ಅವರಲ್ಲಿ ಅಚ್ಯುತ್ ಕುಮಾರ್, ಸಾಧುಕೋಕಿಲಾ, ರವಿಶಂಕರ್ ರವರು ಈ ಸಿನಿಮಾದಲ್ಲಿ ವಿಭಿನ್ನವಾದ ಪಾತ್ರವನ್ನು ಅಭಿನಯಿಸಿದ್ದಾರೆ. ರೀಶ್ಮಾ ನಾಣಯ್ಯ , ನಿಧಿ ಸುಬ್ಬಯ್ಯ ಕೂಡ ನಟಿಸಿದ್ದಾರೆ. ಈ ಸಿನಿಮಾವನ್ನು ಒಂದೇ ಬಾರಿಗೆ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಳಿಸದೇ ಬೇರೆ ಬೇರೆ ಭಾಷೆಯಲ್ಲಿಯೂ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. UI ಸಿನಿಮಾವನ್ನು ಕೆ.ಪಿ.ಶ್ರೀಕಾಂತ್ ಹಾಗೂ ಜಿ. ಮನೋಹರನ್ ಅದ್ದೂರಿಯಾಗಿ ನಿರ್ಮಿಸಿದ್ದಾರೆ.ಇದೇ ಸಿನಿಮಾದ ಮೊದಲನೇ ಹಾಡನ್ನು ಫೆಬ್ರವರಿ 14 ಕ್ಕೆ ನಿಮ್ಮ ಮುಂದೆ ಬರಲಿದೆ ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News