ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಹಳ ವಿಭಿನ್ನವಾಗಿ ಗುರ್ತಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಉಪೇಂದ್ರ ನಿವಾಸದ ಮುಂದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ ಅವರು, ಚಿತ್ರರಂಗಕ್ಕೆ ಬಂದಾಗಿನಿಂದ ತಾವೆಂದೂ ಹುಟ್ಟುಹಬ್ಬ ಆಚರಿಸಿಕೊಂದಿಲ್ಲ. ಅಭಿಮಾನಿಗಳೇ ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಹಾಗಾಗಿ ಅದು ಅಭಿಮಾನಿಗಳ ದಿನ. ಅಷ್ಟೇ ಅಲ್ಲ ನನ್ನ ಹೊಸ ಪಕ್ಷ 'ಉತ್ತಮ ಪ್ರಜಾಕೀಯ ಪಕ್ಷ(ಯುಪಿಪಿ)'ದ ಜನ್ಮದಿನ ಕೂಡ ಹೌದು. ಇನ್ನು ಮುಂದೆ ಅಭಿಮಾನಿಗಳು ಉಪೇಂದ್ರ ಹುಟ್ಟುಹಬ್ಬವನ್ನು ಯುಪಿಪಿ ಹುಟ್ಟುಹಬ್ಬವಾಗಿ ಆಚರಿಸಬೇಕು ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಪ್ರಜಾಕೀಯದಲ್ಲಿ ಏಳು-ಬೀಳು ಅನ್ನೋದು ಇಲ್ಲ. ಯಾರೇ ನಂಬಿಕೆಯಿಟ್ಟು ಪಕ್ಷಕ್ಕೆ ಬಂದರೂ ಸ್ವಾಗತ. ಸತ್ಯಕ್ಕೆ ಎಂದೂ ಸೋಲು-ಗೆಲುವು ಎಂಬುದಿಲ್ಲ. ಹಾಗಾಗಿ ಪಕ್ಷಕ್ಕೆ ಬರುವವರೆಲ್ಲರೂ ಗೆಲುವು ಸಾಧಿಸಿದಂತೆಯೇ. ಇಂದಿನಿಂದಲೇ ಪಕ್ಷದ ಎಲ್ಲಾ ಕೆಲಸಗಳು ಆರಂಭವಾಗಲಿದೆ ಎಂದು ಉಪೇಂದ್ರ ಹೇಳಿದರು.