Ravina Tandon On Rasha Thadani Affair: ಸಲ್ಮಾನ್ ಖಾನ್ ಸೋದರಳಿಯನ ಜೊತೆ ಮಗಳ ಲವ್ವಿದವ್ವಿ ಕುರಿತು ರವೀನಾ ಸೆನ್ಸೆಶನಲ್ ಹೇಳಿಕೆ!

Ravina Tandon On Rasha Thadani: ರವೀನಾ ಟಂಡನ್ ಒಂದು ಕಾಲದಲ್ಲಿ ಬಿಟೌನ್ ಸೂಪರ್ ಸ್ಟಾರ್ ನಟಿ.  ಅನೇಕ ನಟರೊಂದಿಗೆ ಚಲನಚಿತ್ರಗಳನ್ನು ಮಾಡಿದ್ದಾರೆ, ಅವುಗಳಲ್ಲಿ ಹಲವು ಸೂಪರ್ಹಿಟ್ ಚಿತ್ರಗಳಾಗಿವೆ. ರವೀನಾಳ ಸೌಂದರ್ಯ ಅಂದು ಮಾತ್ರವಲ್ಲ ಇಂದಿಗೂ ಒಂದು ವಾಸ್ತವ. 

Written by - Nitin Tabib | Last Updated : Apr 24, 2024, 10:37 PM IST
  • ಫಿಲ್ಮಿಗ್ಯಾನ್ ಜೊತೆ ಮಾತನಾಡಿರುವ ರವೀನಾ ತನ್ನ ಮಗಳ ಸಂಬಂಧದ ಬಗ್ಗೆ ತುಂಬಾ ಪ್ರಾಮಾಣಿಕವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿದ್ದಾರೆ.
  • ಮಗಳು ಕೆರಿಯರ್ ಮಾಡುವ ಬದಲು ಯಾರನ್ನೂ ಪ್ರೀತಿಸುವುದು ಅವಳಿಗೆ ಇಷ್ಟವಿಲ್ಲ ಎಂಬುದು ರವೀನಾಳ ಮಾತಿನಿಂದ ಸ್ಪಷ್ಟವಾಗುತ್ತದೆ.
  • ರಾಶಾ ತನ್ನ ವೃತ್ತಿಜೀವನದೊಂದಿಗೆ ಆಟವಾಡುವುದನ್ನು ನಾನು ಬಯಸುವುದಿಲ್ಲ ಎಂದು ನಟಿ ಹೇಳಿದ್ದಾಳೆ.
Ravina Tandon On Rasha Thadani Affair: ಸಲ್ಮಾನ್ ಖಾನ್ ಸೋದರಳಿಯನ ಜೊತೆ ಮಗಳ ಲವ್ವಿದವ್ವಿ ಕುರಿತು ರವೀನಾ ಸೆನ್ಸೆಶನಲ್ ಹೇಳಿಕೆ! title=

Ravina Tandon On Rasha Affari With Arhaan Khan: ರವೀನಾ ಟಂಡನ್ ಒಂದು ಕಾಲದಲ್ಲಿ ಬಿಟೌನ್ ಸೂಪರ್ ಸ್ಟಾರ್ ನಟಿ.  ಅನೇಕ ನಟರೊಂದಿಗೆ ಚಲನಚಿತ್ರಗಳನ್ನು ಮಾಡಿದ್ದಾರೆ, ಅವುಗಳಲ್ಲಿ ಹಲವು ಸೂಪರ್ಹಿಟ್ ಚಿತ್ರಗಳಾಗಿವೆ. ರವೀನಾಳ ಸೌಂದರ್ಯ ಅಂದು ಮಾತ್ರವಲ್ಲ ಇಂದಿಗೂ ಒಂದು ವಾಸ್ತವ. ನಟಿಯ ಮಗಳ ಬಗ್ಗೆ ಹೇಳುವುದಾದರೆ, ರಾಶಾ ಥಡಾನಿ ಕೂಡ ಸೌಂದರ್ಯದ ವಿಷಯದಲ್ಲಿ ತಾಯಿಗಿಂತ ಕಡಿಮೆಯಿಲ್ಲ. ಸದ್ಯ ರಾಶಾ ಸಂಪೂರ್ಣವಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧಳಾಗಿದ್ದಾಳೆ. ಇತ್ತೀಚೆಗೆ, ರಾಶಾ ಮತ್ತು ಅರ್ಬಾಜ್ ಖಾನ್ ಅವರ ಮಗ ಅರ್ಹಾನ್ ಡೇಟಿಂಗ್ ಸುದ್ದಿ ಸಾಕಷ್ಟು ಹೆಡ್ಲೈನ್ ಸೃಷ್ಟಿಸಿತ್ತು. 

ರಾಶಾ ಮತ್ತು ಅರ್ಹಾನ್ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ, ನಂತರ ಅವರ ಡೇಟಿಂಗ್ ಸುದ್ದಿಗಳು ಹಬ್ಬಳು ಆರಂಭಿಸಿವೆ. ಇವರಿಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಕೂಡ ಹೇಳಲಾರಂಭಿಸಿದ್ದಾರೆ. ಆದರೆ, ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಬೆಂಕಿ ಇಲ್ಲದೆ ಹೊಗೆ ಕಾಣಿಸುವುದಿಲ್ಲ ಎಂಬ ಮಾತೂ ಹೇಳಲಾಗುತ್ತದೆ. ಇದೀಗ ಖುದ್ದು ರವೀನಾ ತನ್ನ ಮಗಳ ಹರಡುತ್ತಿರುವ ಈ ವದಂತಿಗಳ ಬಗ್ಗೆ ಹೇಳಿಕೆ ನೀಡಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ. 

ಇದನ್ನೂ ಓದಿ-"ನೋಡಲು ಕಪ್ಪಾಗಿದ್ದೀಯಾ, ಕಾಣಲು ದಪ್ಪಾಗಿದ್ದೀಯಾ..." ಬಾಡಿ ಶೇಮಿಂಗ್ಗೆ ಗುರಿಯಾದ ಈಕೆ ಇಂದು ಸೂಪರ್ಸ್ಟಾರ್ ನಟಿ!

ಫಿಲ್ಮಿಗ್ಯಾನ್ ಜೊತೆ ಮಾತನಾಡಿರುವ ರವೀನಾ ತನ್ನ ಮಗಳ ಸಂಬಂಧದ ಬಗ್ಗೆ ತುಂಬಾ ಪ್ರಾಮಾಣಿಕವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿದ್ದಾರೆ. ಮಗಳು ಕೆರಿಯರ್ ಮಾಡುವ ಬದಲು ಯಾರನ್ನೂ ಪ್ರೀತಿಸುವುದು ಅವಳಿಗೆ ಇಷ್ಟವಿಲ್ಲ ಎಂಬುದು ರವೀನಾಳ ಮಾತಿನಿಂದ ಸ್ಪಷ್ಟವಾಗುತ್ತದೆ. ರಾಶಾ ತನ್ನ ವೃತ್ತಿಜೀವನದೊಂದಿಗೆ ಆಟವಾಡುವುದನ್ನು ನಾನು ಬಯಸುವುದಿಲ್ಲ ಎಂದು ನಟಿ ಹೇಳಿದ್ದಾಳೆ.

ಇದನ್ನೂ ಓದಿ-Bollywood Actress: 'ತಂದೆಯ ವಯಸ್ಸಿನ ವ್ಯಕ್ತಿ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಕರೆದ, ಮತ್ತು..!'

ಈ ಕುರಿತು ಮಗಳಿಗೆ ಸಲಹೆ ನೀಡುತ್ತಾ ಮಾತನಾಯಿರುವ ರವೀನಾ, ಸದ್ಯಕ್ಕೆ ಓದು ಮತ್ತು ನಿಮ್ಮ ವೃತ್ತಿಯತ್ತ ಮಾತ್ರ ಗಮನಹರಿಸಿ ಎಂದು ಮಗಳಿಗೆ ಹೇಳಿದ್ದಾರೆ. ಯಾವುದೇ ಓರ್ವ ವ್ಯಕ್ತಿ  ಸ್ವಲ್ಪ ಪ್ರಾಯೋಗಿಕವಾಗಿರಬೇಕು. ಇದು ಸರಿಯಾದ ಸಮಯವಲ್ಲ. ಸರಿಯಾದ ಸಂಗಾತಿ ಆಯ್ಕೆ ಮಾಡುವ ಮೊದಲು ಒಬ್ಬರು ಸಾಕಷ್ಟು ಜನರನ್ನು ಭೇಟಿಯಾಗಬೇಕು. ಆಗ ಮಾತ್ರ ನೀವು ಮಿಸ್ಟರ್ ರೈಟ್ ಅನ್ನು ಆಯ್ಕೆ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಸಂಬಂಧದಲ್ಲಿ ಆತುರ ಸರಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News