11/03 12:46 Save This Date: ಉಪ್ಪಿ ಅಭಿಮಾನಿಗಳಿಗೆ ಸಿಗಲಿದೆ ಬಿಗ್ ಸರ್ಪ್ರೈಸ್!

ಉಪೇಂದ್ರ.. ತಮ್ಮ ವಿಶಿಷ್ಟ ಆಲೋಚನಾ ಲಹರಿಗಳು, ವಿಭಿನ್ನ ನಟನಾ ಶೈಲಿಗಳಿಂದ ಅಭಿಮಾನಿಗಳ ಮನಸ್ಸು ಗೆದ್ದ ಸೂಪರ್ ಸ್ಟಾರ್. 

Written by - Zee Kannada News Desk | Last Updated : Mar 9, 2022, 03:23 PM IST
  • ಮಾರ್ಚ್‌ 11, ಮಧ್ಯಾಹ್ನ 11:46ಕ್ಕೆ ರಿಯಲ್‌ ಸ್ಟಾರ್‌ ಅಭಿಮಾನಿಗಳು ಫ್ರೀ ಮಾಡ್ಕೋಳ್ಳಿ
  • ಅವತ್ತು ಕರುನಾಡಿನ ಜನತೆಗೆ ಉಪ್ಪಿ ಕಡೆಯಿಂದ ವಿಶೇಷ ಅಪ್​ಡೇಟ್​ ಸಿಗಲಿದೆ
  • ಹಾಗಾದ್ರೆ ಏನಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ
11/03 12:46 Save This Date: ಉಪ್ಪಿ ಅಭಿಮಾನಿಗಳಿಗೆ ಸಿಗಲಿದೆ ಬಿಗ್ ಸರ್ಪ್ರೈಸ್!  title=
ಉಪೇಂದ್ರ

ಮಾರ್ಚ್‌ 11, ಮಧ್ಯಾಹ್ನ  11:46ಕ್ಕೆ ರಿಯಲ್‌ ಸ್ಟಾರ್‌ (Real Star) ಅಭಿಮಾನಿಗಳು ಫ್ರೀ ಮಾಡ್ಕೋಳ್ಳಿ. ಅವತ್ತು ಕರುನಾಡಿನ ಜನತೆಗೆ ಉಪ್ಪಿ ಕಡೆಯಿಂದ ವಿಶೇಷ ಅಪ್​ಡೇಟ್​ ಸಿಗಲಿದೆ. ಹಾಗಾದ್ರೆ ಏನಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. 

ಉಪೇಂದ್ರ.. ತಮ್ಮ ವಿಶಿಷ್ಟ ಆಲೋಚನಾ ಲಹರಿಗಳು, ವಿಭಿನ್ನ ನಟನಾ ಶೈಲಿಗಳಿಂದ ಅಭಿಮಾನಿಗಳ ಮನಸ್ಸು ಗೆದ್ದ ಸೂಪರ್ ಸ್ಟಾರ್. ಯಾವ ನಟನೂ ಮಾಡದ ವಿಶೇಷ ರೋಲ್‌ಗಳನ್ನ ಮಾಡುತ್ತಾ ಅಭಿಮಾನಿಗಳ ದಿಲ್‌ ಖುಷ್‌ಗೆ ಕಾರಣವಾಗಿರುತ್ತಾರೆ ಉಪ್ಪಿ.‌ ಉಪೇಂದ್ರ (Upendra) ಅವರ ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ ಅಂದ್ರೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತು ಕಾಯುತ್ತಾರೆ.  

ಇದನ್ನೂ ಓದಿ: Ram Chandra Raju : ಒಂದು ಕಾಲದಲ್ಲಿ 'ಯಶ್ ಬಾಡಿಗಾರ್ಡ್' ಆಗಿದ್ದ ಕೆಜಿಎಫ್ ವಿಲನ್ ಗರುಡ!

11/03 12:46 Save This Date ಎಂದು ಉಪೇಂದ್ರ ಹೇಳಿದ್ದಾರೆ. ಈ ಪೋಸ್ಟ್ ಕಂಡ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನೆರಡು ದಿನಗಳು ಹೇಗೆ ಕಳೆಯುತ್ತೆ ಎಂದು ಕಾತರರಾಗಿದ್ದಾರೆ. ಆ  ದಿನ ಆ ಟೈಮ್‌ಗೆ ಬಂದು ಉಪ್ಪಿ ಸರ್‌ ಹೇಳೋದಾದ್ರೂ ಏನು ಅನ್ನೂ ಕ್ಯೂರಿಸಿಯಿಟಿಯಿಂದ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಟೆನ್ಶನ್‌ ಆಗಿ ಕಾಮೆಂಟ್‌ಗಳ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

ಮಾರ್ಚ್​ 11ರ ದಿನಾಂಕವನ್ನು ಸೇವ್​ ಮಾಡಿಕೊಳ್ಳಿ ಎಂದು ಉಪೇಂದ್ರ ಅವರು ಅಭಿಮಾನಿಗಳಿಗೆ (Upendra Fans) ತಿಳಿಸೋ ಮೂಲಕ ಶಾಕ್‌ ಆಗಿದ್ದಾರೆ.. ಅಂದು ಮಧ್ಯಾಹ್ನ 12.46ಕ್ಕೆ ಅವರಿಂದ ವಿಶೇಷ ಅಪ್​ಡೇಟ್​ ಸಿಗಲಿದೆ. ಅದು ಅವರ ಡೈರೆಕ್ಷನ್​ ಸಿನಿಮಾದ ಬಗ್ಗೆ ಅವತ್ತು ಹೇಳ್ತಾರೆ ಅನ್ನೋದು ಎಲ್ಲರ ನಿರೀಕ್ಷೆ ಆಗಿದೆ. ಸದ್ಯಕ್ಕಂತೂ ಉಪೇಂದ್ರ ಅವರು ಆ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. 

 

 

1998ರಲ್ಲಿ ತೆರೆಗೆ ಬಂದ 'ಎ' ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ  ಮನೆಮಾತಾಗಿದ್ದಾರೆ.. ಇವರ 'ಉಪೇಂದ್ರ' ಚಿತ್ರವು ಹಲವಾರು ದಾಖಲೆಗಳನ್ನು ಬರೆದಿದೆ. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಭರ್ಜರಿ ಸೌಂಡ್‌ ಮಾಡಿದೆ.1992ರಲ್ಲಿ ತೆರೆಗೆ ಬಂದ 'ತರ್ಲೆನನ್ಮಗ' ಚಿತ್ರದ ಮೂಲಕ ಡೈರೆಕ್ಷನ್‌ ಫಿಲ್ಡಿಗಿಳಿದ್ರು.  1993ರಲ್ಲಿ 'ಶ್' ಎಂಬ ಹಾರರ್ ಚಿತ್ರ ಡೈರಕ್ಟ್‌  ಮಾಡಿದ್ರು.

1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ 'ಓಂ' ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಂತರ 'ಆಪರೇಷನ್ ಅಂತ', 'ಸ್ವಸ್ತಿಕ್' ಚಿತ್ರಗಳನ್ನು ನಿರ್ದೇಶಿಸಿದರು.ಇಲ್ಲಿಂದ ಮುಂದೆ 10 ವರ್ಷಗಳ ಕಾಲ ನಿರ್ದೇಶನವನ್ನು ಬದಿಗಿಟ್ಟ ಉಪ್ಪಿ, ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಮುಂದೆ ಇವರು 2010ರಲ್ಲಿ ನಿರ್ದೇಶಿಸಿದ 'ಸೂಪರ್' (Super) ಮತ್ತು 2015ರಲ್ಲಿ ನಿರ್ದೇಶಿಸಿದ 'ಉಪ್ಪಿ 2' ಚಿತ್ರಗಳು ಶತದಿನ ಪೂರೈಸಿದವು.

ಪ್ರಜಾಕೀಯದ (Prajakiya) ಕಡೆಗೂ ಅವರು ಗಮನ ಹರಿಸಿರುವುದರಿಂದ ಡೈರೆಕ್ಷನ್​ ಕಡೆಗೆ ಸಮಯ ನೀಡಲು ಅವರಿಗೆ ಸಾಧ್ಯ ಆಗಿರಲಿಲ್ಲ. ಆದರೆ ತಯಾರಿಯಂತೂ ನಡೆದೇ ಇದೆ. ಈಗ ಉಪೇಂದ್ರ ಅವರು ತಮ್ಮ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಲು ಕಾದಿದ್ದಾರೆ. ಆದರೆ ಒಂದಷ್ಟು ಸಸ್ಪೆನ್ಸ್​ ಕಾಯ್ದುಕೊಂಡಿದ್ದಾರೆ. ಹೊಸದೊಂದು ಡೇಟ್ ಅನೌನ್ಸ್​ ಮಾಡಿ, ಆ ದಿನಾಂಕಕ್ಕಾಗಿ ಎಲ್ಲರೂ ಕಾಯುವಂತೆ ಮಾಡಿದ್ದಾರೆ 'ರಿಯಲ್​ ಸ್ಟಾರ್​' ಉಪ್ಪಿ.

ಇದನ್ನೂ ಓದಿ: James: 'ಜೇಮ್ಸ್' ಬಂದ್ರು.. 'ಜೇಮ್ಸ್'..! ಕರುನಾಡ ಅಪ್ಪು.. ಕನ್ನಡಿಗರ ಹೆಮ್ಮೆ..!

ಕನ್ನಡ ಚಿತ್ರರಂಗದ (Sandalwood) ಎರಡು ಖ್ಯಾತ ನಿರ್ಮಾಣ ಸಂಸ್ಥೆಗಳು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡಲಿವೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಯುವ ಸಂಗೀತ ನಿರ್ದೇಶಕರೊಬ್ಬರು ಸಂಗೀತ ಸಂಯೋಜನೆ ಮಾಡಲಿದ್ದು, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಸಿದ್ಧವಾಗಲಿದೆ ಎಂಬ ಗುಸುಗುಸು ಕೂಡ ಕೇಳಿಬಂದಿದೆ. 

ಆ ಎಲ್ಲ ವಿಚಾರಗಳ ಬಗ್ಗೆ ಉಪೇಂದ್ರ ಅವರು ಮಾ.11ರಂದು ಮಧ್ಯಾಹ್ನ 12.46ಕ್ಕೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ. ಆದರೆ ಯಾವುದಕ್ಕೂ ಅಭಿಮಾನಿಗಳು ಕಾದು ನೋಡಬೇಕು. ಸಿನಿಮಾ ಸುದ್ದಿಯನ್ನು ಬದಿಗಿಟ್ಟು ಪ್ರಜಾಕೀಯದ ಬಗ್ಗೆ ಏನಾದರೂ ಹೊಸ ಅಪ್​ಡೇಟ್​ ನೀಡಬಹುದಾ ಎಂಬ ಅನುಮಾನ ಕೂಡ ಒಂದು ಕಡೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News