‘ಅಪ್ಪು’ ಹಣೆಯ ಮೇಲೂ ಇದೆ ಉಪ್ಪಿಯ ಹೊಸ ಸಿನಿಮಾದ ಟೈಟಲ್, ಏನಿದು ವಿಚಿತ್ರ..?

ತಮ್ಮ ಸಿನಿಮಾ ಟೈಟಲ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ನಿರ್ದಿಷ್ಟ ಅರ್ಥ ಹೇಳದಿದ್ದರೂ ಅಭಿಮಾನಿಗಳು ಮಾತ್ರ ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Jun 3, 2022, 06:19 PM IST
  • ಹೊಸ ಸಿನಿಮಾ ಘೋಷಿಸಿ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ಉಪೇಂದ್ರ
  • ರಿಯಲ್ ಸ್ಟಾರ್ ಉಪ್ಪಿಯ ಸಿನಿಮಾ ಟೈಟಲ್ ಬಗ್ಗೆ ತಲೆಕೆಡಿಸಿಕೊಂಡ ಫ್ಯಾನ್ಸ್
  • ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಣೆ ಮೇಲೂ ಉಪ್ಪಿ ಸಿನಿಮಾ ಟೈಟಲ್
‘ಅಪ್ಪು’ ಹಣೆಯ ಮೇಲೂ ಇದೆ ಉಪ್ಪಿಯ ಹೊಸ ಸಿನಿಮಾದ ಟೈಟಲ್, ಏನಿದು ವಿಚಿತ್ರ..? title=
‘ಅಪ್ಪು’ ಹಣೆ ಮೇಲೂ ಉಪ್ಪಿ ಟೈಟಲ್!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಟನೆ ಮತ್ತು ನಿರ್ದೇಶನದ ಹೊಸ ಸಿನಿಮಾ UI. ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ. ಉಪ್ಪಿ ಘೋಷಿಸಿರುವ ಹೊಸ ಸಿನಿಮಾದ ಟೈಟಲ್ ತೀವ್ರ ಕುತೂಹಲ ಮೂಡಿಸಿದೆ. ಮುಹೂರ್ತ ಸಮಾರಂಭದ ಬಳಿಕ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಉಪ್ಪಿ

ಮುಹೂರ್ತ ಸಮಾರಂಭಕ್ಕೆ ಸ್ವತಃ ಉಪ್ಪಿಯೇ ತಮ್ಮ ಚಿತ್ರದ ಟೈಟಲ್ ಅನ್ನು ಹಣೆ ಮೇಲೆ ಹಾಕಿಕೊಂಡು ಬಂದು ಗಮನ ಸೆಳೆದರು. ಈ ಟೈಟಲ್ ಬಗ್ಗೆ ಉಪ್ಪಿ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ಉಪೇಂದ್ರರ ಹೊಸ ಸಿನಿಮಾದ ಟೈಟಲ್‍ನ ಅರ್ಥವೇನು ಅಂತಾ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಧಾರ್ಮಿಕ ಚಿಹ್ನೆಯಂತೆ ಕಾಣುವ ಈ ಟೈಟಲ್ ಬಗ್ಗೆ ಇನ್ನಿಲ್ಲದ ಕುತೂಹಲ ಮೂಡಿದೆ.  

ಇದನ್ನೂ ಓದಿ: ಭರ್ಜರಿಯಾಗಿ 50 ದಿನ ಕಂಪ್ಲೀಟ್‌ ಮಾಡಿದ KGF Chapter 2

ತಮ್ಮ ಸಿನಿಮಾ ಟೈಟಲ್ ಬಗ್ಗೆ ಉಪ್ಪಿ ನಿರ್ದಿಷ್ಟ ಅರ್ಥ ಹೇಳದಿದ್ದರೂ ಅಭಿಮಾನಿಗಳು ಮಾತ್ರ ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ. ‘ಯು & ಐ’ ಅಂದರೆ ‘ನಾನು ಮತ್ತು ನೀನು’ ಅಂತಾ ಕೆಲವರು ವಾದಿಸಿದರೆ, ಇನ್ನೂ ಕೆಲವರು ಇದು ‘ಕುದುರೆ ಲಾಳ’ ಅಷ್ಟೇ ಅಂತಾ ಹೇಳುತ್ತಿದ್ದಾರೆ. ಮತ್ತೊಂದು ಜನರು ಇದು ‘ದೇವರ ನಾಮ’ ಎಂದು ಹೇಳುತ್ತಿದ್ದಾರೆ.

‘ಅಪ್ಪು’ ಹಣೆ ಮೇಲೂ ಉಪ್ಪಿ ಟೈಟಲ್!

ಮುಹೂರ್ತ ಸಮಾರಂಭದಲ್ಲಿ ಉಪ್ಪಿ ಸ್ಮಾರ್ಟ್‍ಫೋನ್‍ವೊಂದರಲ್ಲಿ ‘ಅಪ್ಪು’ ಹಣೆಯ ಮೇಲೂ UI ಇರುವುದನ್ನು ತೋರಿಸಿದ್ದಾರೆ. ಇದಾದ ಬಳಿಕ ಅನೇಕ ಅಭಿಮಾನಿಗಳು ಈ ಫೋಟೋವನ್ನು ತಮ್ಮ ಮೊಬೈಲ್ ಸ್ಟೇಟಸ್‍ಗಳಲ್ಲಿ ಇಟ್ಟುಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಾಲ್ಯದ ಫೋಟೋವನ್ನು ಉಪ್ಪಿ ತೋರಿಸಿದ್ದಾರೆ. ಇದರಲ್ಲಿ ‘ಅಪ್ಪು’ ಹಣೆಯ ಮೇಲೆ ನಾಮವಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾಗಳ ಬಗ್ಗೆ ಅಮಿತ್ ಶಾ ಮೆಚ್ಚುಗೆ

ತಮ್ಮ ಹಣೆಯ ಮೇಲೆ ಹೊಸ ಸಿನಿಮಾದ ಟೈಟಲ್ ತೋರಿಸುವುದರ ಜೊತೆಗೆ ಪುನೀತ್ ಅವರ ಬಾಲ್ಯದ ಫೋಟೋದಲ್ಲಿಯೂ ನಾಮವಿರುವುದನ್ನು ತೋರಿಸಿ ಸ್ಮರಿಸಿದ್ದಾರೆ. ಇದೇ ಸಂದರ್ಭದಲ್ಲಿ ‘ಅಪ್ಪು’ ಎಲ್ಲಿಯೂ ಹೋಗಿಲ್ಲ. ಅವರು ನಮ್ಮ ಜೊತೆಗೆ ಇದ್ದಾರೆ ಅಂತಾ ಪುನೀತ್ ಬಗ್ಗೆ ಒಂದಷ್ಟು ನೆನಪುಗಳನ್ನು ಉಪ್ಪು ಮೆಲಕು ಹಾಕಿದ್ದಾರೆ.     

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News